ಮೆಂತ್ಯ ಮಧುಮೇಹವನ್ನು ಹತೋಟಿಯಲ್ಲಿಡುವ ಶಕ್ತಿ ಹೊಂದಿದೆ! ದೇಹಕ್ಕೆ ತಂಪು ನೀಡುತ್ತದೆ! ಮೊಳಕೆ ಮೆಂತ್ಯ ಮತ್ತಷ್ಟು ಆರೋಗ್ಯಕರ. ಕಹಿ ಕೂಡ ಕಡಿಮೆ ಇರುತ್ತೆ! ಹಾಗೇ ತಿನ್ನಲು ಇಷ್ಟವಿಲ್ಲದವರು ಆರೋಗ್ಯಕರವಾದ ಕೋಸಂಬರಿ ಮಾಡಿ ತಿನ್ನಬಹುದು!
ಮಾಡುವ ವಿಧಾನ:-
4 ಚಮಚ ಮೆಂತ್ಯ ಕಾಳು ನೆನೆಸಿ ಮೊಳಕೆ ಬರಲು ಬಿಡಿ.
1 ಸೌತೇ ಕಾಯಿ ಕಹಿ ತೆಗೆದು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

4 ಚಮಚ ಕಾಯಿ ತುರಿದಿಡಿ.
2 ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಮೆಂತ್ಯ ಕಾಳು, ಸೌತೇ ಕಾಯಿ, ಕಾಯಿ ತುರಿ, ಕೊತ್ತಂಬರಿ, ಹಸಿ ಮೆಣಸಿನ ಕಾಯಿ, ಉಪ್ಪು, 1/2 ನಿಂಬೆ ರಸ ಸೇರಿಸಿ ಕಲೆಸಿಡಿ.
ಒಗ್ಗರಣೆಗೆ ಸಾಸಿವೆ, ಇಂಗು ಹಾಕಿ ಕೋಸಂಬರಿಗೆ ಹಾಕಿ ಕಲೆಸಿದರೆ ಆರೋಗ್ಯಕರವಾದ ಮೊಳಕೆ ಮೆಂತ್ಯ ಕೋಸಂಬರಿ ಸಿದ್ಧ!
ಧನ್ಯವಾದಗಳು.
