HIDUKIDA BELE KODUBALE ಹಿದುಕಿದ ಬೇಳೆ ಕೋಡುಬಳೆ
ಕೋಡುಬಳೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ರುಚಿಯಾದ ಕೋಡುಬಳೆಯನ್ನು ಮತ್ತಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
1 ಲೋಟ ಹಿದುಕಿದ ಬೇಳೆ ತೊಳೆದು ಸ್ವಲ್ಪ ಉಪ್ಪು ಹಾಕಿ ಒಂದು ವಿಷಲ್ ಕೂಗಿಸಿ ನೀರು ಸೋರಿ ಹಾಕಿ ಚೆನ್ನಾಗಿ ಕಿವುಚಿಡಿ.
ಅರ್ಧ ಲೋಟ ಕಾಯಿ ತುರಿ ಜೊತೆಗೆ 6 ರಿಂದ 8 ಹುರಿದ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ನೀರು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಡಿ.
ಒಂದು ಬಟ್ಟಲಿನಲ್ಲಿ ಕಿವುಚಿದ ಹಿದುಕಿದ ಬೇಳೆ, ರುಬ್ಬಿದ ಮಿಶ್ರಣ, 1 ಚಮಚ ಜೀರಿಗೆ, 1 ಚಮಚ ಬಿಳಿ ಎಳ್ಳು, 1/2 ಚಮಚ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಅದಕ್ಕೆ ಹಿಡಿಸುವಷ್ಟು ಅಕ್ಕಿ ಹಿಟ್ಟು, 2 ಚಮಚ ಮೈದಾ ಹಿಟ್ಟು, 2 ಚಮಚ ಚಿರೋಟಿ ರವೆ ಹಾಕಿ ಚೆನ್ನಾಗಿ ಕಲೆಸಿ.

2 ಚಮಚ ಎಣ್ಣೆ ಚೆನ್ನಾಗಿ ಕಾಯಿಸಿ ಹಾಕಿ ಚೆನ್ನಾಗಿ ಕಲೆಸಿ. ಹಿದುಕಿದ ಬೇಳೆ, ರುಬ್ಬಿದ ಮಿಶ್ರಣದ ನೀರಿನಂಶವೇ ಸಾಕಾಗುವುದು. ಅಕಸ್ಮಾತ್ ನೀರು ಬೇಕಾದರೆ ಸ್ವಲ್ಪ ಚಿಮುಕಿಸಿ ಮೃದುವಾದ ಹಿಟ್ಟು ಕಲೆಸಿಡಿ.

ನಂತರ ಚೆನ್ನಾಗಿ ನಾದಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕೆಂಪಗೆ ಗರಿ ಗರಿಯಾಗುವವರೆಗೆ ಕರಿದು ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವಾರವಾದರೂ ಗರಿ ಗರಿಯಾಗಿರುತ್ತದೆ.

ಕೋಡುಬಳೆ ತುಂಬಾ ದಿನ ಗರಿ ಗರಿಯಾಗಿರಬೇಕಾದರೆ ಸಣ್ಣಗೆ ನಾದಿ ಮಾಡಬೇಕು.

ಧನ್ಯವಾದಗಳು 🙏🙏🙏
