Showing 564 Result(s)
ಸಾಂಬಾರು ಮತ್ತು ಪಲ್ಯಗಳು

ALOO SAGU ಆಲೂ ಸಾಗು

ALOO SAGU  ಆಲೂ ಸಾಗು ಆಲೂಗೆಡ್ಡೆಯಿಂದ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ. ಈ ಸಾಗು ಪೂರಿ, ರವೆ ಇಡ್ಲಿ, ಚಪಾತಿ, ದೋಸೆ ಜೊತೆಗೆ ಒಳ್ಳೆಯ ಕಾಂಬಿನೇಶನ್. ಮಾಡುವ ವಿಧಾನ :- 2 ಆಲೂಗೆಡ್ಡೆ, 1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಿಡಿ ಹಸಿ ಬಟಾಣಿ ಬಿಡಿಸಿಡಿ. 2 ಚಮಚ ಕಡಲೇ ಪಪ್ಪು ನುಣ್ಣಗೆ ಪುಡಿ ಮಾಡಿಡಿ. ಬಾಣಲೆಯಲ್ಲಿ 4 ಚಮಚ …

ಸಿಹಿ ತಿನಿಸುಗಳು

SABBAKKI LADDU ಸಬ್ಬಕ್ಕಿ ಲಡ್ಡು

SABBAKKI LADDU  ಸಬ್ಬಕ್ಕಿ ಲಡ್ಡು ಎಲ್ಲರಿಗೂ ದುರ್ಗಾಷ್ಟಮಿಯ ಶುಭಾಶಯಗಳು 🙏❤💐 ಸಬ್ಬಕ್ಕಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ ಇಲ್ಲಿದೆ! ಸಬ್ಬಕ್ಕಿಯಿಂದ ಸಾಧಾರಣವಾಗಿ ಕಿಚಡಿ, ವಡೆ ಇತರ ತಿಂಡಿ ಮಾಡಿರುತ್ತೀರ. ಲಡ್ಡು ಎಂದಾದರೂ ಮಾಡಿದ್ದೀರಾ? ಇಲ್ಲದಿದ್ದರೆ ಈಗ ಮಾಡಿ ನೋಡಿ. ಖಂಡಿತಾ ನಿಮಗೆ ಇಷ್ಟ ಆಗುತ್ತದೆ.   ಮಾಡುವ ವಿಧಾನ :- 2 ಅಳತೆ ಗಟ್ಟಿ ಸಬ್ಬಕ್ಕಿಯನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವವರೆಗೆ ಹುರಿದು ತೆಗೆದಿಡಿ. ಸುಮಾರು 25 ರಿಂದ 30 …

ಖಾರ ತಿನಿಸುಗಳು

THARAKARIGALA PAKODA ತರಕಾರಿಗಳ ಪಕೋಡ

THARAKARIGALA PAKODA  ತರಕಾರಿಗಳ ಪಕೋಡ ಪಕೋಡ ಎಲ್ಲರ ಫೇವರೈಟ್. ಸಂಜೆ ವೇಳೆಗೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಬಿಸಿ ಬಿಸಿ ಪಕೋಡ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಅದೂ ಆ ಪಕೋಡ ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕರವಾಗಿದ್ದರೆ ಮತ್ತಷ್ಟು ಚೆನ್ನಾಗಿರುತ್ತದೆ. ಹಾಗಾದರೆ ಆ ಪಕೋಡದ ರೆಸಿಪಿ ನೋಡೋಣವೇ? ಮಾಡುವ ವಿಧಾನ :- 1 ಈರುಳ್ಳಿ, 1 ಕ್ಯಾಪ್ಸಿಕಮ್, 1 ಕ್ಯಾರೆಟ್, ಕಾಲು ಭಾಗದಷ್ಟು ಕ್ಯಾಬೇಜ್ ಸಣ್ಣಗೆ ಹೆಚ್ಚಿಡಿ/ ತುರಿದಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. …

ಸಿಹಿ ತಿನಿಸುಗಳು

FRUITS PAYASA ಫ್ರೂಟ್ಸ್ ಪಾಯಸ

FRUITS PAYASA  ಫ್ರೂಟ್ಸ್ ಪಾಯಸ ನಮ್ಮ ಭಾರತೀಯ ಆಹಾರದಲ್ಲಿ ಪಾಯಸ/ ಖೀರ್ ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಬ್ಬ, ವಿಶೇಷ ಸಂದರ್ಭ, ಜಾತ್ರೆ, ಸಂತೋಷದ ಸಮಾರಂಭದಲ್ಲಿ ಒಂದಲ್ಲ ಒಂದು ವಿಧಧ ಪಾಯಸ ಇರಲೇ ಬೇಕು. ಸಾಧಾರಣವಾಗಿ ಮಾಡುವ ವಿಧಾನಕ್ಕಿಂತ ಸ್ವಲ್ಪ ವಿಶೇಷವಾದ ರುಚಿ ಬೇಕಾದರೆ ಈ ಹಣ್ಣುಗಳ ಪಾಯಸ ಮಾಡಿ ನೋಡಿ! ಖಂಡಿತಾ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ :- ಎರಡು ಹಿಡಿ ಬಾದಾಮಿ, 1 ಚಮಚ ಬಾಸುಮತಿ ಅಕ್ಕಿ ತೊಳೆದು …

ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

Avalakki Payasa ಅವಲಕ್ಕಿ ಪಾಯಸ

ಅವಲಕ್ಕಿ ಪಾಯಸ ಹಬ್ಬ ಅಂದ ಮೇಲೆ ಸಿಹಿ ಇರಲೇ ಬೇಕು ಅಲ್ಲವೇ!? ಆ ಸಿಹಿ ಮಾಡುವುದು ಸುಲಭ ಅಂದರೆ ಎಷ್ಟು ಚೆನ್ನ! ಹಾಗಾದರೆ ಸುಲಭವಾಗಿ, ಬೇಗನೆ ಮಾಡಬಹುದಾದ, ರುಚಿಯಾದ ಪಾಯಸದ ರೆಸಿಪಿ ಇಲ್ಲಿದೆ! ಅವಲಕ್ಕಿ ಪಾಯಸ ಮಾಡುವ ವಿಧಾನ:- 3/4 ಲೋಟ ಬೆಲ್ಲವನ್ನು ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ನಂತರ ಶೋಧಿಸಿ ಇಡಿ. ಸ್ವಲ್ಪ ಗೋಡಂಬಿ ಬಾದಾಮಿ ದ್ರಾಕ್ಷಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೇಸರಿ ದಳಗಳನ್ನು ಬಿಸಿ ಹಾಲಿನಲ್ಲಿ ನೆನೆಸಿಡಿ. ಬಾಣಲೆಯಲ್ಲಿ 2 …

ಖಾರ ತಿನಿಸುಗಳು

BABY ALOO BONDA ಬೇಬಿ ಆಲೂ ಬೋಂಡಾ

BABY ALOO BONDA  ಬೇಬಿ ಆಲೂ ಬೋಂಡಾ ಮಳೆಗಾಲದ ದಿನಗಳಲ್ಲಿ ಬಗೆ ಬಗೆಯ ಬಜ್ಜಿ, ಬೋಂಡಾ ಎಷ್ಟು ವಿಧ ಮಾಡಿದರೂ ಚೆನ್ನಾಗಿರುತ್ತದೆ. ಅದರಲ್ಲೂ ಬೇಬಿ ಆಲೂಗೆಡ್ಡೆ ಬೋಂಡಾ ಮತ್ತು ರುಚಿಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಬೇಬಿ ಆಲೂಗೆಡ್ಡೆ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ. ಮಧ್ಯದಲ್ಲಿ ಮುಕ್ಕಾಲು ಭಾಗದವರೆಗೂ ಸೀಳಿಡಿ. ಆಲೂಗೆಡ್ಡೆ ಬೇರೆ ಬೇರೆಯಾಗದ ಹಾಗೆ ಎಚ್ಚರಿಕೆಯಿಂದ ಸೀಳಿಡಿ. ಒಂದು ತಟ್ಟೆಯಲ್ಲಿ 1 ಚಮಚ ಖಾರದ ಪುಡಿ, 1/2 ಚಮಚ ಜೀರಿಗೆ ಪುಡಿ, …

ಸಾಂಬಾರು ಮತ್ತು ಪಲ್ಯಗಳು

DUM BABY ALOO ದಂ ಬೇಬಿ ಆಲೂ

DUM BABY ALOO  ದಂ ಬೇಬಿ ಆಲೂ ಆಲೂಗೆಡ್ಡೆ ತರಕಾರಿಗಳ ರಾಜ ಎಂದೇ ಹೇಳಬಹುದು! ಪ್ರಪಂಚದಾದ್ಯಂತ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇಂತಹ ಆಲೂಗೆಡ್ಡೆಯ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/4 ಕೇಜಿ ಬೇಬಿ ಆಲೂ ತೊಳೆದು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿ, 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, 10 ರಿಂದ 12 …

ಖಾರ ತಿನಿಸುಗಳು ಚಾಟ್ಸ್

PANEER BAJJI ಪನ್ನೀರ್ ಬಜ್ಜಿ

PANEER BAJJI/ಪನ್ನೀರ್ ಬಜ್ಜಿ ಪನ್ನೀರ್ ಪ್ರಿಯರೆ ನೀವು ಸಾಮಾನ್ಯವಾಗಿ ಪನ್ನೀರ್ ಅನ್ನು ಗ್ರೇವಿ, ಮಂಚೂರಿಯನ್, ಕೆಲವು ಸಿಹಿ ತಿಂಡಿಗಳಲ್ಲಿ ತಿಂದಿರಬಹುದು. ಅದರ ರುಚಿಯಾದ ಬಜ್ಜಿ ಮಾಡುವ ರೆಸಿಪಿ ಇಲ್ಲಿದೆ! ಒಮ್ಮೆ ಮಾಡಿ ನೋಡಿ! ಖಂಡಿತಾ ಇನ್ನು ಮುಂದೆ ಆಗಾಗ ಮಾಡಿ ಸವಿಯುತ್ತೀರ. ಮಾಡುವ ವಿಧಾನ :- ಪನ್ನೀರ್ ಅನ್ನು ಚಿಕ್ಕದಾಗಿ ಕತ್ತರಿಸಿ ಒಂದೊಂದು ತುಂಡುಗಳನ್ನು ಮಧ್ಯದಲ್ಲಿ ಮುಕ್ಕಾಲು ಭಾಗದವರೆಗೂ ಕತ್ತರಿಸಿಡಿ. ಪನ್ನೀರ್ ತುಂಡುಗಳು ಬೇರೆ ಬೇರೆ ಆಗದ ಹಾಗೆ ಎಚ್ಚರಿಕೆಯಿಂದ ಕತ್ತರಿಸಿಡಿ.   ಎರಡು ಹಿಡಿ ಪುದೀನ, …

ಸಾಂಬಾರು ಮತ್ತು ಪಲ್ಯಗಳು

HUNISE HANNINA PASTE ಹುಣಿಸೆ ಹಣ್ಣಿನ ಪೇಸ್ಟ್

ಪ್ರತಿ ದಿನ ಸಾರು, ಸಾಂಬಾರ್, ಗೊಜ್ಜು, ಚಟ್ನಿ ಮಾಡಲು ಬೇಕಾಗುವ ಹುಣಿಸೆ ಹಣ್ಣನ್ನು ತೊಳೆದು ನೆನೆಸಿ ರಸ ತೆಗೆದು ಹಾಕಬೇಕು. ಹೀಗೆ ಮಾಡಿ Freezer ನಲ್ಲಿಡಿ. ಬೇಕಾದಾಗ ತಕ್ಷಣ ಹಾಕಬಹುದು! ನೆನೆಸುವ, ಕಿವುಚುವ ರಗಳೆ ಇರೋದಿಲ್ಲ! ಮಾಡುವ ವಿಧಾನ:- ಹುಣಿಸೆ ಹಣ್ಣು ಸಿಪ್ಪೆ, ನಾರು, ಬೀಜ ತೆಗೆದು ಎರಡು ಮೂರು ಬಾರಿ ತೊಳೆದು ಹಣ್ಣು ಮುಳುಗುವಷ್ಟು ಬಿಸಿ ನೀರು ಹಾಕಿ ನಾಲ್ಕು ಗಂಟೆ ನೆನೆಸಿಡಿ. ನೆಂದ ಹುಣಿಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಜಾಲರಿಯಲ್ಲಿ ಸೋರಿ ಹಾಕಿ. ಕಿವುಚಿದ …

Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS KADUBU ಡ್ರೈ ಫ್ರೂಟ್ಸ್ ಕಡುಬು

ಗಣೇಶನ ಹಬ್ಬದಲ್ಲಿ ಸಾಧಾರಣವಾಗಿ ಎಲ್ಲರೂ ಮಾಡುವ ಕಾಯಿ ಕಡುಬು, ಬೇಳೆ ಕಡುಬು, ಎಳ್ಳಿನ ಕಡಿಮೆ ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಆರೋಗ್ಯಕರವಾದದ್ದು, ರುಚಿಕರವಾದದ್ದು. ಸಕ್ಕರೆ ಅಥವಾ ಬೆಲ್ಲ ಹಾಕದೆ ಇರುವುದರಿಂದ ಮಧು ಮೇಹಿಗಳೂ ಸಹ ಸ್ವಲ್ಪ ರುಚಿ ನೋಡಬಹುದು. ಸಾಮಾನ್ಯವಾಗಿ ಕಡುಬನ್ನು ಅಕ್ಕಿ ಹಿಟ್ಟು ಬೇಯಿಸಿ ಮಾಡುತ್ತಾರೆ. ಆದರೆ ಅಕ್ಕಿಯನ್ನು ನೆನೆಸಿ ಕಾಯಿ ತುರಿಯೊಂದಿಗೆ ರುಬ್ಬಿ, ಬೇಯಿಸಿ, ಹಲಸಿನ ಎಲೆಯಲ್ಲಿ ಕೋನ್ ಆಕಾರದಲ್ಲಿ ಮಾಡುವುದೇ ಈ ಕಡುಬಿನ ವಿಶೇಷತೆ! ಕೋನ್ ಮಾಡಲು:- ಹಲಸಿನ ಎಲೆಗಳನ್ನು ಚೆನ್ನಾಗಿ ತೊಳೆದು …