ಹೆಸರೇ ಹೇಳುವಂತೆ ಈ ಪುಟ್ಟ ಪುಟ್ಟ ಕಾಯಿ ತನ್ನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಧುಮೇಹಿಗಳು ತಪ್ಪದೆ ತಿನ್ನಬೇಕಾದ ಈ ಕಾಯಿ ವಿಟಮಿನ್ ಸಿಯ ಆಗರ. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ!
ಹನ್ನೆರಡು ಬೆಟ್ಟದ ನೆಲ್ಲಿಕಾಯಿಯನ್ನು ತೊಳೆದು 8 ಹಸಿ ಮೆಣಸಿನಕಾಯಿ ಹಾಕಿ ಕುಕ್ಕರಿನಲ್ಲಿಟ್ಟು ಒಂದು ವಿಷಲ್ ಕೂಗಿಸಿಡಿ.

ತಣ್ಣಗಾದ ನಂತರ ಅದರ ಬೀಜ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಡಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಇಂಗು ಕರಿಬೇವು ಹಾಕಿ ತಣ್ಣಗಾದ ಮೇಲೆ ಈ ಚಟ್ನಿಗೆ ಸೇರಿಸಿ ಚೆನ್ನಾಗಿ ಕಲೆಸಿ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ.

ನಿಮಗೆ ಬೇಕಾಗುವಷ್ಟು ಚಟ್ನಿ ಹೊರ ತೆಗೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಕಲೆಸಿ ಬಿಸಿ ಅನ್ನ, ರಾಗಿ ಮುದ್ದೆಯೊಂದಿಗೆ ಸವಿಯಿರಿ.
ಈ ಚಟ್ನಿ ನಾಲ್ಕೈದು ದಿನ ಫ್ರಿಡ್ಜ್ ನಲ್ಲಿಟ್ಟು ಉಪಯೋಗಿಸಬಹುದು. ಒಟ್ಟಿಗೆ ಮಾಡಿಡದೆ ಎಷ್ಟು ಬೇಕೋ ಅಷ್ಟು ಆಗಾಗ ಮಾಡಬಹುದು.
ಧನ್ಯವಾದಗಳು ![]()
![]()
![]()