LEMON CORIANDER SOUP ಲೆಮನ್ ಕೊರಿಯಂಡರ್ ಸೂಪ್
ಆರೋಗ್ಯಕರವಾದ, ರುಚಿಕರವಾದ, ಸುಲಭವಾಗಿ ಮಾಡಬಹುದಾದ ಸೂಪ್ ರೆಸಿಪಿ ಇಲ್ಲಿದೆ:-
ನಿಮ್ಮ ಇಷ್ಟದ ತರಕಾರಿ ಸ್ವಲ್ಪ ಸ್ವಲ್ಪ ಸಣ್ಣಗೆ ಹೆಚ್ಚಿಟ್ಟು ಕೊಳ್ಳಿ.
ಒಂದು ಇಂಚು ಶುಂಠಿ, ನಾಲ್ಕು ಎಸಳು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ.
ಕೊತ್ತಂಬರಿ ಸೊಪ್ಪು ಒಂದು ಚಿಕ್ಕ ಕಟ್ಟು ಸಣ್ಣಗೆ ಹೆಚ್ಚಿಡಿ.

ಒಂದು ನಿಂಬೆಹಣ್ಣು ರಸ ತೆಗೆದಿಡಿ.

ಬಾಣಲೆಯಲ್ಲಿ ಒಂದು ಚಿಕ್ಕ ಚಮಚ ಬೆಣ್ಣೆ / ಎಣ್ಣೆ ಹಾಕಿ ಬೆಳ್ಳುಳ್ಳಿ ಶುಂಠಿ ಹಾಕಿ ಬಾಡಿಸಿ, ನಂತರ ತರಕಾರಿಗಳನ್ನು ಹಾಕಿ ಸ್ವಲ್ಪ ಬಾಡಿಸಿ ನೀರು ಹಾಕಿ ತಟ್ಟೆ ಮುಚ್ಚಿ ಬೇಯಿಸಿ.
ಒಂದು ಚಿಕ್ಕ ಚಮಚ ಕಾರ್ನ್ ಫ್ಲೋರ್ ಅನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕಲೆಸಿ ಕುದಿಯುವ ನೀರಿಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಿಕ್ಕ ಚಮಚ ಕರಿ ಮೆಣಸಿನ ಪುಡಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿ ಕೊನೆಯಲ್ಲಿ ನಿಂಬೆ ರಸ ಸೇರಿಸಿ ಬಿಸಿಯಾಗಿರುವಾಗಲೆ ಸುಟ್ಟ ಹಪ್ಪಳದ ಜೊತೆಗೆ ಸವಿಯಿರಿ.

ಧನ್ಯವಾದಗಳು 🙏🙏🙏
