ಚೀಸ್ ಮಕ್ಕಳು ಮತ್ತು ದೊಡ್ಡವರು ಇಷ್ಟ ಪಟ್ಟು ತಿನ್ನುವ ಹಾಲಿನ ಪದಾರ್ಥ. ಇದರಿಂದ ಮಾಡಬಹುದಾದ ರುಚಿಯಾದ ಫ್ರೈಡ್ ರೈಸ್ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
ಬೀನ್ಸ್, ಕ್ಯಾರೆಟ್, ಕ್ಯಾಬೇಜ್, ಕ್ಯಾರೆಟ್ ಸ್ವಲ್ಪ ಸಣ್ಣಗೆ ಹೆಚ್ಚಿಡಿ. ಹಸಿ ಬಟಾಣಿ ಸ್ವಲ್ಪ ಬಿಡಿಸಿಡಿ.

1 ಲೋಟ ಬಾಸುಮತಿ ಅಕ್ಕಿಯನ್ನು ತೊಳೆದು ಕುಡಿಯುವ ನೀರಿನಲ್ಲಿ ಹಾಕಿ 90 % ಬೇಯಿಸಿಡಿ.

100 ಗ್ರಾಂನಷ್ಟು ಚೀಸ್ ಅನ್ನು ಚಿಕ್ಕದಾಗಿ ಹೆಚ್ಚಿಡಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಚೀಸ್, ಚಿಟಿಕೆ ಉಪ್ಪು, ಪೆಪ್ಪರ್ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಚೀಸ್ ಪೂರ್ತಿಯಾಗಿ ಕರಗುವವರೆಗೆ ಬಿಸಿ ಮಾಡಿ ಒಲೆಯಿಂದ ಇಳಿಸಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಹೆಚ್ಚಿದ ತರಕಾರಿಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಾಡಿಸಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1 ಚಮಚ ಸೋಯಾ ಸಾಸ್, 1 ಚಮಚ ವಿನೆಗರ್,1/2 ಚಮಚ ಕರಿ ಮೆಣಸಿನ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.

ಕೊನೆಯಲ್ಲಿ ಬಾಸುಮತಿ ಅನ್ನ, ಉಪ್ಪುಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ ಕೊನೆಯಲ್ಲಿ ಚೀಸ್ ಹಾಕಿ ಕಲೆಸಿದರೆ ರುಚಿಯಾದ ಚೀಸ್ ಫ್ರೈಡ್ ರೈಸ್ ಸವಿಯಲು ಸಿದ್ಧ!
ಧನ್ಯವಾದಗಳು ![]()
![]()
![]()
