ಸಾಂಬಾರು ಮತ್ತು ಪಲ್ಯಗಳು

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ

ದಪ್ಪ ಮೆಣಸಿನಕಾಯಿಯ ರುಚಿಯಾದ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ :-

ಸ್ಟಫ್ಫಿಂಗ್ ಮಾಡಲು:-

2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಬಾಡಿಸಿ. ಅರ್ಧ ಚಮಚ ಖಾರದ ಪುಡಿ ಬೇಯಿಸಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನಿಂಬೆ ಹಣ್ಣಿನ ರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಒಲೆಯಿಂದ ಕೆಳಗಿಳಿಸಿ.

ಆದಷ್ಟೂ ಪುಟ್ಟ ಪುಟ್ಟ ಕ್ಯಾಪ್ಸಿಕಮ್ ಆರಿಸಿಕೊಂಡು ತೊಳೆದು ಮೇಲಿನ ತೊಟ್ಟು ಎಚ್ಚರಿಕೆಯಿಂದ ತೆಗೆದು ಆಲೂ ಮಿಶ್ರಣ ತುಂಬಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಈ ಕ್ಯಾಪ್ಸಿಕಮ್ ಗಳನ್ನು ಜೋಡಿಸಿ ಎಚ್ಚರಿಕೆಯಿಂದ ತಿರುಗಿಸುತ್ತಾ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ ತೆಗೆದಿಡಿ.

ಗ್ರೇವಿ ಮಾಡಲು:-

1 ಈರುಳ್ಳಿ 2 ಟೋಮೇಟೋ ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಬಾಡಿಸಿ ಹತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಅರಿಷಿಣ, ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು, 1 ಚಮಚ ಖಾರಾದ ಪುಡಿ, 1/2 ಚಮಚ ಗರಂ ಮಸಾಲ ಹಾಕಿ ಬಾಡಿಸಿ ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಮಿಶ್ರಣದಿಂದ ಎಣ್ಣೆ ಹೊರ ಬರುವವರೆಗೆ ಬಿಸಿ ಮಾಡಿ. ಕೊನೆಯಲ್ಲಿ ಆಲೂ ತುಂಬಿದ ಕ್ಯಾಪ್ಸಿಕಮ್, 2 ಚಮಚ ತಾಜಾ ಕೆನೆ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ ಬಾಯಲ್ಲಿ ನೀರೂರಿಸುವ ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.