Showing 158 Result(s)
Kannada Tindi Tinisu ಖಾರ ತಿನಿಸುಗಳು

THENGOLALU ತೇಂಗೊಳಲು

  ತೇಂಗೊಳಲು ಇನ್ನೊಂದು ಸಾಂಪ್ರಾದಾಯಿಕ ತಿನಿಸು. ಮಾಡೋದು ವಿಧಾನ ಸ್ವಲ್ಪ ಚಕ್ಕುಲಿ ಹಾಗೇನೆ! ಮಾಡುವ ವಿಧಾನ:- ದೋಸೆ/ತಿಂಡಿ ಅಕ್ಕಿ – 4 ಪಾವು ಉದ್ದಿನ ಬೇಳೆ – 2 ಪಾವು ತೇಂಗೊಳಲು ಮಾಡಲು:- ಬೆಣ್ಣೆ – 2 ಚಮಚ ಬಿಳಿ ಎಳ್ಳು – 3 ಚಮಚ ಜೀರಿಗೆ – 2 ಚಮಚ ಇಂಗು – 1 ಚಮಚ ಉಪ್ಪು – ರುಚಿಗೆ ಎಣ್ಣೆ – ಕರಿಯಲು      ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANGO LADDU ಮ್ಯಾಂಗೋ ಲಡ್ಡು

ಮಾಡುವ ವಿಧಾನ:-    1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಹುರಿದು, 1/2 ಅಳತೆ ಮಾವಿನ ಹಣ್ಣಿನ ರಸ, (ನೀರು ಸೇರಿಸಬೇಡಿ), 1/2 ಅಳತೆ condensed milk ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ, ಮಿಶ್ರಣ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ಇಡಿ, ಸ್ವಲ್ಪ ಬೆಚ್ಚಗೆ ಆದಾಗ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAAVINA LADDU ಮಾವಿನ ಲಡ್ಡು

 ಮಾವು ಹಣ್ಣುಗಳ ರಾಜ!!! ಬೇಸಿಗೆಯಲ್ಲಿ ಎಲ್ಲೆಡೆ ಮಾವಿನ ಪರಿಮಳ ತುಂಬಿರುತ್ತದೆ. ಆ ಮಾವಿನ ಹಣ್ಣಿನ ಲಡ್ಡು ಮಾಡುವ ವಿಧಾನ:-    1 ಲೋಟ ಕಾಯಿ ತುರಿಯನ್ನು ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಹುರಿದು ಕೊಳ್ಳಿ, (1 ಲೋಟಕ್ಕಿಂಕ ಸ್ವಲ್ಪ ಹೆಚ್ಚೇ ಹುರಿದು ಕೊಳ್ಳಿ, ಏಕೆಂದರೆ ಕೊನೆಯಲ್ಲಿ ಕೋಟಿಂಗ್ ಮಾಡಲು ಬೇಕು, ಹುರಿದ ನಂತರ ಸ್ವಲ್ಪ ತೆಗೆದಿಡಿ) ಕಾಯಿ ತುರಿಯ ಹಸಿ ವಾಸನೆ ಹೋಗಿ ಗರಿ ಗರಿಯಾಗಿ ಆದಾಗ 1/2 ಲೋಟ ಮಾವಿನ ಹಣ್ಣಿನ ತಿರುಳು …

Kannada Tindi Tinisu ಖಾರ ತಿನಿಸುಗಳು

MIX DAL PAKODA ಮಿಕ್ಸ್ ದಾಲ್ ಪಕೋಡ

ನಾವು ಸಾಧಾರಣವಾಗಿ ಪಕೋಡ ಅಥವಾ ವಡೆ ಮಾಡುವಾಗ ಯಾವುದಾದರೂ ಒಂದು ಹಿಟ್ಟು ಅಥವಾ ಒಂದು ಬೇಳೆ ಹಾಕಿ ಮಾಡುತ್ತೇವೆ. ಒಂದೊಂದು ಬೇಳೆಯೂ ತನ್ನದೇ ಆದ ರುಚಿ, ಗುಣ ಹೊಂದಿರುತ್ತದೆ. 4 ಬೇಳೆಗಳನ್ನು ಸೇರಿಸಿ ಮಾಡುವ ವಿಧಾನ ಇಲ್ಲಿದೆ. ಮಿಕ್ಸ್ ದಾಲ್ ಪಕೋಡ ಮಾಡುವ ವಿಧಾನ:-      ತಲಾ 1/4 ಲೋಟ ಕಡಲೇ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ, ಉದ್ದಿನ ಬೇಳೆಗಳನ್ನು ತೊಳೆದು 2 ಘಂಟೆ ನೆನೆಸಿಡಿ. ನೀರು ತೆಗೆದು, ತರಿ ತರಿಯಾಗಿ ವಡೆಗೆ ರುಬ್ಬುವಂತೆ ರುಬ್ಬಿಡಿ.    …

Kannada Oota Tindi Tinisu ಖಾರ ತಿನಿಸುಗಳು

STUFFED ONION RINGS & KADALE BELE CHITHRANNA ಸ್ಟಫ್ಡ್ ಆನಿಯನ್ ರಿಂಗ್ಸ್ ಮತ್ತು ಕಡಲೇ ಬೇಳೆ ಚಿತ್ರಾನ್ನ

ಸ್ಟಫ್ಡ್ ಆನಿಯನ್ ರಿಂಗ್ಸ್ ಮಾಡುವ ವಿಧಾನ:-     4 ಆಲೂ ಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿ, ಹಸಿ ಮೆಣಸಿನ ಕಾಯಿ ಪೇಸ್ಟ್,1/2 ಚಮಚ ಜೀರಿಗೆ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕಲೆಸಿಡಿ. ಸಾಧಾರಣವಾಗಿ ಬಜ್ಜಿ ಹಿಟ್ಟಿನ ಹದಕ್ಕೆ ಬಜ್ಜಿ ಹಿಟ್ಟು ಕಲೆಸಿಡಿ. ಈರುಳ್ಳಿ ಸಿಪ್ಪೆ ತೆಗೆದು 1/2 ಇಂಚು ಅಳತೆಗೆ ರಿಂಗ್ಸ್ ತರಹ ಕತ್ತರಿಸಿ ರಿಂಗ್ಸ್ ಅನ್ನು ಬೇರೆ ಬೇರೆ ಮಾಡಿ, ಒಂದು ದೊಡ್ಡ ರಿಂಗ್ ಒಳಗೆ ಒಂದು ಚಿಕ್ಕ ರಿಂಗ್ …

Kannada Tindi Tinisu ಖಾರ ತಿನಿಸುಗಳು

MATODI KADUBU ಮಾಟೋಡಿ ಕಡುಬು

ಗಣಪತಿಗೆ ಅತ್ಯಂತ ಪ್ರಿಯವಾದದ್ದು ಕಡುಬು! ಅವನ ಭಕ್ತರಾದ ನಮಗೂ ಸಹ!!! ಅದರಲ್ಲೂ ಕರಿಗಡುಬು ಯಾರಿಗೆ ಇಷ್ಟ ಇಲ್ಲ ಹೇಳಿ? ಖಾರಾ ಕರಿಗಡುಬು ಯಾವಾಗಲಾದರೂ ತಿಂದಿದ್ದೀರಾ? ಇಲ್ಲದಿದ್ದರೆ ಈಗ ಮಾಡಿ ನೋಡಿ. ಒಂದು ಪುಸ್ತಕದಲ್ಲಿ ಈ ರೆಸಿಪಿ ನೋಡಿದೆ. ತುಂಬಾ ಚೆನ್ನಾಗಿತ್ತು, ನಿಮ್ಮ ಜೊತೆ ಹಂಚಿ ಕೊಳ್ಳೋಣ ಅಂತ ಈ ರೆಸಿಪಿ ಹಾಕಿದ್ದೇನೆ. ಮಾಡುವ ವಿಧಾನ:-      1 ಲೋಟ ಕಡಲೇ ಬೇಳೆಯನ್ನು ತೊಳೆದು 2 ಘಂಟೆ ನೆನೆಸಿ, ಸೋಸಿ ಕೊಂಡು, 1/2 ಲೋಟ ಕಾಯಿ ತುರಿ, 6 …

Kannada Tindi Tinisu ಖಾರ ತಿನಿಸುಗಳು

GARLIC MANCHOORI ಗಾರ್ಲಿಕ್ ಮಂಚೂರಿ

 ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿ! “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯಂತೆ ಅದರ ಮಹತ್ವದ ಬಗ್ಗೆ ಎಷ್ಟು ಹೇಳಿದರುಾ ಕಡಿಮೆಯೇ! ಅದರಿಂದ ರುಚಿಯಾದ ಮಂಚೂರಿ ಮಾಡುವ ರೆಸಿಪಿ ಬೆಳ್ಳುಳ್ಳಿ ಪ್ರಿಯರಿಗಾಗಿ!!! ಮಾಡುವ ವಿಧಾನ :-    3 ಬೆಳ್ಳುಳ್ಳಿ ಸಿಪ್ಪೆ ತೆಗೆದು, ಚಿಕ್ಕಗಾಗಿ ಹೆಚ್ಚಿ, ಸ್ವಲ್ಪ ಜಜ್ಜಿ ಇಡಿ. 4 ಚಮಚ ಕಾರ್ನ್ ಫ್ಲೋರ್, 4 ಚಮಚ ಮೈದಾ, ಉಪ್ಪು, 1/2 ಚಮಚ ಖಾರಾ ಪುಡಿ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಚಿಮುಕಿಸಿ ಚಿಕ್ಕ …

Kannada Tindi Tinisu ಖಾರ ತಿನಿಸುಗಳು

VEG PUFF ವೆಜ್ ಪಫ್

ಬೇಕರಿಗಳಲ್ಲಿ ಹೆಚ್ಚು ಮಾರಾಟವಾಗುವ ತಿಂಡಿ! ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ವೆಜ್ ಪಫ್ ಬಹಳ ಜನ ಇಷ್ಟ ಪಟ್ಟು ತಿನ್ನುತ್ತಾರೆ! ಬೇಕರಿಗಳಲ್ಲಿ ಸಾಮಾನ್ಯವಾಗಿ ಇದನ್ನು ಬೇಕ್ ಮಾಡುತ್ತಾರೆ. ಮನೆಯಲ್ಲಿ ಬೇಕ್ ಮಾಡಲು ಎಲ್ಲರಿಗೂ ಆಗುವುದಿಲ್ಲ. ಎಣ್ಣೆಯಲ್ಲಿ ಕರಿದು ಸಹ ರುಚಿಯಾದ ವೆಜ್ ಪಫ್ ಮಾಡುವ ವಿಧಾನ ಇಲ್ಲಿದೆ! ಹೆಚ್ಚು ಎಣ್ಣೆ ಹೀರುವುದಿಲ್ಲ! ಸಮಯ ಕೂಡಾ ಹೆಚ್ಚು ಬೇಕಿಲ್ಲ! ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, ಉಪ್ಪು ಸೇರಿಸಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SIHI KUMBALA HALVA ಸಿಹಿ ಕುಂಬಳ ಹಲ್ವಾ

ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ! ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:- ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ …

Kannada Tindi Tinisu ಖಾರ ತಿನಿಸುಗಳು

TIRUPATHI VADE ತಿರುಪತಿ ವಡೆ

ತಿರುಪತಿ ಹಿಂದೂಗಳ ಪ್ರಸಿದ್ಧ ಪುಣ್ಯ ಕ್ಷೇತ್ರ, ಅದು ಕಲಿ ಯುಗ ದೈವ ಶ್ರೀನಿವಾಸ ನೆಲೆ ನಿಂತ ಕ್ಷೇತ್ರ, ಶ್ರೀನಿವಾಸನಿಗೆ ಬಹಳ ಪ್ರಿಯವಾದದ್ದು ತಿರುಪತಿ ಲಡ್ಡು ಮತ್ತು ತಿರುಪತಿ ವಡೆ. ತಿರುಪತಿ ವಡೆ ಮಾಡುವ ವಿಧಾನ: –     1ಬಟ್ಟಲು ಉದ್ದಿನ ಕಾಳನ್ನು (ಸಿಪ್ಪೆ ಸಹಿತ) ತೊಳೆದು 4 ಘಂಟೆ ನೆನೆಸಿ, ಆದಷ್ಟು ನೀರು ಸೇರಿಸದೆ ಗಟ್ಟಿಯಾಗಿ (ಕಡಲೇ ಬೇಳೆ ವಡೆಯಂತೆ), ರುಬ್ಬಿ ಇಟ್ಟು ಕೊಳ್ಳಿ, 2 ಚಮಚ ಜೀರಿಗೆ, 2 ಚಮಚ ಮೆಣಸು ಹಸಿಯಾಗಿಯೇ ತರಿ ತರಿಯಾಗಿ …