Showing 64 Result(s)
ಸಾಂಬಾರು ಮತ್ತು ಪಲ್ಯಗಳು

DAHI BENDI ದಹಿ ಬೆಂಡಿ

DAHI BENDI ದಹಿ ಬೆಂಡಿ ಬೆಂಡೆಕಾಯಿಯಿಂದ ಮಾಡಬಹುದಾದ ರುಚಿಯಾದ, ಸುಲಭವಾದ ರೆಸಿಪಿ ಇಲ್ಲಿದೆ. ರುಬ್ಬುವ, ಪುಡಿ ಮಾಡುವ ಗೋಜಿಲ್ಲ. ಫಟಾಫಟ್ ಮಾಡಬಹುದು! ಮಾಡುವ ವಿಧಾನ:- ಎಳೆಯದಾದ ಅರ್ಧ ಕೇಜಿ ಬೆಂಡೆಕಾಯಿ ಒಂದು ಇಂಚು ಅಳತೆಗೆ ಹೆಚ್ಚಿ ಹುರಿದಿಡಿ / ಕಾದ ಎಣ್ಣೆಯಲ್ಲಿ ಕರಿದಿಡಿ. ನಾನು ಎಣ್ಣೆಯಲ್ಲಿ ಕರಿದು ಹಾಕಿದ್ದೇನೆ. ತೀರ ಕೆಂಪಗೆ ಗರಿ ಗರಿಯಾಗಿ ಮಾಡದೆ ಬೆಂಡೆಕಾಯಿ ಸ್ವಲ್ಪ ಬೆಂದ ತಕ್ಷಣ ತೆಗೆಯಬೇಕು. ಒಂದು ಈರುಳ್ಳಿ, ಸ್ವಲ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಅರ್ಧ ಬಟ್ಟಲು ತಾಜಾ …

ಖಾರ ತಿನಿಸುಗಳು ಚಾಟ್ಸ್

GARI GARI BATANI ಗರಿ ಗರಿ ಬಟಾಣಿ

GARI GARI BATANI ಗರಿ ಗರಿ ಬಟಾಣಿ ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಗರಿ ಗರಿಯಾಗಿ ತಿನ್ನಲು ಸುಲಭವಾಗಿ ಮಾಡಬಹುದಾದ ಗರಿ ಗರಿ ಬಟಾಣಿ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಿಮಗೆ ಬೇಕಾದಷ್ಟು ಒಣಗಿದ ಬಟಾಣಿ ಆರರಿಂದ ಎಂಟು ಗಂಟೆ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ನೀರು ಹಾಕಿ ನೆಂದ ಬಟಾಣಿ ಹಾಕಿ ಬಟಾಣಿ ಸ್ವಲ ಮೆತ್ತಗೆ ಆಗುವವರೆಗೆ ಬೇಯಿಸಿ. ಹೆಚ್ಚು ಬೆಂದರೆ ಸಿಪ್ಪೆ ಕಾಳು ಬೇರೆ ಬೇರೆ ಆಗುತ್ತದೆ. ಹಾಗಾಗಿ ಸ್ವಲ್ಪ …

ಉಪಹಾರ ಸಾಂಬಾರು ಮತ್ತು ಪಲ್ಯಗಳು

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ

BEETROOT NEERU DOSE & HIREKAYI CHUTNEY ಬೀಟ್ ರೂಟ್ ನೀರು ದೋಸೆ & ಹೀರೇಕಾಯಿ ಚಟ್ನಿ ಬೀಟ್ ರೂಟ್ ನೀರು ದೋಸೆ ಮಾಡುವ ವಿಧಾನ:- 2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1/2 ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೂ …

ಸಿಹಿ ತಿನಿಸುಗಳು

SUGAR FREE BESAN LADDU ಷುಗರ್ ಫ್ರೀ ಬೇಸನ್ ಲಡ್ಡು

SUGAR FREE BESAN LADDU ಷುಗರ್ ಫ್ರೀ ಬೇಸನ್ ಲಡ್ಡು ಬೇಸನ್ ಲಡ್ಡು ಸುಲಭವಾಗಿ ಮಾಡಬಹುದಾದ ಜನಪ್ರಿಯ ಸಿಹಿ. ಸಾಧಾರಣವಾಗಿ ಸಕ್ಕರೆ ಪುಡಿ ಹಾಕಿ ಮಾಡುವುದು. ಹಾಗಾಗಿ ಮಧುಮೇಹಿಗಳು ಇದನ್ನು ತಿನ್ನಲು ಆಗುವುದಿಲ್ಲ. ಸಕ್ಕರೆ ಬದಲು ಷುಗರ್ ಫ್ರೀ ಹಾಕಿ ರುಚಿಯಾದ ಬೇಸನ್ ಲಡ್ಡು ಮಾಡುವ ವಿಧಾನ ಇಲ್ಲಿದೆ :- ಒಂದು ಅಳತೆ ಮನೆಯಲ್ಲಿ ಬೀಸಿಸಿದ ಕಡಲೆ ಹಿಟ್ಟು ಹತ್ತರಿಂದ ಹದಿನೈದು ನಿಮಿಷ ಕಡಿಮೆ ಉರಿಯಲ್ಲಿ ಹಸಿ ವಾಸನೆ ಹೋಗಿ ಘಮ್ ಎಂದು ಸುವಾಸನೆ ಬರುವರೆಗೆ ಹುರಿಡಿದಿ. …

ಖಾರ ತಿನಿಸುಗಳು

AVALAKKI CHEESE CUTLET ಅವಲಕ್ಕಿ ಚೀಸ್ ಕಟ್ಲೆಟ್

AVALAKKI CHEESE CUTLET ಅವಲಕ್ಕಿ ಚೀಸ್ ಕಟ್ಲೆಟ್ ಸಂಜೆ ಶಾಲೆಯಿಂದ ಮಕ್ಕಳಿಗೆ, ಆಫೀಸಿನಿಂದ ಮರಳಿ ಬಂದವರಿಗೆ ಸುಲಭವಾಗಿ ಮಾಡಿ ಕೊಡಬಹುದಾದ ರೆಸಿಪಿ ಇಲ್ಲಿದೆ! ಸುಲಭ, ರುಚಿಕರ! ಮಾಡುವ ವಿಧಾನ:- ಒಂದು ಕಪ್ ಗಟ್ಟಿ ಅವಲಕ್ಕಿ ಮಿಕ್ಷ್ಸಿಯಲ್ಲಿ ತರಿ ತಯಾರಾಗಿ ಪುಡಿ ಮಾಡಿ ಎರಡು ಮೂರು ಸಲ ಚೆನ್ನಾಗಿ ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ. ಎರಡು ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಅವಲಕ್ಕಿ …

Gojju

NIMBE HANNINA GOJJU ನಿಂಬೆ ಹಣ್ಣಿನ ಗೊಜ್ಜು

NIMBE HANNINA GOJJU ನಿಂಬೆ ಹಣ್ಣಿನ ಗೊಜ್ಜು ಈ ಚಳಿಗಾಲದಲ್ಲಿ ತುಂಬಾ ಚೆನ್ನಾಗಿರುವ ನಿಂಬೆಹಣ್ಣು ಸಿಗುತ್ತದೆ. ಬೆಲೆ ಕೂಡ ಕಡಿಮೆ. ಹಾಗಾದರೆ ನಿಂಬೆಹಣ್ಣಿನ ಬಾಯಲ್ಲಿ ನೀರೂರಿಸುವ ರುಚಿಯಾದ ಗೊಜ್ಜು ಮಾಡೋಣವೇ? ಮಾಡುವ ವಿಧಾನ:- ಹದಿನೈದರಿಂದ ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಪುಡಿ ಮಾಡಿಡಿ. ಖಾರಾ ಹೆಚ್ಚು ಬೇಕಾದವರು ಬ್ಯಾಡಗಿ ಮತ್ತು ಕೆಂಪು ಮೆಣಸಿನಕಾಯಿ ಎರಡೂ ಸ್ವಲ್ಪ ಸ್ವಲ ಹಾಕಬಹುದು. ಕಾಲು ಬಟ್ಟಲು ಒಣ ಕೊಬ್ಬರಿ ತುರಿದಿಡಿ. ಒಂದು ಟೀ ಚಮಚ ಮೆಂತ್ಯ …

Chutney

KADALE BEEJADA CHUTNEY PUDI ಕಡಲೆ ಬೀಜದ ಚಟ್ನಿ ಪುಡಿ

KADALE BEEJADA CHUTNEY PUDI ಕಡಲೆ ಬೀಜದ ಚಟ್ನಿ ಪುಡಿ ಚಟ್ನಿ ಪುಡಿ ಮನೆಯಲ್ಲಿದ್ದರೆ ಗೃಹಿಣಿ ಚಟ್ನಿ ಮಾಡಲು ಸಮಯ ಕಡಿಮೆ ಇದ್ದಾಗ ಹೇಗೋ ನಿಭಾಯಿಸಬಹುದು. ನಮ್ಮ ಮನೆಯಲ್ಲಿ ಕಡಲೆ ಬೀಜದ ಚಟ್ನಿ ಪುಡಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1/4 ಕೇಜಿ ಕಡಲೆ ಬೀಜ ಗರಿ ಗರಿಯಾಗುವಂತೆ ಹುರಿದಿಡಿ. ನಾನು Microwave ನಲ್ಲಿ ನಾಲ್ಕು ನಿಮಿಷ ಬಿಸಿ ಮಾಡಿದ್ದೇನೆ. ಎಲ್ಲಾ ಕಾಳುಗಳು ಒಂದೇ ಸಮವಾಗಿ ಗರಿ ಗರಿಯಾಗಿ ಆಗಿದೆ. ಹದಿನೈದರಿಂದ ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ …

ಉಪಹಾರ

PALAK KICHDI ಪಾಲಾಕ್ ಕಿಚಡಿ

PALAK KICHDI ಪಾಲಾಕ್ ಕಿಚಡಿ ಪಾಲಾಕ್ ಸೊಪ್ಪು ಹಾಕಿ ಮಾಡುವ ರುಚಿಯಾದ, ಆರೋಗ್ಯಕರವಾದ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ:- ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ, ತೊಳೆದು ಕುದಿಯುವ ನೀರಿನಲ್ಲಿ ತಟ್ಟೆ ಮುಚ್ಚದೆ ಮೂರ್ನಾಲ್ಕು ನಿಮಿಷ ಬೇಯಿಸಿ, ತಕ್ಷಣ ತಣ್ಣೀರಿನಲ್ಲಿ ಹಾಕಿ,( ಹೀಗೆ ಮಾಡುವುದರಿಂದ ಸೊಪ್ಪಿನ ಬಣ್ಣ ಬದಲಾಗುವುದಿಲ್ಲ) ನೀರು ಸೋರಿ ಹಾಕಿ ರುಬ್ಬಿಡಿ. 1 ಅಳತೆ ಬಾಸುಮತಿ ಅಕ್ಕಿ, 1/2 ಅಳತೆ ಹೆಸರುಬೇಳೆ ತೊಳೆದು, 4 ಅಳತೆ ನೀರು ಹಾಕಿ ಬೇಯಿಸಿಡಿ. 1 ಈರುಳ್ಳಿ, …

ಸಿಹಿ ತಿನಿಸುಗಳು

CARROT KHEER ಕ್ಯಾರೆಟ್ ಖೀರ್

CARROT KHEER ಕ್ಯಾರೆಟ್ ಖೀರ್ ಕ್ಯಾರೆಟ್ಟಿನ ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪಾಯಸ ಮಾಡುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- ನಾಲ್ಕು ಕ್ಯಾರೆಟ್ ಸಿಪ್ಪೆ ತೆಗೆದು ಹೆಚ್ಚಿ ಮೃದುವಾಗುವವರೆಗೆ ಬೇಯಿಸಿಡಿ. ಎರಡು ಚಮಚ ಕಾಯಿ ತುರಿದಿಡಿ. ಅರ್ಧ ಲೀಟರ್ ಕುದಿಸಿಡಿ. ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ತುಪ್ಪದಲ್ಲಿ ಹುರಿಡಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಬೇಯಿಸಿದ ಕ್ಯಾರೆಟ್ ಗೆ ಕಾಯಿ ತುರಿ ಸೇರಿಸಿ ರುಬ್ಬಿ, ಕಾಯಿಸಿದ ಹಾಲು ಸೇರಿಸಿ, ದಪ್ಪ ತಳದ ಪಾತ್ರೆಯಲ್ಲಿ ಕುದಿಸಿ. ನಂತರ ನಾಲ್ಕು ಚಮಚ …

ಸಿಹಿ ತಿನಿಸುಗಳು

CARROT LADDU ಕ್ಯಾರೆಟ್ ಲಡ್ಡು

CARROT LADDU ಕ್ಯಾರೆಟ್ ಲಡ್ಡು ಕ್ಯಾರೆಟ್ ಆರೋಗ್ಯಕರ, ರುಚಿ ಕರ ತರಕಾರಿ. ಇದರಿಂದ ಸುಲಭವಾಗಿ ಮಾಡಬಹುದಾದ, ರುಚಿಯಾದ ಲಡ್ಡುವಿನ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಾಲ್ಕು ಕ್ಯಾರೆಟ್ ತುರಿದಿಡಿ. ಅರ್ಧ ಕಪ್ ಕಾಯಿ ತುರಿದಿಡಿ. ಕಾಲು ಕಪ್ ಗೋಡಂಬಿ ಬಾದಾಮಿ ಸಣ್ಣಗೆ ಹೆಚ್ಚಿಡಿ. ಅರ್ಧ ಕಪ್ ಸಕ್ಕರೆಗೆ ಎರಡು ಏಲಕ್ಕಿ ಹಾಕಿ ಪುಡಿ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ, ಕ್ಯಾರೆಟ್ ತುರಿ ಮತ್ತು ಕಾಯಿ ತುರಿ ಹಾಕಿ ಅದರಲ್ಲಿರುವ ನೀರಿನಂಶ ಹೋಗುವವರೆಗೆ …