ಸಾಂಬಾರು ಮತ್ತು ಪಲ್ಯಗಳು

VEGETABLE CURRY ವೆಜಿಟೇಬಲ್ ಕರ್ರಿ

VEGETABLE CURRY  ವೆಜಿಟೇಬಲ್ ಕರ್ರಿ

ಅತ್ಯಂತ ಜನಪ್ರಿಯ Side Dish! ಪೂರಿ, ರವೆ ಇಡ್ಲಿ, ಸೆಟ್ ದೋಸೆ, ಚಪಾತಿ, ರೋಟಿ, ಘೀ ರೈಸ್ ಹೀಗೆ ಎಲ್ಲಾ ತಿಂಡಿಗಳ ಜೊತೆ ಚೆನ್ನಾಗಿ ಹೊಂದಿ ಕೊಳ್ಳುತ್ತದೆ.

ವೆಜಿಟೇಬಲ್ ಕರ್ರಿ ಮಾಡುವ ವಿಧಾನ:-

ನಿಮಗೆ ಇಷ್ಟವಾಗುವ ತರಕಾರಿಗಳನ್ನು ತೊಳೆದು, ಸಣ್ಣಗೆ ಹೆಚ್ಚಿಕೊಂಡು ಕುಕ್ಕರಿನಲ್ಲಿ 1 ವಿಷಲ್ ಬೇಯಿಸಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ, ಗೋಬಿ ಮುಂತಾದ ತರಕಾರಿ ಹಾಕಬಹುದು.

4 ಚಮಚ ಕಾಯಿ ತುರಿದಿಡಿ.

2 ಚಮಚ ಗಸಗಸೆ, 8 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿಡಿ.

8 ರಿಂದ 10 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

1 ಚಮಚ ಧನಿಯ, 4 ಲವಂಗ, 1/2 ಇಂಚು ಚಕ್ಕೆ, 1 ಏಲಕ್ಕಿ ಸ್ವಲ್ಪ ಹುರಿದು, ಬೆಚ್ಚಗೆ ಇರುವಾಗಲೇ ನುಣ್ಣಗೆ ಪುಡಿ ಮಾಡಿಡಿ.

ಮೊದಲು ಗಸಗಸೆ ಗೋಡಂಬಿ ನುಣ್ಣಗೆ ರುಬ್ಬಿ ನಂತರ ಖಾರದ ಪುಡಿ, ಧನಿಯಾ ಪುಡಿ, ಕಾಯಿತುರಿ, 1/2 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, 2 ಎಸಳು ಬೆಳ್ಳುಳ್ಳಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಡಿ.

1 ಈರುಳ್ಳಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ, ಟೋಮೇಟೋ ಹಾಕಿ ಬಾಡಿಸಿ, ಬೆಂದ ತರಕಾರಿ, ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿದರೆ, ರುಚಿಕರವಾದ ಹೋಟೆಲ್ ಶೈಲಿ ವೆಜಿಟೇಬಲ್ ಕರ್ರಿ ಸವಿಯಲು ಸಿದ್ಧ!

ನಿಮಗೆ ಸಮಯವಿದ್ದರೆ ತರಕಾರಿಗಳನ್ನು ಈರುಳ್ಳಿ, ಟೋಮೇಟೋ ಹಾಕಿದ ನಂತರ, ಒಗ್ಗರಣೆಯಲ್ಲಿ ಬೇಯಿಸಬಹುದು. ಸಮಯದ ಅಭಾವ ಇರುವವರು ಕುಕ್ಕರಿನಲ್ಲಿ ಬೇಯಿಸಿ ಮಾಡಬಹುದು.

ಧನ್ಯವಾದಗಳು 🙏🙏🙏

Leave a Reply

Your email address will not be published.