TOMATO PALAV ಟೋಮೆಟೋ ಪಲಾವ್
ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಟೊಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿ ರಸ ಸೋಸಿಡಿ.

ಕಾಯಿತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ಒಂದು ಲೋಟ ಕಾಯಿ ಹಾಲು ತೆಗೆದಿಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹಸಿ ಬಟಾಣಿ ಸ್ವಲ್ಪ ಬಿಡಿಸಿಡಿ.
ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಬಟಾಣಿ, ಪುದೀನಾ, ಒಂದು ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಅರ್ಧ ಚಮಚ ಗರಂ ಮಸಾಲ ಹಾಕಿ ಸ್ವಲ್ಪ ಬಾಡಿಸಿ. ನಂತರ ಬಾಸುಮತಿ ಅಕ್ಕಿ, 1 ಚಮಚ ಖಾರದ ಪುಡಿ, ರುಬ್ಬಿದ ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ. ನಂತರ ಕಾಯಿ ಹಾಲು ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ, ಟೋಮೇಟೋ ಪಲಾವ್ ಸಿದ್ಧ!

ಟೋಮೇಟೋ ರಸ ಮತ್ತು ಕಾಯಿ ಹಾಲು ಎರಡೂ ಸೇರಿಸಿ ಎರಡು ಲೋಟ ಆಗಬೇಕು. ಅಳತೆ ಮಾಡಿ ಹಾಕಿ.

ಧನ್ಯವಾದಗಳು 🙏🙏🙏
