ಸಿಹಿ ತಿನಿಸುಗಳು

KAJU KATLI ಕಾಜು ಕಟ್ಲಿ

ಗೋಡಂಬಿಯಿಂದ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ!

ಪೂರ್ವ ತಯಾರಿ :- 3 ನಿಮಿಷ

ಕುಕಿಂಗ್ ಟೈಮ್ :- 5 ನಿಮಿಷ

ಬೇಕಾಗುವ ಸಾಮಗ್ರಿಗಳು :-

ಗೋಡಂಬಿ – 1 ಕಪ್
ಸಕ್ಕರೆ – 3/4 ಕಪ್
ಮಿಲ್ಕ್ ಪೌಡರ್ – 1 ಟೇಬಲ್ ಚಮಚ
ತುಪ್ಪ – 1 ಟೇಬಲ್ ಚಮಚ

ಮಾಡುವ ವಿಧಾನ :-

ಗೋಡಂಬಿರನ್ನು ಫ್ರಿಡ್ಜ್ ನಿಂದ ತೆಗೆದು ನೇರವಾಗಿ Mixie jar ಗೆ ಹಾಕಿ ಪುಡಿ ಮಾಡಿ. ಒಟ್ಟಿಗೆ Mixie ಯನ್ನು ಹಾಕದೆ ಸ್ವಲ್ಪ ಸ್ವಲ್ಪವೇ ಪುಡಿ ಮಾಡಿ. ಬಿಟ್ಟು ಬಿಟ್ಟು On ಮಾಡಿದರೆ ಸರಿಯಾಗಿ ಪುಡಿ ಆಗುತ್ತದೆ. ಪುಡಿಯನ್ನು ಒಮ್ಮೆ ಜರಡಿ ಹಿಡಿದಿಡಿ.

ಬಾಣಲೆಯಲ್ಲಿ ಸಕ್ಕರೆ ಹಾಕಿ 1/4 ಕಪ್ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಪೂರ್ತಿಯಾಗಿ ಕರಗಿ ಎರಡೆಳೆ ಪಾಕ ಬಂದೊಡನೆ ಗೋಡಂಬಿ ಪುಡಿ, ಮಿಲ್ಕ್ ಪೌಡರ್, ತುಪ್ಪ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ ತಣ್ಣಗಾದ ಮೇಲೆ ಚೆನ್ನಾಗಿ ನಾದಿ ತುಪ್ಪ ಸವರಿದ ಮಣೆಯ ಮೇಲೆ ಹಾಕಿ, ತುಪ್ಪ ಸವರಿದ ಲಟ್ಟಣಿಗೆಯಿಂದ ತೆಳ್ಳಗೆ ಲಟ್ಟಿಸಿ, ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

ಮಿಲ್ಕ್ ಪೌಡರ್ ಬೇಕಾದರೆ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ಬೇರೆ ಸಾಮಗ್ರಿಗಳನ್ನು ಇದೇ ಅಳತೆಯಲ್ಲಿ ಹಾಕಿ, ಇದೇ ರೀತಿಯಲ್ಲಿ ಮಾಡಿದರೂ ಸಹ ಚೆನ್ನಾಗಿರುತ್ತದೆ.

ಧನ್ಯವಾದಗಳು

Leave a Reply

Your email address will not be published.