Chutney ಹಬ್ಬದ ಅಡುಗೆಗಳು

SANKRANTI ELLINA CHUTNEY PUDI ಸಂಕ್ರಾಂತಿ ಎಳ್ಳಿನ ಚಟ್ನಿ ಪುಡಿ

SANKRANTI ELLINA CHUTNEY PUDI ಸಂಕ್ರಾಂತಿ ಎಳ್ಳಿನ ಚಟ್ನಿ ಪುಡಿ

ರೆಸಿಪಿ ಹೆಸರು ನೋಡಿ ಆಶ್ಚರ್ಯ ಆಯಿತಾ ಫ್ರೆಂಡ್ಸ್? ಈಗಷ್ಟೆ ಸಂಕ್ರಾಂತಿ ಹಬ್ಬ ಮುಗಿದಿದೆ. ಎಲ್ಲರ ಮನೆಯಲ್ಲೂ ಹಬ್ಬಕ್ಕೆ ಮಾಡಿದ ಸಿಹಿ ಎಳ್ಳು ಮಿಕ್ಕಿದ್ದರೆ ಆ ಎಳ್ಳಿನಿಂದ ಮಾಡುವ ಸುಲಭವಾಗಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ:-

ನಿಮಗೆ ಬೇಕಾದಷ್ಟು ಎಳ್ಳಿನಲ್ಲಿ ಬೆಲ್ಲದ ತುಂಡುಗಳನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ತೆಗೆದಿಡಿ.

ಖಾರಾ ಬೇಕಾದಷ್ಟು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಡಿ.

ಒಂದು ಇಂಚು ಹುಣಸೆ ಹಣ್ಣು, ಕಡಲೆ ಬೀಜದ ಗಾತ್ರದ ಇಂಗು ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತರಿ ತಯಾರಾಗಿ ಮಿಕ್ಸಿಯಲ್ಲಿ ಪುಡಿ ಮಾಡಿ ನಿಮಗೆ ಬೇಕಾದಾಗ ಉಪಯೋಗಿಸಬಹುದು. ಇದರಲ್ಲಿ ಎಲ್ಲಾ ಸಾಮಗ್ರಿಗಳು ನಾವು ಚಟ್ನಿ ಪುಡಿಗೆ ಹಾಕುವ ಸಾಮಗ್ರಿಗಳು. ಹಾಗಾಗಿ ರುಚಿಯಾದ ಚಟ್ನಿ ಪುಡಿ ಮಾಡಬಹುದು. ನಿಮಗೆ ಚಟ್ನಿ ಪುಡಿಗೆ ಬೆಲ್ಲ ಹಾಕುವ ಅಭ್ಯಾಸ ಇದ್ದರೆ ಸ್ವಲ್ಪ ಬೆಲ್ಲದ ತುಂಡುಗಳನ್ನು ಹಾಗೆ ಬಿಟ್ಟು ಪುಡಿ ಮಾಡಬಹುದು.

ಇದೇ ಪುಡಿಗೆ ಉಪ್ಪು, ಹುಣಸೆ ಹಣ್ಣು ಹಾಕದೆ ಪುಡಿ ಮಾಡಿದರೆ ದಿಢೀರ್ ಎಣ್ಣೆ ಗಾಯಿ, ಪಲ್ಯ ಮಾಡಬಹುದು. ನಾನು ಕ್ಯಾಪ್ಸಿಕಂ ಮತ್ತು ಆಲೂಗೆಡ್ಡೆ ಹಾಕಿ ಎಣ್ಣೆ ಗಾಯಿ ಮಾಡಿದ್ದೇನೆ.

ಧನ್ಯವಾದಗಳು 🙏🙏🙏

Leave a Reply

Your email address will not be published.