Tindi Tinisu ಹಬ್ಬದ ಅಡುಗೆಗಳು

CHIGALI ಚಿಗಳಿ

ನಾಗರ ಚೌತಿ, ಪಂಚಮಿ ಹಬ್ಬಗಳಲ್ಲಿ ತಪ್ಪದೆ ಮಾಡುವ ಎಳ್ಳಿನ ಚಿಗಳಿ ಉಂಡೆಯ ರೆಸಿಪಿ ಇಲ್ಲಿದೆ!

ಒಂದು ಅಳತೆ ಕಪ್ಪು/ ಬಿಳಿ ಎಳ್ಳು ಸ್ವಚ್ಛ ಮಾಡಿ ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.

ಒಂದು ಅಥವಾ ಮುಕ್ಕಾಲು ಅಳತೆ ಬೆಲ್ಲ ಪುಡಿ ಮಾಡಿಡಿ.

ಎರಡು ಏಲಕ್ಕಿ ಪುಡಿ ಮಾಡಿಡಿ. ( ಬೇಕಾದರೆ )

ಎಳ್ಳು ಬಿಸಿಯಾಗಿರುವಾಗಲೇ ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿ.

ಕೊನೆಯಲ್ಲಿ ಬೆಲ್ಲದ ಪುಡಿ ಹಾಕಿ ಮತ್ತೊಮ್ಮೆ ಪುಡಿ ಮಾಡಿ, ಏಲಕ್ಕಿ ಪುಡಿ ಹಾಕಿ ತಕ್ಷಣವೇ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿಡಿ.

ಧನ್ಯವಾದಗಳು

Leave a Reply

Your email address will not be published.