Showing 564 Result(s)
ಸಾಂಬಾರು ಮತ್ತು ಪಲ್ಯಗಳು

HURULI KALU CHUTNEY ಹುರುಳಿ ಕಾಳು ಚಟ್ನಿ

ಹುರುಳಿ ಕಾಳು ಆರೋಗ್ಯಕರವಾದ ಕಾಳು. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- 2 ಚಮಚ ಹುರುಳಿ ಕಾಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.   4 ಚಮಚ ಕಾಯಿ ತುರಿದಿಡಿ. 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. ಮಿಕ್ಸಿ ಜಾರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SEVEN CUPS ಸವೆನ್ ಕಪ್ಸ್

ಹಬ್ಬದ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ. ಬೇಕಾಗುವ ಸಾಮಗ್ರಿಗಳು:- ಕಡಲೇ ಹಿಟ್ಟು – 1 ಕಪ್ ಕಾಯಿ ತುರಿ – 1 ಕಪ್ ತುಪ್ಪ – 1 ಕಪ್ ಹಾಲು – 1 ಕಪ್ ಡ್ರೈ ಫ್ರೂಟ್ಸ್ ಪುಡಿ – 1 ಕಪ್ ಸಕ್ಕರೆ – 2 ಕಪ್ ಮಾಡುವ ವಿಧಾನ :- 1 ಕಪ್ ಕಡಲೇ ಹಿಟ್ಟು ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 1 ಕಪ್ ಡ್ರೈ ಫ್ರೂಟ್ಸ್ ಬಾದಾಮಿ, ಗೋಡಂಬಿ, ಪಿಸ್ತಾ, …

Oota ಸಾಂಬಾರು ಮತ್ತು ಪಲ್ಯಗಳು

HUNISE SAARU ಹುಣಿಸೆ ಸಾರು

ಪ್ರತಿ ದಿನ ಬೇಳೆ ಸಾರು, ಟೋಮೇಟೋ ಸಾರು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಬಹುದು. ಅಥವಾ ಯಾವುದಾದರೂ ಸಮಾರಂಭಕ್ಕೆ ಹೋಗಿ ಬಂದಾಗ ಒಂದು ಹೊತ್ತಿಗೆ ಬೇಳೆ ಬೇಯಿಸಿ ಮಾಡಲು ಬೇಸರವಾಗಿದ್ದರೆ ಹೀಗೆ ಮಾಡಬಹುದು. ಮಾಡುವ ವಿಧಾನ :- ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಕರಿಬೇವು ಸ್ವಲ್ಪ ತೊಳೆದಿಡಿ. ಒಂದು ಚಮಚ ಕರಿ ಮೆಣಸು, ಜೀರಿಗೆ …

Tindi Tinisu ಸಿಹಿ ತಿನಿಸುಗಳು

AGRA PETHA ಆಗ್ರಾ ಪೇಠಾ

ಬೂದುಗುಂಬಳ ಕಾಯಿಯಿಂದ ಸುಲಭವಾಗಿ ಮಾಡಬಹುದಾದ ಆಗ್ರಾದ ಜನಪ್ರಿಯ ಪೇಠಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಆದಷ್ಟೂ ಬಲಿತಿರುವ ಗಟ್ಟಿಯಾದ ಅರ್ಧ ಕೇಜಿ ಬೂದುಗುಂಬಳ ಕಾಯಿಯನ್ನು ಸಿಪ್ಪೆ, ತಿರುಳು ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಒಂದು ಬಟ್ಟಲಿನಲ್ಲಿ ನೀರು ಹಾಕಿ 1 ಚಿಟಿಕೆ ಸುಣ್ಣ (ಎಲೆ ಅಡಿಕೆ ಜೊತೆಗೆ ಹಾಕಿಕೊಳ್ಳುವುದು) ಹಾಕಿ ಚೆನ್ನಾಗಿ ಕರಗಿಸಿ ಬೂದುಗುಂಬಳ ಕಾಯಿ ಹೋಳನ್ನು ಹಾಕಿ ಮೂರ್ನಾಲ್ಕು ಗಂಟೆ ನೆನೆಸಿಡಿ. ಹೀಗೆ ಮಾಡುವುದರಿಂದ ಪೇಠಾ ಬೆಳ್ಳಗೆ ಇರುತ್ತದೆ. ನಂತರ ನಾಲ್ಕೈದು ಬಾರಿ ಚೆನ್ನಾಗಿ …

Tindi Tinisu ಖಾರ ತಿನಿಸುಗಳು

PERAGU BONDA ಪೆರಗು ಬೋಂಡಾ

ಪೆರಗು ಅಂದರೆ ತೆಲುಗಿನಲ್ಲಿ ಮೊಸರು ಎಂದು ಅರ್ಥ. ಗಟ್ಟಿಯಾದ ಹುಳಿ ಮೊಸರು ಹಾಕಿ ಮಾಡುವ ಬೋಂಡಾ ಇದು. ಆಂಧ್ರದ ಜನಪ್ರಿಯ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಒಂದು ಹಿಡಿ ಸಾಬುದಾನ ಗಟ್ಟಿಯಾದ ಹುಳಿ ಮೊಸರು ಹಾಕಿ ಎರಡು ಗಂಟೆ ನೆನೆಸಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ನೆನೆಸಿದ ಸಾಬೂದಾನಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ. …

Tindi Tinisu ಹಬ್ಬದ ಅಡುಗೆಗಳು

CHIGALI ಚಿಗಳಿ

ನಾಗರ ಚೌತಿ, ಪಂಚಮಿ ಹಬ್ಬಗಳಲ್ಲಿ ತಪ್ಪದೆ ಮಾಡುವ ಎಳ್ಳಿನ ಚಿಗಳಿ ಉಂಡೆಯ ರೆಸಿಪಿ ಇಲ್ಲಿದೆ! ಒಂದು ಅಳತೆ ಕಪ್ಪು/ ಬಿಳಿ ಎಳ್ಳು ಸ್ವಚ್ಛ ಮಾಡಿ ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ. ಒಂದು ಅಥವಾ ಮುಕ್ಕಾಲು ಅಳತೆ ಬೆಲ್ಲ ಪುಡಿ ಮಾಡಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ( ಬೇಕಾದರೆ ) ಎಳ್ಳು ಬಿಸಿಯಾಗಿರುವಾಗಲೇ ಮಿಕ್ಸಿ ಜಾರ್ ಗೆ ಹಾಕಿ ಪುಡಿ ಮಾಡಿ. ಕೊನೆಯಲ್ಲಿ ಬೆಲ್ಲದ ಪುಡಿ ಹಾಕಿ ಮತ್ತೊಮ್ಮೆ ಪುಡಿ ಮಾಡಿ, ಏಲಕ್ಕಿ ಪುಡಿ ಹಾಕಿ ತಕ್ಷಣವೇ …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SABBAKKI UNDE ಸಬ್ಬಕ್ಕಿ ಉಂಡೆ

ನೈಲಾನ್ ಸಬ್ಬಕ್ಕಿಯಿಂದ ಮಾಡಬಹುದಾದ ಸಿಹಿಯಾದ, ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಒಂದು ಅಳತೆ ಬೆಲ್ಲ ಪುಡಿ ಮಾಡಿಡಿ. ಸ್ವಲ್ಪ ಗೋಡಂಬಿ, ಬಾದಾಮಿ, ದ್ರಾಕ್ಷಿ ಹುರಿದು ತೆಗೆದಿಡಿ. ಸ್ವಲ್ಪ ಒಣ ಕೊಬ್ಬರಿ ಚಿಕ್ಕ ಚಿಕ್ಕದಾಗಿ ಹೆಚ್ಚಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಎರಡನ್ನು ಹುರಿದಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಸ್ವಲ್ಪ ಸ್ವಲ್ಪವೇ ನೈಲಾನ್ ಸಬ್ಬಕ್ಕಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ. ಹೆಚ್ಚಿನ ಎಣ್ಣೆ ತೆಗೆಯಲು ಕಿಚನ್ ಟವೆಲ್ ಮೇಲೆ ಹಾಕಿ. 2 …

ಸಾಂಬಾರು ಮತ್ತು ಪಲ್ಯಗಳು

GOBHI ALU CURRY ( DRY ) ಗೋಭಿ ಆಲೂ ಕರ್ರಿ ( ಡ್ರೈ )

ಗೋಭಿ ಪ್ರಿಯರೆ ಇದೋ ಇಲ್ಲಿದೆ ಒಂದು ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ. ಮಾಡುವ ವಿಧಾನ :- 1 ಚಿಕ್ಕ ಗೋಭಿಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ ತೊಳೆದಿಡಿ. 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಸ್ವಲ್ಪ ಹಸಿ ಬಟಾಣಿ ಬಿಡಿಸಿಡಿ. 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಗೋಭಿ, ಆಲೂಗೆಡ್ಡೆ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ಬಟಾಣಿ ಸೇರಿಸಿ. …

Tindi Tinisu ಸಿಹಿ ತಿನಿಸುಗಳು

BADAM BURFI ಬಾದಾಮ್ ಬರ್ಫಿ

ಬಾದಾಮಿಯಿಂದ ಮಾಡಬಹುದಾದ ರುಚಿಯಾದ ಬರ್ಫಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಒಂದು ಅಳತೆ ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಡಿ. ನೀರು ಹಾಕಬಾರದು. ಒಂದು ಅಳತೆ ಸಕ್ಕರೆಗೆ ಅರ್ಧ ಅಳತೆ ನೀರು ಸೇರಿಸಿ ಕುದಿಯಲು ಇಡಿ.   ಸಕ್ಕರೆ ಪೂರ್ತಿಯಾಗಿ ಕರಗಿ ಒಂದೆಳೆ ಪಾಕ ಬಂದೊಡನೆ ಬಾದಾಮಿ ಪುಡಿ ಸೇರಿಸಿ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ. ಎರಡು ಚಮಚ ತುಪ್ಪ ಹಾಕಿ ಕಲೆಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ …

ತಂಪು ಪಾನೀಯಗಳು

AMLA JUICE ಆಮ್ಲಾ ಜ್ಯೂಸ್

ಆಮ್ಲಾ ಅಂದರೆ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು! ವಿಟಮಿನ್ ‘ಸಿ’ ಬೆಟ್ಟದಷ್ಟು ತುಂಬಿದೆ. ಇದರ ರುಚಿಯಾದ ಜ್ಯೂಸ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಅಥವಾ 3 ಬೆಟ್ಟದ ನೆಲ್ಲಿಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೀಜ ತೆಗೆದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿ. ಚಿಟಿಕೆ ಉಪ್ಪು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ ತಕ್ಷಣ ಕುಡಿಯಿರಿ.   ಅಥವಾ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಬೇಕಾದರೂ ಹಾಕಿಕೊಳ್ಳಬಹುದು. ಧನ್ಯವಾದಗಳು