Tindi Tinisu ಸಿಹಿ ತಿನಿಸುಗಳು

BADAM BURFI ಬಾದಾಮ್ ಬರ್ಫಿ

ಬಾದಾಮಿಯಿಂದ ಮಾಡಬಹುದಾದ ರುಚಿಯಾದ ಬರ್ಫಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಒಂದು ಅಳತೆ ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಡಿ. ನೀರು ಹಾಕಬಾರದು. ಒಂದು ಅಳತೆ ಸಕ್ಕರೆಗೆ ಅರ್ಧ ಅಳತೆ ನೀರು ಸೇರಿಸಿ ಕುದಿಯಲು ಇಡಿ.   ಸಕ್ಕರೆ ಪೂರ್ತಿಯಾಗಿ ಕರಗಿ ಒಂದೆಳೆ ಪಾಕ ಬಂದೊಡನೆ ಬಾದಾಮಿ ಪುಡಿ ಸೇರಿಸಿ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ. ಎರಡು ಚಮಚ ತುಪ್ಪ ಹಾಕಿ ಕಲೆಸುತ್ತಾ ಇರಿ. ಮಿಶ್ರಣ ಗಟ್ಟಿಯಾಗಿ ಅಂಚನ್ನು ಬಿಡುತ್ತಾ …

Oota ಉಪಹಾರ

VEGETABLE BATH ವೆಜಿಟೇಬಲ್ ಬಾತ್ (ದೇವಸ್ಥಾನದ ಶೈಲಿ)

ಸಾಧಾರಣವಾಗಿ ದೇವಸ್ಥಾನದಲ್ಲಿ ಮಾಡುವ ಶೈಲಿಯ ತರಕಾರಿಗಳ ಬಾತ್ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಕಡಲೇ ಬೇಳೆ – 1 ಟೇಬಲ್ ಚಮಚ ಉದ್ದಿನ ಬೇಳೆ – 1 ಟೇಬಲ್ ಚಮಚ ಧನಿಯಾ – 1 ಟೇಬಲ್ ಚಮಚ ಒಣ ಕೊಬ್ಬರಿ – 3 ಟೇಬಲ್ ಚಮಚ ಚಕ್ಕೆ – 2 ಇಂಚು ಲವಂಗ – 4 ಏಲಕ್ಕಿ – 2 ಬ್ಯಾಡಗಿ ಮೆಣಸಿನಕಾಯಿ – 8 ರಿಂದ 10 ಗುಂಟೂರು ಮೆಣಸಿನ ಕಾಯಿ …

ತಂಪು ಪಾನೀಯಗಳು

AMLA JUICE ಆಮ್ಲಾ ಜ್ಯೂಸ್

ಆಮ್ಲಾ ಅಂದರೆ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು! ವಿಟಮಿನ್ ‘ಸಿ’ ಬೆಟ್ಟದಷ್ಟು ತುಂಬಿದೆ. ಇದರ ರುಚಿಯಾದ ಜ್ಯೂಸ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಅಥವಾ 3 ಬೆಟ್ಟದ ನೆಲ್ಲಿಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೀಜ ತೆಗೆದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿ. ಚಿಟಿಕೆ ಉಪ್ಪು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ ತಕ್ಷಣ ಕುಡಿಯಿರಿ.   ಅಥವಾ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಬೇಕಾದರೂ ಹಾಕಿಕೊಳ್ಳಬಹುದು. ಧನ್ಯವಾದಗಳು

Oota ಸಾಂಬಾರು ಮತ್ತು ಪಲ್ಯಗಳು

PEPPER RASAM ಪೆಪ್ಪರ್ ರಸಂ ( ಮದುವೆ ಮನೆ ಶೈಲಿ )

ಕರಿ ಮೆಣಸು ಮಳೆಗಾಲಕ್ಕೆ, ಛಳಿಗೆ ಒಳ್ಳೆಯದು. ಗಂಟಲಿಗೆ ಹಿತವಾಗಿರುತ್ತದೆ. ಸಾಧಾರಣವಾಗಿ ಮದುವೆ ಮನೆಯಲ್ಲಿ ಈ ತರಹ ರಸಂ ಮಾಡುತ್ತಾರೆ! ಒಂದು ಚಿಕ್ಕ ಲೋಟ ಬೇಳೆಯನ್ನು ತೊಳೆದು ಚಿಟಿಕೆ ಅರಿಷಿಣ, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ ಕಟ್ಟು ಸೋರಿ ಹಾಕಿಡಿ. ಈ ರೆಸಿಪಿಯಲ್ಲಿ ನಮಗೆ ಕಟ್ಟು ಮಾತ್ರ ಬೇಕು. ಬೆಂದ ಬೇಳೆಯನ್ನು ಪಲ್ಯ, ಸಾಂಬಾರ್, ದಾಲ್ ಮಾಡಲು ಬಳಸಬಹುದು. 4 ಚಮಚ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ, ಸ್ವಲ್ಪ ಕೊತ್ತಂಬರಿ …

ಉಪಹಾರ ತಂಪು ಪಾನೀಯಗಳು

RAGI AMBALI ರಾಗಿ ಅಂಬಲಿ

“ರಾಗಿ ತಿಂದವ ನಿರೋಗಿ” ಅನ್ನುವ ಮಾತಿನಂತೆ ರಾಗಿ ಆರೋಗ್ಯಕರವಾದ ಧಾನ್ಯ! ಪುಟ್ಟ ಕಾಳಿನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಈ ಅಂಬಲಿ ಮಾಡುವುದು ಸುಲಭ! ಆರೋಗ್ಯಕರ!! ದೇಹಕ್ಕೆ ತಂಪು!!! ಬೇಕಾಗುವ ಸಾಮಗ್ರಿಗಳು :- ರಾಗಿ ಹಿಟ್ಟು – 1/4 ಲೋಟಕ್ಕಿಂತ ಸ್ವಲ್ಪ ಕಡಿಮೆ ನೀರು – 1 ಲೋಟ ಮಜ್ಜಿಗೆ – 1/2 ಲೋಟ ಉಪ್ಪು – ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು – ಸ್ವಲ್ಪ ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಚಮಚ ( ಬೇಕಾದರೆ …

Tindi Tinisu ಸಿಹಿ ತಿನಿಸುಗಳು

RAVA KAJJAYA ರವಾ ಕಜ್ಜಾಯ

ಕಜ್ಜಾಯ ಸಾಂಪ್ರಾದಾಯಕ ಸಿಹಿ. ಮಾಡುವುದು ಸ್ವಲ್ಪ ಕಷ್ಟವಾದರೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ಎಲ್ಲರೂ ಕಜ್ಜಾಯ ಮಾಡುವುದು ನೆನೆಸಿದ ಅಕ್ಕಿ ಹಿಟ್ಟು ಮಾಡಿ. ನಮ್ಮ ಅತ್ತೆ ಮಾಡುತ್ತಿದ್ದ ಸುಲಭವಾದ ವಿಧಾನ ಇಲ್ಲಿದೆ ನೋಡಿ! ಈ ಕಜ್ಜಾಯ ಮಾಡುವುದು ಚಿರೋಟಿ ರವೆಯಿಂದ. ಇದನ್ನು ಇನ್ಸ್ಟೆಂಟ್ ಕಜ್ಜಾಯ ಅಂತ ಬೇಕಾದರೂ ಕರೆಯಬಹುದು. ಮಾಡುವುದು ಸುಲಭ! ಗರಿ ಗರಿಯಾಗಿರುತ್ತದೆ. ಮಾಡುವ ವಿಧಾನ:- ಒಂದು ಬೆಲ್ಲ ಪುಡಿ ಮಾಡಿಡಿ. ಅರ್ಧ ಲೋಟ ಕಾಯಿ ತುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ.   …

Oota ಉಪಹಾರ

TOMATO PALAV ಟೋಮೇಟೋ ಪಲಾವ್

ಪಲಾವ್ ಎಷ್ಟು ತರಹ ಮಾಡಿದರೂ ಚೆನ್ನಾಗಿರುತ್ತದೆ! ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಟೋಮೇಟೋ ಪಲಾವ್ ಬಹಳ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 4 ಆಪಲ್ ಟೋಮೇಟೋ ತೊಳೆದು ಸಣ್ಣಗೆ ಹೆಚ್ಚಿ ನುಣ್ಣಗೆ ರುಬ್ಬಿಡಿ. 1 ಲೋಟ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹಸಿ ಬಟಾಣಿ ಸ್ವಲ್ಪ ಬಿಡಿಸಿಡಿ. ಕುಕ್ಕರಿನಲ್ಲಿ 6 ಚಮಚ ಎಣ್ಣೆ …

ಸಾಂಬಾರು ಮತ್ತು ಪಲ್ಯಗಳು

MIX VEG HANDI ಮಿಕ್ಸ್ ವೆಜ್ ಹಂಡಿ

ನಿಮಗೆ ಇಷ್ಟವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ. ಮಾಡುವ ವಿಧಾನ :- ಮೂರು ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದಿಡಿ. 8 ಗೋಡಂಬಿ ಬಿಸಿ ನೀರಿನಲ್ಲಿ ಹಾಕಿ ನೆನೆಸಿ ಟೋಮೇಟೋ ಜೊತೆಗೆ ರುಬ್ಬಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಆಲೂಗೆಡ್ಡೆ, ಗೋಭಿ, ಕ್ಯಾಪ್ಸಿಕಮ್ ತೊಳೆದು ಸಣ್ಣಗೆ ಹೆಚ್ಚಿಡಿ. ದಪ್ಪ ತಳದ ಬಾಣಲೆಯಲ್ಲಿ 4 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ. …

Tindi Tinisu ಸಿಹಿ ತಿನಿಸುಗಳು

BELLADA BESAN LADDU ಬೆಲ್ಲದ ಬೇಸನ್ ಲಡ್ಡು

ಬೇಸನ್ ಲಡ್ಡು ಜನಪ್ರಿಯ ಸಿಹಿ. ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು! ಒಂದು ಸಲ ಬೆಲ್ಲ ಹಾಕಿ ಮಾಡಿ ನೋಡಿ! ಖಂಡಿತಾ ಇನ್ನು ಮುಂದೆ ಯಾವಾಗ ಮಾಡಿದರೂ ಬೆಲ್ಲ ಹಾಕಿಯೇ ಮಾಡ್ತೀರ! ಅಷ್ಟು ರುಚಿಕರ, ಆರೋಗ್ಯಕರ. ಮಾಡುವುದು ಕೂಡ ಬಹಳ ಸುಲಭ! ಮಾಡುವ ವಿಧಾನ:- 1/2 ಅಥವಾ 3/4 ಅಳತೆ ಬೆಲ್ಲ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಬೆಲ್ಲ ಪುಡಿ ಮಾಡಿದ ಮೇಲೆ ಅಳತೆ ಮಾಡಿ). ಸಿಹಿ ನಿಮ್ಮ …

Oota ಉಪಹಾರ

SPICY PANEER & PANEER PARATHA ಸ್ಪೈಸಿ ಪನ್ನೀರ್ & ಪನ್ನೀರ್ ಪರಾಟ

ಸಾಧಾರಣವಾಗಿ ಪನ್ನೀರ್ ಸಪ್ಪೆಯಾಗಿರುತ್ತದೆ. ಇದರಿಂದ ಸಿಹಿ ಅಥವಾ ಖಾರಾ ಯಾವುದಾದರೂ ನಿಮಗಿಷ್ಟವಾದ ಆಹಾರ ಮಾಡಬಹುದು. ಇಲ್ಲಿದೆ ಸ್ಪೈಸಿ ಪನ್ನೀರ್ ಮಾಡುವ ರೆಸಿಪಿ. ಇದರಿಂದ ನೀವು ಖಾರಾ ಪದಾರ್ಥಗಳನ್ನು ಮಾತ್ರ ಮಾಡಬಹುದು. ಮಾಡುವ ವಿಧಾನ :- 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಆರಂಭವಾದಾಗ ಅದಕ್ಕೆ 2 ದೊಡ್ಡ ಚಮಚ ತಾಜಾ ಮೊಸರು ಹಾಕಿ ಉರಿ ಕಡಿಮೆ ಮಾಡಿ ಚಮಚದಿಂದ ಕಲೆಸುತ್ತಲೇ ಇರಿ. ಹಾಲು ಸಂಪೂರ್ಣವಾಗಿ ಒಡೆದು ಗಟ್ಟಿಯಾದ ಮೇಲೆ ಅದಕ್ಕೆ 1 ಟೀ …