KADALE BEEJADA CHUTNEY PUDI ಕಡಲೆ ಬೀಜದ ಚಟ್ನಿ ಪುಡಿ
ಚಟ್ನಿ ಪುಡಿ ಮನೆಯಲ್ಲಿದ್ದರೆ ಗೃಹಿಣಿ ಚಟ್ನಿ ಮಾಡಲು ಸಮಯ ಕಡಿಮೆ ಇದ್ದಾಗ ಹೇಗೋ ನಿಭಾಯಿಸಬಹುದು. ನಮ್ಮ ಮನೆಯಲ್ಲಿ ಕಡಲೆ ಬೀಜದ ಚಟ್ನಿ ಪುಡಿ ಮಾಡುವ ವಿಧಾನ ಇಲ್ಲಿದೆ!
ಮಾಡುವ ವಿಧಾನ:-
1/4 ಕೇಜಿ ಕಡಲೆ ಬೀಜ ಗರಿ ಗರಿಯಾಗುವಂತೆ ಹುರಿದಿಡಿ. ನಾನು Microwave ನಲ್ಲಿ ನಾಲ್ಕು ನಿಮಿಷ ಬಿಸಿ ಮಾಡಿದ್ದೇನೆ. ಎಲ್ಲಾ ಕಾಳುಗಳು ಒಂದೇ ಸಮವಾಗಿ ಗರಿ ಗರಿಯಾಗಿ ಆಗಿದೆ.

ಹದಿನೈದರಿಂದ ಇಪ್ಪತ್ತು ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಡಿ. ನಾನು ಬ್ಯಾಡಗಿ ಮೆಣಸಿನಕಾಯಿ ಮಾತ್ರ ಹಾಕಿ ಮಾಡಿದ್ದೇನೆ. ಖಾರಾ ಹೆಚ್ಚು ಬೇಕಾದರೆ ಕೆಂಪು ಮೆಣಸಿನಕಾಯಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಎರಡೂ ಸ್ವಲ್ಪ ಸ್ವಲ ಹಾಕಬಹುದು.
ಹುಣಸೆ ಹಣ್ಣು ಒಂದು ಎಸಳು ಸ್ವಚ್ಛ ಮಾಡಿ ಬಿಸಿ ಮಾಡಿಡಿ.
1 ಟೀ ಚಮಚ ಇಂಗು ಪುಡಿ ಬಿಸಿ ಮಾಡಿಡಿ.
ಮೊದಲು ಹುಣಿಸೆಹಣ್ಣು ಬಿಸಿ ಮಾಡಿ ನಂತರ ಉಳಿದ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪುಡಿ ಮಾಡಿ. ಕೊನೆಯಲ್ಲಿ ಎಲ್ಲವನ್ನೂ ಕೈಯಿಂದ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಉಪಯೋಗಿಸಬಹುದು.

ನಮ್ಮ ಮನೆಯಲ್ಲಿ ಚಟ್ನಿ ಪುಡಿಗೆ ಬೆಲ್ಲ, ಬೆಳ್ಳುಳ್ಳಿ ಹಾಕುವುದಿಲ್ಲ. ನಾವು ಹುಳಿ ಇಷ್ಟ ಪಡುವುದರಿಂದ ಚೂರು ಹುಣಿಸೆ ಹಣ್ಣು ಹಾಕಿದ್ದೇನೆ. ಮೆಣಸಿನ ಕಾಯಿ ಹುರಿದು ಹಾಕುವುದರಿಂದ ರುಚಿ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು 🙏🙏🙏
