ಸಾಂಬಾರು ಮತ್ತು ಪಲ್ಯಗಳು

PANEER MATTAR ಪನ್ನೀರ್ ಮಟ್ಟರ್

ಪನ್ನೀರ್ ಪ್ರಿಯರೆ ನಿಮಗಾಗಿ ಇಲ್ಲಿದೆ ಇನ್ನೊಂದು ರುಚಿಯಾದ, ಬೇಗನೆ ಮಾಡಬಹುದಾದ ರೆಸಿಪಿ!

ಮಾಡುವ ವಿಧಾನ :-

2 ಟೋಮೋಟೋ, 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳು, 1/2 ಇಂಚು ಶುಂಠಿ ಸಿಪ್ಪೆ ತೆಗೆದು 2 ಚಮಚ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ನಂತರ ರುಬ್ಬಿಡಿ.

100 ಗ್ರಾಂನಷ್ಟು ಪನ್ನೀರ್ ಸಣ್ಣಗೆ ಹೆಚ್ಚಿಡಿ.

1 ಚಿಕ್ಕ ಈರುಳ್ಳಿ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ, ರುಬ್ಬಿದ ಮಿಶ್ರಣ, ಚಿಟಿಕೆ ಅರಿಷಿಣ, 1/2 ಚಮಚ ಗರಂ ಮಸಾಲ, 1 ಚಮಚ ಖಾರದ ಪುಡಿ, ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಬಾಡಿಸಿ, 100 ಗ್ರಾಂ ಬಣಾಣಿ, ಹೆಚ್ಚಿದ ಪನ್ನೀರ್, ಸ್ವಲ್ಪ ನೀರು ಹಾಕಿ ಬಟಾಣಿ ಮೆತ್ತಗಾಗುವವರೆಗೆ ಬೇಯಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಹಾಕಿ ಕಲೆಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಪನ್ನೀರ್ ಮಟ್ಟರ್ ಸವಿಯಲು ಸಿದ್ಧ!

ಪನ್ನೀರ್ ಬದಲಾಗಿ ಆಲೂಗೆಡ್ಡೆ ಹಾಕಬಹುದು.

ಧನ್ಯವಾದಗಳು

Leave a Reply

Your email address will not be published.