ಸಾಮಾನ್ಯವಾಗಿ ಎಲ್ಲರೂ ಸೌತೆಕಾಯಿ ರಾಯ್ತ ಮಾಡುತ್ತಾರೆ. ಸ್ವಲ್ಪ ವಿಭಿನ್ನವಾದ ರಾಯ್ತ ಬೇಕಾದರೆ ಈ ರೆಸಿಪಿ ಮಾಡಿ ನೋಡಿ! ಮಾಡುವುದು ಸುಲಭ! ರುಚಿಕರ!ಎಲ್ಲಾ ತರಹದ Rice items ಜೊತೆಗೆ ಸೂಪರ್ ಕಾಂಬಿನೇಶನ್!
ಮಾಡುವ ವಿಧಾನ:-
1/4 ಲೀಟರ್ ತಾಜಾ ಮೊಸರನ್ನು ಕಡೆದು, 1/2 ಚಮಚ ಖಾರದ ಪುಡಿ, 1/4 ಚಮಚ ಚಾಟ್ ಮಸಾಲ, 1/4 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, 1/4 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕಾಯಿ ತುರಿ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ.

ಬಟ್ಟಲಿನಲ್ಲಿ ಸ್ವಲ್ಪ ಬೆಚ್ಚಗಿರುವ ನೀರು ಹಾಕಿ ಅದರಲ್ಲಿ ಎರಡು ಹಿಡಿಯಷ್ಟು ಖಾರಾ ಬೂಂದಿ ಹಾಕಿ ಮೂರ್ನಾಲ್ಕು ನಿಮಿಷ ನೆನೆಯಲು ಬಿಡಿ. ನಂತರ ನೀರು ಸೋರಿ ಹಾಕಿ ಮೊಸರಿಗೆ ಸೇರಿಸಿ ಮೃದುವಾಗಿ ಕಲೆಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಬೂಂದಿ ರಾಯ್ತಾ ಸವಿಯಲು ಸಿದ್ಧ!

ನೀವು ಬೇಕಾದರೆ ಬೂಂದಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಾಡುವ ಬದಲು, ಗರಿ ಗರಿಯಾದ ಬೂಂದಿ ಬೇಕಾದರೆ ಹಾಕಿ ಮಾಡಬಹುದು!
ಧನ್ಯವಾದಗಳು ![]()
![]()
![]()