ALOO SAGU ಆಲೂ ಸಾಗು
ಆಲೂಗೆಡ್ಡೆಯಿಂದ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ. ಈ ಸಾಗು ಪೂರಿ, ರವೆ ಇಡ್ಲಿ, ಚಪಾತಿ, ದೋಸೆ ಜೊತೆಗೆ ಒಳ್ಳೆಯ ಕಾಂಬಿನೇಶನ್.
ಮಾಡುವ ವಿಧಾನ :-
2 ಆಲೂಗೆಡ್ಡೆ, 1 ಈರುಳ್ಳಿ, 2 ಟೋಮೋಟೋ, 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಿಡಿ ಹಸಿ ಬಟಾಣಿ ಬಿಡಿಸಿಡಿ.

2 ಚಮಚ ಕಡಲೇ ಪಪ್ಪು ನುಣ್ಣಗೆ ಪುಡಿ ಮಾಡಿಡಿ.


ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವು, ಚಿಟಿಕೆ ಅರಿಷಿಣ ಹಾಕಿ ನಂತರ ಚಿಟಿಕೆ ಅರಿಷಿಣ, ಈರುಳ್ಳಿ, ಆಲೂಗೆಡ್ಡೆ ಹಾಕಿ ಸ್ವಲ್ಪ ಬಾಡಿಸಿ. ನಂತರ ಟೋಮೇಟೋ, ಬಟಾಣಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ ಸ್ವಲ್ಪ ನೀರು ಚಿಮುಕಿಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಹುರಿಗಡಲೆ ಪುಡಿ, ಉಪ್ಪು ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ತರಕಾರಿಗಳು ಸಂಪೂರ್ಣವಾಗಿ ಬೆಂದ ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿದರೆ, ರುಚಿಯಾದ, ಸುಲಭವಾಗಿ ಮಾಡಬಹುದಾದ ಆಲೂ ಸಾಗು ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏
