Kannada Tindi Tinisu ಖಾರ ತಿನಿಸುಗಳು

TIRUPATHI VADE ತಿರುಪತಿ ವಡೆ

ತಿರುಪತಿ ಹಿಂದೂಗಳ ಪ್ರಸಿದ್ಧ ಪುಣ್ಯ ಕ್ಷೇತ್ರ, ಅದು ಕಲಿ ಯುಗ ದೈವ ಶ್ರೀನಿವಾಸ ನೆಲೆ ನಿಂತ ಕ್ಷೇತ್ರ, ಶ್ರೀನಿವಾಸನಿಗೆ ಬಹಳ ಪ್ರಿಯವಾದದ್ದು ತಿರುಪತಿ ಲಡ್ಡು ಮತ್ತು ತಿರುಪತಿ ವಡೆ.

ತಿರುಪತಿ ವಡೆ ಮಾಡುವ ವಿಧಾನ: –

   

1ಬಟ್ಟಲು ಉದ್ದಿನ ಕಾಳನ್ನು (ಸಿಪ್ಪೆ ಸಹಿತ) ತೊಳೆದು 4 ಘಂಟೆ ನೆನೆಸಿ, ಆದಷ್ಟು ನೀರು ಸೇರಿಸದೆ ಗಟ್ಟಿಯಾಗಿ (ಕಡಲೇ ಬೇಳೆ ವಡೆಯಂತೆ), ರುಬ್ಬಿ ಇಟ್ಟು ಕೊಳ್ಳಿ, 2 ಚಮಚ ಜೀರಿಗೆ, 2 ಚಮಚ ಮೆಣಸು ಹಸಿಯಾಗಿಯೇ ತರಿ ತರಿಯಾಗಿ ಪುಡಿ ಮಾಡಿ, ರುಬ್ಬಿದ ಮಿಶ್ರಣಕ್ಕೆ ಸೇರಿಸಿ ಚಿಟಿಕೆ ಇಂಗು, ಉಪ್ಪು ಹಾಕಿ ಕಲೆಸಿ. ಬಾಳೆ ಎಲೆ ಅಥವಾ plastic sheetಗೆ ಎಣ್ಣೆ ಸವರಿ, ಸ್ವಲ್ಪ ದಪ್ಪವಾಗಿ ಕಟ್ಟಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ, ನೀವು ಗಮನಿಸಿರಬಹುದು.

   

ತಿರುಪತಿಯ ವಡೆ ಸ್ವಲ್ಪ ಗಟ್ಟಿ ಮತ್ತು ದಪ್ಪ ಇರುತ್ತದೆ. ಈ ರೀತಿಯಲ್ಲಿ ಮಾಡಿದ ವಡೆ ಸ್ವಲ್ಪ ದಪ್ಪ ಹಾಗೂ ಮೆತ್ತಗೆ ಇರುತ್ತದೆ.

 

   

ಬೆಂಗಳೂರಿನ ಮಹಾ ಲಕ್ಷಿ ಲೇ ಔಟಿನ ಪುರಾತನ ಶ್ರೀನಿವಾಸನ ದೇವಾಲಯದಲ್ಲಿ ಗರಿ ಗರಿಯಾದ ವಡೆ ಸಿಗುತ್ತದೆ, ಉದ್ದಿನ ಕಾಳನ್ನು ಕಡಿಮೆ ನೀರು ಹಾಕಿ ನುಣ್ಣಗೆ ರುಬ್ಬಿ, ತರಿ ತರಿಯಾಗಿ ಪುಡಿ ಮಾಡಿದ ಮೆಣಸು, ಜೀರಿಗೆ, ಸ್ವಲ್ಪ ಹಿಂಗು, ಉಪ್ಪು ಹಾಕಿ, ಕಾದ ಎಣ್ಣೆ 2 ಚಮಚ, ಅದಕ್ಕೆ ಹಿಡಿಸುವಷ್ಟು ಅಕ್ಕಿ ಹಿಟ್ಟು ಹಾಕಿ ನಿಪ್ಪಟ್ಟಿನ ಹದಕ್ಕೆ ಕಲೆಸಿ, ತೆಳ್ಳಗೆ ಲಟ್ಟಿಸಿ ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿ (ಹೀಗೆ ಮಾಡುವುದರಿಂದ ವಡೆ ಉಬ್ಬುವುದಿಲ್ಲ) ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ, ಈ ರೀತಿ ಮಾಡಿದ ವಡೆ ಒಂದು ವಾರ ಗರಿ ಗರಿಯಾಗಿ ಇರುತ್ತದೆ.

   

ಪ್ರವಾಸಗಳಿಗೆ ಹೋದಾಗ ತುಂಬಾ ಚೆನ್ನಾಗಿರುತ್ತದೆ, ಆ ಶ್ರೀನಿವಾಸನ ದಯೆ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲೆಂಬ ಹಾರೈಕೆಯೊಂದಿಗೆ.

ಧನ್ಯವಾದಗಳು.

Leave a Reply

Your email address will not be published.