RING SAMOSA ರಿಂಗ್ ಸಮೋಸಾ
ಸಮೋಸಾ ಎಲ್ಲರಿಗೂ ಇಷ್ಟವಾಗುವ ತಿನಿಸು. ಸಾಧಾರಣವಾಗಿ ಮಾಡುವ ಆಕಾರದಲ್ಲಿ ಅಲ್ಲದೆ ಹೊಸ ರೂಪದ ಸಮೋಸ ಮಾಡುವ ರೆಸಿಪಿ ಇಲ್ಲಿದೆ:-
ಮಾಡುವ ವಿಧಾನ :-
ಮೈದಾ ಹಿಟ್ಟಿಗೆ ಸ್ವಲ್ಪ ಓಂ ಕಾಳು, ಒಂದು ಚಮಚ ಎಣ್ಣೆ, ಸ್ವಲ್ಪ ಉಪ್ಪು ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಡಿ.

ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಒಂದು ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ ಕಾಯಿ ಪೇಸ್ಟ್ ಮಾಡಿಡಿ.

ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಜೀರಿಗೆ, ಶುಂಠಿ ತುರಿ, ಚಿಟಿಕೆ ಅರಿಶಿನ, ಹಸಿ ಮೆಣಸಿನಕಾಯಿ ಪೇಸ್ಟ್, ಅರ್ಧ ಚಮಚ ಖಾರದ ಪುಡಿ, ಚಾಟ್ ಮಸಾಲಾ, ಆಮ್ ಚೂರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಬಾಡಿಸಿ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಸೇರಿಸಿ ಒಲೆಯಿಂದ ಕೆಳಗಿಳಿಸಿ.

ಎರಡು ಚಮಚ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಡಿ.
ಪೂರಿ ಹಿಟ್ಟು ಮತ್ತೊಂದು ಸಲ ನಾದಿ, ತೆಳ್ಳಗೆ ಲಟ್ಟಿಸಿ ಚೌಕಾಕಾರವಾಗಿ ಕತ್ತರಿಸಿ, ತೆಗೆದ ತುದಿಗಳನ್ನು ಕೊನೆಯಲ್ಲಿ ಸಮೋಸಗೆ ಅಂಟಿಸಲು ತೆಗೆದಿಡಿ. ಒಂದು ಕೊನೆಯಲ್ಲಿ ಆಲೂಗಡ್ಡೆ ಮಿಶ್ರಣ ಉದ್ದಕ್ಕೂ ಹರಡಿ, ಗಟ್ಟಿಯಾಗಿ ಅರ್ಧ ಭಾಗದವರೆಗೆ ಸುತ್ತಿ, ಉಳಿದ ಭಾಗದಲ್ಲಿ ಅಲ್ಲಲ್ಲಿ ಚಾಕುವಿನಿಂದ ಎಚ್ಚರಿಕೆಯಿಂದ ಕತ್ತರಿಸಿ, ಸಂಪೂರ್ಣವಾಗಿ ಸುತ್ತಿ.


ಕೊನೆಗಳನ್ನು ಕತ್ತರಿಸಿ ಎರಡೂ ತುದಿಗಳಿಗೆ ಸ್ವಲ್ಪ ಕಲೆಸಿದ ಮೈದಾ ಹಿಟ್ಟು ಅಂಟಿಸಿ ತುದಿಗಳನ್ನು ಸೇರಿಸಿ, ಮೇಲೆ ತೆಗೆದಿಟ್ಟ ತುಂಡು ಅಂಟಿಸಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ನಿಮ್ಮ ಇಷ್ಟದ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.


ಧನ್ಯವಾದಗಳು 🙏🙏🙏
