Showing 564 Result(s)
ಖಾರ ತಿನಿಸುಗಳು

RIBBON MURUKKU ರಿಬ್ಬನ್ ಮುರುಕ್ಕು

ಇದು ಬಹಳ ಹಳೆಯ ರೆಸಿಪಿ. ಗೋಕುಲಾಷ್ಟಮಿಯಲ್ಲಿ ನಮ್ಮ ಮನೆಯಲ್ಲಿ ತಪ್ಪದೆ ಮಾಡುವ ತಿಂಡಿ. ಸುಲಭವಾಗಿ ಮಾಡಬಹುದಾದ ರುಚಿಯಾದ ತಿಂಡಿ! ಮಾಡುವ ವಿಧಾನ:- ಅಕ್ಕಿ ಹಿಟ್ಟು – 2ಕಪ್ ಹುರಿಗಡಲೆ ಪುಡಿ ( ಪುಟಾಣಿ ) – 1 ಕಪ್ ಬಿಳಿ ಎಳ್ಳು – 1 ಟೇಬಲ್ ಚಮಚ ಖಾರದ ಪುಡಿ – 1 ಟೇಬಲ್ ಚಮಚ ಇಂಗು – 1 ಟೀ ಚಮಚ ಜೀರಿಗೆ – 1 ಟೀ ಚಮಚ ಉಪ್ಪು – ರುಚಿಗೆ ತಕ್ಕಷ್ಟು ಬಿಸಿ …

ಸಾಂಬಾರು ಮತ್ತು ಪಲ್ಯಗಳು

IYENGARS PEPPER RASAM ಅಯ್ಯಂಗಾರ್ಸ್ ಪೆಪ್ಪರ್ ರಸಂ

ಮೆಣಸು ಆರೋಗ್ಯಕ್ಕೆ ಬಹಳ ಒಳ್ಳೆಯದು! ಕೆಮ್ಮು, ನೆಗಡಿಗೆ ರಾಮಬಾಣ ಇದ್ದ ಹಾಗೆ! ಮಳೆಗಾಲದಲ್ಲಿ ಚಳಿಗೆ, ನೆಗಡಿಗೆ ಈ ಬಿಸಿ ಬಿಸಿ ಸಾರು ಕುಡಿದು ನೋಡಿ! ಇದು ರುಚಿಕರ ಹಾಗೂ ಆರೋಗ್ಯಕರ! ಮಾಡುವ ವಿಧಾನ:- 1 ಚಿಕ್ಕ ಲೋಟ ಬೇಳೆಯನ್ನು ತೊಳೆದು ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. ಬೇಕಾದರೆ ಸ್ವಲ್ಪ ನೀರು ಹಾಕಿ ಸೋರಿ ಹಾಕಿ ಬೇಳೆಯ ಕಟ್ಟು ತೆಗೆದಿಡಿ. ಬೆಂದ ಬೇಳೆಯನ್ನು ಪಲ್ಯ, ದಾಲ್ ಮಾಡಲು ಉಪಯೋಗಿಸಬಹುದು. ಅರ್ಧ ದೊಡ್ಡ ಹೋಳು ತೆಂಗಿನ ಕಾಯಿ …

ಸಾಂಬಾರು ಮತ್ತು ಪಲ್ಯಗಳು

PUDINA CHUTNEY ಪುದೀನಾ ಚಟ್ನಿ

ಪುದೀನಾ ಸೊಪ್ಪಿನ ರುಚಿಯಾದ ಚಟ್ನಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಕಟ್ಟು ಪುದೀನಾ ಸೊಪ್ಪು ಬಿಡಿಸಿ ತೊಳೆದು 1 ಚಮಚ ಎಣ್ಣೆ ಹಾಕಿ ಸ್ವಲ್ಪ ಹುರಿದಿಡಿ. 4 ಟೇಬಲ್ ಚಮಚ ಕಾಯಿ ತುರಿದಿಡಿ. 2 ಟೇಬಲ್ ಚಮಚ ಕಡಲೇ ಬೇಳೆ ಎಣ್ಣೆ ಹಾಕದೆ ಹುರಿದಿಡಿ. 6 ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. Mixie jar ಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು, ಉಪ್ಪು, ಸ್ವಲ್ಪ …

ಸಿಹಿ ತಿನಿಸುಗಳು

ELLINA BURFI ಎಳ್ಳಿನ ಬರ್ಫಿ

ಸುಲಭವಾಗಿ ಮಾಡಬಹುದಾದ ರುಚಿಯಾದ ಬರ್ಫಿ! ಎಳೆ ಪಾಕ ತೆಗೆಯುವ ಅವಶ್ಯಕತೆ ಇಲ್ಲ! ಹೊಸದಾಗಿ ಅಡುಗೆ ಕಲಿಯುವವರು ಕೂಡ ಮಾಡಬಹುದು! ಮಾಡುವ ವಿಧಾನ:- 1 ಅಳತೆ ಬಿಳಿ ಎಳ್ಳು ಸಣ್ಣ ಉರಿಯಲ್ಲಿ ಪಟ ಪಟ ಎಂದು ಶಬ್ದ ಬರುವ ಹಾಗೆ ಹುರಿದಿಡಿ. 1 ಅಳತೆ ಬೆಲ್ಲ ಪುಡಿ ಮಾಡಿಡಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಕರಗಿದ ಮೇಲೆ ಬೆಲ್ಲದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲವನ್ನು ಸಂಪೂರ್ಣವಾಗಿ ಕರಗಿಸಿ. ಬೆಲ್ಲ ನೊರೆ ನೊರೆಯಾಗಿ ಆದ ತಕ್ಷಣ ಹುರಿದ …

ಸಾಂಬಾರು ಮತ್ತು ಪಲ್ಯಗಳು

MAVINA KAYI GOJJU ಮಾವಿನ ಕಾಯಿ ಗೊಜ್ಜು

ಮಾವಿನ ಕಾಯಿಯ ರುಚಿಯಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಒಂದು ತೋತಾಪುರಿ ಮಾವಿನ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ದೋರೆ ಗಾಯಿ! ಅಂದರೆ ಕಾಯಿಯೂ ಅಲ್ಲದ ಹಣ್ಣು ಅಲ್ಲದ್ದು! ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೀ ಚಮಚ ಬಿಳಿ ಎಳ್ಳು – 2 ಟೀ ಚಮಚ ಕರಿ ಮೆಣಸು – 1/4 ಟೀ ಚಮಚ ಬ್ಯಾಡಗಿ ಮೆಣಸಿನಕಾಯಿ – 6 …

Tindi Tinisu ಖಾರ ತಿನಿಸುಗಳು

HALASINA BEEJADA VADE ಹಲಸಿನ ಬೀಜದ ವಡೆ

ಮಳೆಗಾಲದ ದಿನಗಳಲ್ಲಿ ಎಷ್ಟು ಬಿಸಿ ಬಿಸಿಯಾದ ಬೋಂಡಾ ವಡೆ ತಿಂದರೂ ಸಾಲದು. ಹಲಸಿನ ಬೀಜದ ಗರಿ ಗರಿಯಾದ ವಡೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಹಲಸಿನ ಬೀಜದ ಸಿಪ್ಪೆ ತೆಗೆದು ಕುಕ್ಕರಿನಲ್ಲಿ ಹಾಕಿ ಮೂರ್ನಾಲ್ಕು ವಿಷಲ್ ಕೂಗಿಸಿಡಿ. ನಂತರ ಮೇಲಿನ ಕೆಂಪು ಸಿಪ್ಪೆಯನ್ನು ತೆಗೆದು ನೀರು ಹಾಕದೆ ಪುಡಿ ಮಾಡಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 6 ರಿಂದ 8 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಪುಡಿ ಮಾಡಿದ …

ಸಾಂಬಾರು ಮತ್ತು ಪಲ್ಯಗಳು

PANCHA RANGI DAL ಪಂಚ ರಂಗಿ ದಾಲ್

ದಾಲ್ ಉತ್ತರ ಭಾರತದ ಜನಪ್ರಿಯ ಆಹಾರ! ಅವರ ಊಟದಲ್ಲಿ ಪ್ರತಿದಿನ ದಾಲ್ ಇರಲೇಬೇಕು. ಅದರ ರುಚಿಯಾದ, ವಿಭಿನ್ನವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಲೋಟ ಅಲಸಂದೆ ಕಾಳನ್ನು 4 ಗಂಟೆ ನೆನೆಸಿಡಿ. ತೊಗರಿ ಬೇಳೆ, ಕಡಲೇ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ನೆಂದ ಅಲಸಂದೆ ಕಾಳು ತಲಾ ಅರ್ಧ ಲೋಟದಂತೆ ಒಟ್ಟಿಗೆ ಹಾಕಿ ಸಾಕಷ್ಟು ನೀರಿನೊಡನೆ ಮೂರ್ನಾಲ್ಕು ವಿಷಲ್ ಕೂಗಿಸಿಡಿ. 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು …

ಸಿಹಿ ತಿನಿಸುಗಳು

HALASINA BEEJADA HALWA ಹಲಸಿನ ಬೀಜದ ಹಲ್ವಾ

ಈಗ ಹಲಸಿನ ಹಣ್ಣಿನ ಸೀಸನ್! ಎಲ್ಲಾ ಕಡೆ ರಾಶಿ ರಾಶಿ ಹಲಸಿನ ಹಣ್ಣು! ಹಣ್ಣು ತಿಂದು ಬೀಜವನ್ನು ಕಸದ ಬುಟ್ಟಿಗೆ ಎಸೆಯುವ ಬದಲು ರುಚಿಯಾದ ಹಲ್ವಾ ಮಾಡಿ. ಹೇಗೆ ಮಾಡೋದು ಅಂದಿರಾ? ಮಾಡುವ ವಿಧಾನ:- ಒಂದು ಅಳತೆ ಹಲಸಿನ ಬೀಜದ ಮೇಲಿನ ಸಿಪ್ಪೆ ತೆಗೆದು ಮೂರ್ನಾಲ್ಕು ವಿಷಲ್ ಕೂಗಿಸಿಡಿ. ತಣ್ಣಗಾದ ನಂತರ ಅದರ ಮೇಲಿನ ಕೆಂಪು ಸಿಪ್ಪೆ ತೆಗೆದು ಮೊದಲು ಹಾಗೆ ಪುಡಿ ಮಾಡಿ. ನಂತರ ಸ್ವಲ್ಪ ಹಾಲು ಅಥವಾ ನೀರು ಹಾಕಿ ನುಣ್ಣಗೆ ರುಬ್ಬಿ. ಒಂದು …

Tindi Tinisu ಖಾರ ತಿನಿಸುಗಳು

ONION RINGS ಆನಿಯನ್ ರಿಂಗ್ಸ್

ಮಳೆಗಾಲಕ್ಕೆ ಹೇಳಿ ಮಾಡಿಸಿದ ತಿಂಡಿ! ಮಳೆ ಬರುವಾಗ ಬಿಸಿ ಬಿಸಿ ಕಾಫಿ ಜೊತೆಗೆ ತಟ್ಟೆ ಪೂರ ಕೊಟ್ಟರೂ ನಿಮಿಷದಲ್ಲಿ ಖಾಲಿ ಆಗುತ್ತದೆ! ಮಾಡುವ ವಿಧಾನ:- ದೊಡ್ಡ ದೊಡ್ಡ ಈರುಳ್ಳಿಯನ್ನು ಸಿಪ್ಪೆ ತೆಗೆದು ಅರ್ಧ ಇಂಚು ಅಗಲಕ್ಕೆ ಕತ್ತರಿಸಿ, ರಿಂಗ್ ಗಳನ್ನು ಬೇರೆ ಬೇರೆ ಮಾಡಿಡಿ. ಒಂದು ಬಟ್ಟಲಿನಲ್ಲಿ ಅರ್ಧ ಬಟ್ಟಲು ಕಡಲೇ ಹಿಟ್ಟು, ಅರ್ಧ ಬಟ್ಟಲು ಅಕ್ಕಿ ಹಿಟ್ಟು, ಉಪ್ಪು, 1 ಚಮಚ ಖಾರದ ಪುಡಿ, ಸ್ವಲ್ಪ ಜೀರಿಗೆ, ಇಂಗು ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ …

ಸಿಹಿ ತಿನಿಸುಗಳು

BREAD CRUMBS ಬ್ರೆಡ್ ಕ್ರಂಬ್ಸ್

ನಾವು ಸಾಧಾರಣವಾಗಿ ಕಟ್ಲೆಟ್, ರೋಲ್ಸ್, ಕಬಾಬ್ ಮಾಡುವಾಗ ಗರಿ ಗರಿಯಾಗಿ ಬರಲೆಂದು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕರಿಯುತ್ತೇವೆ. ದೊಡ್ಡ ದೊಡ್ಡ ನಗರಗಳಲ್ಲಿ ರೆಡಿ ಮೇಡ್ ಬ್ರೆಡ್ ಕ್ರಂಬ್ಸ್ ಸಿಗುತ್ತದೆ! ಚಿಕ್ಕ ಚಿಕ್ಕ ಊರುಗಳಲ್ಲಿ ಸಿಗುವುದಿಲ್ಲ! ಅದಕ್ಕಾಗಿ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವಿಧಾನ ಇಲ್ಲಿದೆ ನೋಡಿ! Sandwich ಮಾಡುವಾಗ ಬ್ರೆಡ್ ನ ಅಂಚುಗಳನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯುವ ಬದಲು ಹೀಗೆ ಮಾಡಿ ನೋಡಿ! ( ಸಾಲ್ಟ್ ಬ್ರೆಡ್ ಉಪಯೋಗಿಸಿದರೆ ಒಳ್ಳೆಯದು! ) ಮಾಡುವ ವಿಧಾನ :- …