TOMATO SOUP ಟೋಮೆಟೋ ಸೂಪ್
ಚುಮು ಚುಮು ಚಳಿಗೆ ಬಿಸಿ ಬಿಸಿ ಸೂಪ್ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಅದರಲ್ಲೂ ಟೋಮೆಟೋ ಸೂಪ್ ಎಲ್ಲರ ಫೇವರೈಟ್! ಮಾಡುವುದು ಸುಲಭ ಕೂಡ ! ರುಬ್ಬುವ ಗೋಜು ಕೂಡ ಇಲ್ಲ!
ಮಾಡುವ ವಿಧಾನ:-
4 ಟೋಮೆಟೋ ಸಣ್ಣಗೆ ಹೆಚ್ಚಿಡಿ. ಒಂದು ಇಂಚು ಶುಂಠಿ, ನಾಲ್ಕು ಎಸಳು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ/ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಟೋಮೆಟೋ ಪೂರ್ತಿಯಾಗಿ ಮೆತ್ತಗೆ ಆಗುವವರೆಗೆ ಬೇಯಿಸಿ. ಸ್ವಲ್ಪ ನೀರು ಹಾಕಿ ಕುದಿಸಿ ಒಂದು ಜಾಲರಿಯಲ್ಲಿ ಶೋಧಿಸಿಕೊಳ್ಳಿ.



ನಂತರ ಮತ್ತೆ ಬಾಣಲೆಗೆ ಹಾಕಿ ಕುದಿಯಲು ಇಡಿ. ಒಂದು ಚಮಚ ಕಾರ್ನ್ ಫ್ಲೋರ್ ಅನ್ನು ಸ್ವಲ್ಪ ನೀರಿನಲ್ಲಿ ಕದಡಿ ಹಾಕಿ ಚೆನ್ನಾಗಿ ಕಲೆಸಿ. ರುಚಿಗೆ ತಕ್ಕಷ್ಟು ಉಪ್ಪು, 1/2 ಚಮಚ ಸಕ್ಕರೆ, 1 ಚಮಚ ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ ಬಿಸಿಯಾಗಿರುವಾಗ ಸವಿಯಿರಿ.

ನಾನು ಬ್ರೆಡ್ ತುಂಡುಗಳನ್ನು ಎಣ್ಣೆಯಲ್ಲಿ ಕರಿಯುವ ಬದಲು Microwave ನಲ್ಲಿ ಎರಡು ನಿಮಿಷ ಬಿಸಿ ಮಾಡಿ ತಣ್ಣಗಾದ ಮೇಲೆ ಗಟ್ಟಿಯಾದ ನಂತರ ಹಾಕಿದ್ದೇನೆ.

ಧನ್ಯವಾದಗಳು 🙏🙏🙏
