ಹುರುಳಿ ಕಾಳು ಆರೋಗ್ಯಕರವಾದ ಕಾಳು. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ!
ಮಾಡುವ ವಿಧಾನ :-
2 ಚಮಚ ಹುರುಳಿ ಕಾಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.

4 ಚಮಚ ಕಾಯಿ ತುರಿದಿಡಿ.
6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.
1 ಚಮಚ ಹುಣಿಸೆ ರಸ ತೆಗೆದಿಡಿ.
ಮಿಕ್ಸಿ ಜಾರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಇನ್ನೊಂದು ಬಾರಿ ರುಬ್ಬಿ ತೆಗೆದು ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಕಲೆಸಿದರೆ ರುಚಿಯಾದ ಹುರುಳಿ ಕಾಳಿನ ಚಟ್ನಿ ಸವಿಯಲು ಸಿದ್ಧ.
ಧನ್ಯವಾದಗಳು ![]()
![]()
![]()
