Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SEVEN CUPS ಸವೆನ್ ಕಪ್ಸ್

ಹಬ್ಬದ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ.

ಬೇಕಾಗುವ ಸಾಮಗ್ರಿಗಳು:-

ಕಡಲೇ ಹಿಟ್ಟು – 1 ಕಪ್
ಕಾಯಿ ತುರಿ – 1 ಕಪ್
ತುಪ್ಪ – 1 ಕಪ್
ಹಾಲು – 1 ಕಪ್
ಡ್ರೈ ಫ್ರೂಟ್ಸ್ ಪುಡಿ – 1 ಕಪ್
ಸಕ್ಕರೆ – 2 ಕಪ್

ಮಾಡುವ ವಿಧಾನ :-

1 ಕಪ್ ಕಡಲೇ ಹಿಟ್ಟು ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

1 ಕಪ್ ಡ್ರೈ ಫ್ರೂಟ್ಸ್ ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್ ನಟ್ ಹೀಗೆ ಪುಡಿ ಮಾಡಿಡಿ.

1 ಕಪ್ ಕಾಯಿ ತುರಿದಿಡಿ.

 

ದಪ್ಪ ತಳದ ಬಾಣಲೆಯಲ್ಲಿ ಕಡಲೇ ಹಿಟ್ಟು, ಕಾಯಿ ತುರಿ, ಸಕ್ಕರೆ, ತುಪ್ಪ, ಹಾಲು, ಡ್ರೈ ಫ್ರೂಟ್ಸ್ ಪುಡಿ ಹಾಕಿ ಗಂಟಿಲ್ಲದ ಹಾಗೆ ಕಲೆಸಿ ಒಲೆಯ ಮೇಲಿಡಿ.

ಮೀಡಿಯಂ ಉರಿಯಲ್ಲಿ ಕೈ ಬಿಡದೆ ತಿರುಗಿಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ ನೊರೆ ನೊರೆಯಾಗಿ ಆದಾಗ ತುಪ್ಪ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

ಡ್ರೈ ಫ್ರೂಟ್ಸ್ ಬದಲು ಕಾಯಿ ತುರಿ ಎರಡು ಕಪ್ ಅಥವಾ ತುಪ್ಪ 2 ಕಪ್ ಹಾಕಬಹುದು. ನಿಮಗೆ ಇಷ್ಟವಾಗುವ ಹಾಗೆ ಮಾಡಬಹುದು.

ಒಟ್ಟಿನಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಏಳು ಕಪ್ ಆಗಬೇಕು. ಅದಕ್ಕೆ ” ಸವೆನ್ ಕಪ್ಸ್” ಅಂತ ಹೆಸರು ಇರುವುದು.

ಧನ್ಯವಾದಗಳು

Leave a Reply

Your email address will not be published.