Showing 64 Result(s)
ಸಿಹಿ ತಿನಿಸುಗಳು

BESAN HOLIGE ಬೇಸನ್ ಹೋಳಿಗೆ

BESAN HOLIGE ಬೇಸನ್ ಹೋಳಿಗೆ ಹೋಳಿಗೆ ಒಂದು ಜನಪ್ರಿಯ ಸಾಂಪ್ರಾದಾಯಕ ಸಿಹಿ. ಈ ಜನಪ್ರಿಯ ಸಿಹಿಯನ್ನು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಈ ಹೋಳಿಗೆ ಮಾಡಲು ಬೇಳೆ ಬೇಯಿಸುವ, ರುಬ್ಬುವ ಕೆಲಸ ಇಲ್ಲ. ಸುಲಭವಾಗಿ, ಬೇಗನೆ ಮಾಡಬಹುದು. ಮಾಡುವ ವಿಧಾನ :- ಕಣಕ ಮಾಡಲು:- ಅರ್ಧ ಅಳತೆ ಮೈದಾ, ಅರ್ಧ ಅಳತೆ ಚಿರೋಟಿ ರವೆ, ಚಿಟಿಕೆ ಉಪ್ಪು, ಚಿಟಿಕೆ ಅರಿಷಿಣ, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟು ಕಲೆಸಿಡಿ. …

ಖಾರ ತಿನಿಸುಗಳು

MASALA SHANKARA POLI ಮಸಾಲ ಶಂಕರ ಪೋಳಿ

MASALA SHANKARA POLI ಮಸಾಲ ಶಂಕರ ಪೋಳಿ ಶಂಕರ ಪೋಳಿ ಎಲ್ಲರಿಗೂ ಇಷ್ಟವಾಗುವ, ಸುಲಭವಾಗಿ ಮಾಡಬಹುದಾದ ತಿಂಡಿ. ಸಾಧಾರಣವಾಗಿ ಎಲ್ಲರೂ ಸಿಹಿ ಶಂಕರ ಪೋಳಿ ಮಾಡುತ್ತಾರೆ. ಹೀಗೊಂದು ಸಲ ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟ ಆಗುತ್ತದೆ. ಮಾಡುವ ವಿಧಾನ :- 1 ಮಾಗಿದ ತೋತಾಪುರಿ ಸಿಪ್ಪೆ ತೆಗೆದು ತುರಿದು ನೀರು ಸೇರಿಸದೆ ನುಣ್ಣಗೆ ರುಬ್ಬಿಡಿ. 1 ಚಮಚ ಜೀರಿಗೆ, 1/2 ಚಮಚ ಕರಿ ಮೆಣಸು ತರಿ ತರಿಯಾಗಿ ಪುಡಿ ಮಾಡಿಡಿ. 1/2 ಕಪ್ ಮೈದಾ, 1/2 …

ಖಾರ ತಿನಿಸುಗಳು

VEGETABLES LOLLIPOP ವಿಜಿಟೇಬಲ್ ಲಾಲಿಪಾಪ್

VEGETABLES LOLLIPOP ವಿಜಿಟೇಬಲ್ ಲಾಲಿಪಾಪ್ ಮಿಶ್ರ ತರಕಾರಿಗಳನ್ನು ಹಾಕಿ ಮಾಡುವ ರುಚಿಯಾದ ರೆಸಿಪಿ ಇಲ್ಲಿದೆ. ಶಾಲೆಯಿಂದ ಮನೆಗೆ ಬಂದ ಮೇಲೆ ಮಕ್ಕಳಿಗೆ ಮಾಡಿಕೊಟ್ಟರೆ ಖುಷಿಯಾಗಿ ತಿನ್ನುತ್ತಾರೆ. ಮಾಡುವ ವಿಧಾನ :– ಎರಡು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಒಂದು ಹಿಡಿ ಸ್ವೀಟ್ ಕಾರ್ನ್ ಬೇಯಿಸಿ ಪುಡಿ ಮಾಡಿಡಿ. ಅದರ ಬದಲು ಬಟಾಣಿ ಹಾಕಬಹುದು. ಅಥವಾ ಎರಡೂ ಹಾಕಬಹುದು. ಎರಡು ಕ್ಯಾರೆಟ್, ಸ್ವಲ್ಪ ಕ್ಯಾಬೇಜ್ ತುರಿದಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು, …

Salad

JAJJU MOOLANGI ಜಜ್ಜು ಮೂಲಂಗಿ

JAJJU MOOLANGI ಜಜ್ಜು ಮೂಲಂಗಿ ಮೂಲಂಗಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರಿಗೆ ಅದರ ವಾಸನೆ ಹಿಡಿಸುವುದಿಲ್ಲ. ಹಾಗೆಂದು ಅದನ್ನು ತಿನ್ನದೆ ಇರಲು ಆಗುವುದೇ? ಹಸಿ ಮೂಲಂಗಿಯ ರುಚಿಯಾದ ರೆಸಿಪಿ ಇಲ್ಲಿದೆ! ಇದು ನನ್ನ ತಾಯಿ ಮಾಡುತ್ತಿದ್ದ ವಿಧಾನ! ಒರಳು ಕಲ್ಲಿನಲಿ ರುಬ್ಬಿ ಮಾಡಿದರೆ ರುಚಿ ಹೆಚ್ಚು. ಮಾಡುವ ವಿಧಾನ :- 4 ಎಳೆಯ ಮೂಲಂಗಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಅರ್ಧ ಹೋಳು ತೆಂಗಿನ ಕಾಯಿ ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. …

ಉಪಹಾರ

GONGURA( PUNDI) CHITHRANNA ಗೊಂಗೂರ (ಪುಂಡಿ) ಚಿತ್ರಾನ್ನ

GONGURA( PUNDI) CHITHRANNA ಗೊಂಗೂರ (ಪುಂಡಿ) ಚಿತ್ರಾನ್ನ ಅನ್ನ ಉದುರುದುರಾಗಿ ಮಾಡಿ ತಟ್ಟೆಯಲ್ಲಿ ಹರಡಿಡಿ. ಚಿತ್ರಾನ್ನ ಪ್ರಿಯರೆ ನಿಮ್ಮ ಫೇವರೈಟ್ ತಿಂಡಿ ಪಟ್ಟಿಗೆ ಹೊಸ ಸೇರ್ಪಡೆ ಈ ಗೊಂಗೂರ ಸೊಪ್ಪಿನ ಚಿತ್ರಾನ್ನ. ಮಾಡುವುದು ಸುಲಭ! ತಿನ್ನಲು ರುಚಿಕರ! ಮಾಡುವ ವಿಧಾನ :- ಎರಡು ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. ಗೊಂಗೂರ ಸೊಪ್ಪು ನಿಮಗೆ ಹುಳಿ ಬೇಕಾಗುವಷ್ಟು ಬಿಡಿಸಿ ತೊಳೆದು ನೀರು ಸೋರಿ ಹಾಕಿಡಿ. ನಾನು ನಾಲ್ಕು ಜನರಿಗೆ ಒಂದು …

ಸಾಂಬಾರು ಮತ್ತು ಪಲ್ಯಗಳು

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ

STUFFED CAPSICUM GRAVY ಸ್ಟಫ್ಡ್ ಕ್ಯಾಪ್ಸಿಕಮ್ ಗ್ರೇವಿ ದಪ್ಪ ಮೆಣಸಿನಕಾಯಿಯ ರುಚಿಯಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- ಸ್ಟಫ್ಫಿಂಗ್ ಮಾಡಲು:- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಜೀರಿಗೆ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಅರಿಷಿಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಬಾಡಿಸಿ. ಅರ್ಧ ಚಮಚ ಖಾರದ ಪುಡಿ ಬೇಯಿಸಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನಿಂಬೆ …

ತಂಪು ಪಾನೀಯಗಳು

RAW MANGO JUICE ರಾ ಮ್ಯಾಂಗೋ ಜ್ಯೂಸ್

RAW MANGO JUICE ರಾ ಮ್ಯಾಂಗೋ ಜ್ಯೂಸ್ ಮಾವಿನ ಕಾಯಿ ಸೀಸನ್ ನಲ್ಲಿ ಮಾಡಬಹುದಾದ ರುಚಿಯಾದ ಜ್ಯೂಸ್ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಸ್ವಲ್ಪ ಮಾಗಿದ ತೋತಾಪುರಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿಡಿ. ಅರ್ಧ ಚಮಚ ಕರಿ ಮೆಣಸು ಪುಡಿ ಮಾಡಿಡಿ. ನಾಲ್ಕು ಏಲಕ್ಕಿ ಪುಡಿ ಮಾಡಿಡಿ. ಬಟ್ಟಲಿನಲ್ಲಿ ಮಾವಿನ ಕಾಯಿಯ ರಸ, ಮೆಣಸಿನ ಪುಡಿ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಅಥವಾ …

ಉಪಹಾರ

PALAK PEAS PANEER RICE ಪಾಲಾಕ್ ಪೀಸ್ ಪನ್ನೀರ್ ರೈಸ್

PALAK PEAS PANEER RICE ಪಾಲಾಕ್ ಪೀಸ್ ಪನ್ನೀರ್ ರೈಸ್ ಪಾಲಾಕ್ ಸೊಪ್ಪಿನ ರುಚಿಯಾದ ರೆಸಿಪಿ ಇಲ್ಲಿದೆ :- ಉಂಡೆ ಮಾಡಲು:- ಹಸಿರು ಬಟಾಣಿ ಬೇಯಿಸಿ ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. 100 ಗ್ರಾಂ ಪನ್ನೀರ್ ತುರಿದಿಡಿ. ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್ ಸೇರಿಸಿ …

Chutney

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು

GONGURA CHUTNEY /THOKKU ಗೊಂಗೂರ ಚಟ್ನಿ / ತೊಕ್ಕು ಚಟ್ನಿ ನಮ್ಮ ಭಾರತೀಯ ಆಹಾರದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ತಿಂಡಿ ಜೊತೆಗೆ ಒಂದು ಚಟ್ನಿ ಇರಲೇಬೇಕು. ಸಾಧಾರಣವಾಗಿ ಚಟ್ನಿ ತೆಂಗಿನ ಕಾಯಿ, ಹುರಿಗಡಲೆ ಹಾಕಿ ಮಾಡುವುದು. ಹುಳಿಯಾದ ಗೊಂಗೂರ ಸೊಪ್ಪಿನ ಚಟ್ನಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಎರಡು ಕಟ್ಟು ಗೊಂಗೂರ ಸೊಪ್ಪು ಬಿಡಿಸಿ ಚೆನ್ನಾಗಿ ತೊಳೆದು ನೀರು ಸೋರಿ ಹಾಕಿಡಿ. ನೀರಿನಂಶ ಪೂರ್ತಿಯಾಗಿ ಹೋಗಲು ಬಟ್ಟೆಯ ಮೇಲೆ ಹರಡಿ. 1 ಟೇಬಲ್ …

ಉಪಹಾರ

MANGO BIRIYANI ಮ್ಯಾಂಗೋ ಬಿರಿಯಾನಿ

MANGO BIRIYANI ಮ್ಯಾಂಗೋ ಬಿರಿಯಾನಿ ಮಾವಿನ ಕಾಯಿ ಪ್ರಿಯರಿಗೆ ಇಲ್ಲಿದೆ ನಿಮಗಾಗಿ ಒಂದು ಹೊಸ ರುಚಿ. ಮಾಡುವುದು ಸುಲಭ, ರುಚಿಕರ ಕೂಡ. ಮಾಡುವ ವಿಧಾನ:- ಒಂದು ಲೋಟ ಬಾಸುಮತಿ ಅಕ್ಕಿ ತೊರೆದು ನೆನೆಸಿ 90 % ಬೇಯಿಸಿಡಿ. ಅರ್ಧ ತೋತಾಪುರಿ ಮಾವಿನ ಕಾಯಿ ಸಿಪ್ಪೆ ತೆಗೆದು ತುರಿದಿಡಿ. ನೀವು ಹೆಚ್ಚು ಮಾಡುವುದಾದರೆ ಅಥವಾ ನಿಮಗೆ ಹುಳಿ ಇಷ್ಟ ಆಗುವುದಾದರೆ ಒಂದು ಮಾವಿನ ಕಾಯಿ ಪೂರ್ತಿಯಾಗಿ ಹಾಕಬಹುದು. ಒಂದು ಹಿಡಿ ಕೊತ್ತಂಬರಿಸೊಪ್ಪು, ಒಂದು ಹಿಡಿ ಪುದೀನ, 1 ಚಿಕ್ಕ …