Kannada ಉಪಹಾರ

RAGI RAVE DOSA ರಾಗಿ ರವೆ ದೋಸಾ

ಸಾಮಾನ್ಯವಾಗಿ ಮಧುಮೇಹಿಗಳಿಗಾಗಿ ಮಾಡುವ ದೋಸೆ. ತುಂಬಾ ಜನರ ಮನೆಗಳಲ್ಲಿ ಮಾಡಬಹುದು.

ಮಾಡುವ ವಿಧಾನ:-

1 ಲೋಟ ಚಿರೋಟಿ ರವೆ, 1 ಲೋಟ ರಾಗಿ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1/2 ಲೋಟ ಹುಳಿ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ ಸ್ವಲ್ಪ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ.

ಬೇಕಾದರೆ ಸ್ವಲ್ಪ ನೀರು ಸೇರಿಸಿ 10 ನಿಮಿಷ ಮುಚ್ಚಿಡಿ.

   

ಕಾದ ಕಾವಲಿಯ ಮೇಲೆ ನಿಧಾನವಾಗಿ ಹಾಕಿ ಎರಡು ಕಡೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿದರೆ, ರುಚಿಯಾದ, ಗರಿ ಗರಿಯಾದ ರಾಗಿ ರವೆ ದೋಸೆ ಸವಿಯಲು ಸಿದ್ಧ!

   

ಹಿಟ್ಟು ಆದಷ್ಟೂ ತೆಳ್ಳಗಿರಬೇಕು. ಆಗ ಮಾತ್ರ ನೀವು ತೆಳ್ಳಗೆ ದೋಸೆ ಮಾಡಲು ಸಾಧ್ಯ. ಪ್ರತಿ ಬಾರಿ ದೋಸೆ ಹಾಕುವಾಗ ಹಿಟ್ಟನ್ನು ಚೆನ್ನಾಗಿ ಕಲೆಸಿ ಹಾಕಿ. ಇಲ್ಲದಿದ್ದರೆ ರಾಗಿ ಹಿಟ್ಟು ಮತ್ತು ರವೆಯ ಗಟ್ಟಿಯಾದ ಭಾಗ ಹಾಗೇ ಉಳಿದು ಬಿಡುತ್ತದೆ.

ಧನ್ಯವಾದಗಳು

Leave a Reply

Your email address will not be published.