PALAK PEAS PANEER RICE ಪಾಲಾಕ್ ಪೀಸ್ ಪನ್ನೀರ್ ರೈಸ್
ಪಾಲಾಕ್ ಸೊಪ್ಪಿನ ರುಚಿಯಾದ ರೆಸಿಪಿ ಇಲ್ಲಿದೆ :-
ಉಂಡೆ ಮಾಡಲು:-
ಹಸಿರು ಬಟಾಣಿ ಬೇಯಿಸಿ ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. 100 ಗ್ರಾಂ ಪನ್ನೀರ್ ತುರಿದಿಡಿ. ನಾಲ್ಕು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.




ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಕಲೆಸಿ ಪುಟ್ಟ ಪುಟ್ಟ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕರಿದಿಡಿ. ನೀರು ಸೇರಿಸುವ ಅವಶ್ಯಕತೆ ಇಲ್ಲ. ಬೇಕಾದರೆ ಕೆಲವೇ ಹನಿಗಳಷ್ಟು ನೀರು ಚಿಮುಕಿಸಿ.
ಬಾಸುಮತಿ ಅಕ್ಕಿಯನ್ನು ತೊಳೆದು ಬಿಡಿ ಬಿಡಿಯಾಗಿ ಅನ್ನ ಮಾಡಿಡಿ.
ಎರಡು ಕಟ್ಟು ಪಾಲಾಕ್ ಸೊಪ್ಪು ಬಾಣಲೆಯಲ್ಲಿ ಬೇಯಿಸಿ ನೀರು ತೆಗೆದು ರುಬ್ಬಿಡಿ.
ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ನಾನು ಹಸಿರು ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ ಎಣ್ಣೆ / ತುಪ್ಪ ಹಾಕಿ ಜೀರಿಗೆ, ಈರುಳ್ಳಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಹಸಿರು ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ರುಬ್ಬಿದ ಪಾಲಾಕ್ ಹಾಕಿ ಬೇಯಿಸಿದ ಅನ್ನ ಹಾಕಿ ಸ್ವಲ್ಪ ನಿಂಬೆ ಹಣ್ಣಿನ ರಸ ಬೇಕಾದರೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ, ಕೊನೆಯಲ್ಲಿ ಮಾಡಿಟ್ಟ ಉಂಡೆಗಳನ್ನು ಹಾಕಿದರೆ ರುಚಿಯಾದ ಪಾಲಾಕ್ ಪೀಸ್ ಪನ್ನೀರ್ ರೈಸ್ ಸವಿಯಲು ಸಿದ್ಧ.
ಈ ಉಂಡೆ ಗರಿ ಗರಿಯಾಗಿದ್ದರೆ ಚೆಂದ. ಮೊದಲೇ ಹಾಕಿದರೆ ಮೆತ್ತಗೆ ಆಗುತ್ತದೆ. ತಿನ್ನುವ ಮೊದಲು ಸೇರಿಸಿ.

ಧನ್ಯವಾದಗಳು 🙏🙏🙏
