Showing 158 Result(s)
Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MILK HALVA ಮಿಲ್ಕ್ ಹಲ್ವಾ

ಹಾಲಿನಿಂದ ಮಾಡುವ ರುಚಿಯಾದ, ಪೌಷ್ಟಿಕವಾದ ಸಿಹಿ ತಿಂಡಿ! ಮಾಡುವ ವಿಧಾನ:- ದಪ್ಪ ತಳದ ಬಾಣಲೆಯಲ್ಲಿ/ ಪಾತ್ರೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಹಾಕಿ ಕುದಿಯಲು ಇಡಿ. ಹಾಲು ಚೆನ್ನಾಗಿ ಬಿಸಿಯಾದ ಮೇಲೆ 2 ಚಮಚ ಗಟ್ಟಿಯಾದ ಹುಳಿ ಮೊಸರು ಹಾಕಿ ಚೆನ್ನಾಗಿ ಕಲೆಸಿ ಹಾಲು ಒಡೆಯುವಂತೆ ಮಾಡಿ. ಒಡೆದ ಹಾಲು ಕುದಿದು 1/2 ಭಾಗದಷ್ಟು ಆದಾಗ, 100 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿ ಹಾಕಿ. 1/2 ಕಪ್ ಸಕ್ಕರೆ ( ಸುಮಾರು 75 ರಿಂದ 100 …

Kannada Tindi Tinisu ಖಾರ ತಿನಿಸುಗಳು

MINT MASALA PEANUT ಮಿಂಟ್ ಮಸಾಲ ಪೀನಟ್

ಬಡವರ ಬಾದಾಮಿ ಕಡಲೇ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ!? ಸಂಜೆ ಕಾಫಿ ಟೀ ಜೊತೆಗೆ ಕುರುಂ ಕುರುಂ ಅಂತ ತಿನ್ನೋದಕ್ಕೆ ಎಷ್ಟು ಚೆಂದ ಅಲ್ಲವೇ!? ಮಾಡುವ ವಿಧಾನ:- 1 ಕಟ್ಟು ಪುದೀನಾ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ನಾಲ್ಕೈದು ಹರಳು ನಿಂಬುಪ್ಪು, ಉಪ್ಪು ಹಾಕಿ ನೀರು ಹಾಕದೆ ಪೇಸ್ಟ್ ಮಾಡಿಡಿ. ದೊಡ್ಡ ಪಾತ್ರೆಯಲ್ಲಿ ಕಡಲೇ ಬೀಜ, 4 ಚಮಚ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ. …

Kannada Tindi Tinisu ಖಾರ ತಿನಿಸುಗಳು

DIDHEER CHAKKULI ದಿಢೀರ್ ಚಕ್ಕುಲಿ

ಸಾಮಾನ್ಯವಾಗಿ ಚಕ್ಕುಲಿ ಮಾಡಬೇಕಾದರೆ ಅಕ್ಕಿ ತೊಳೆದು, ನೆರಳಲ್ಲಿ ಒಣಗಿಸಿ, ಉದ್ದಿನ ಬೇಳೆ ಹುರಿದು ಹಾಕಿ, Flour mill ಗೆ ಹಾಕಿ ಚಕ್ಕುಲಿ ಮಾಡಬೇಕು! ಆದರೆ ಬೇಕಾದಾಗ ಚಕ್ಕುಲಿ ತಿನ್ನಬೇಕೆನೆಸಿದಾಗ ತಕ್ಷಣ ಮಾಡುವ ದಿಢೀರ್ ಚಕ್ಕುಲಿಯ ರೆಸಿಪಿ ಇಲ್ಲಿದೆ! 1 ಅಳತೆ ಅಕ್ಕಿ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿಡಿ. 1/2 ಅಳತೆ ಹುರಿಗಡಲೆ ನುಣ್ಣಗೆ ಪುಡಿ ಮಾಡಿಡಿ. 1 ಟೇಬಲ್ ಚಮಚ ಬೆಣ್ಣೆ ಅಥವಾ ಎಣ್ಣೆ ಸ್ವಲ್ಪ ಬಿಸಿ ಮಾಡಿಡಿ. ಅಕ್ಕಿ ಹಿಟ್ಟಿಗೆ ಹುರಿ ಗಡಲೆ ಪುಡಿ, …

Kannada Tindi Tinisu ಖಾರ ತಿನಿಸುಗಳು

IDLI HITTINA BONDA ಇಡ್ಲಿ ಹಿಟ್ಟಿನ ಬೋಂಡಾ

ಸಾಮಾನ್ಯವಾಗಿ ಇಡ್ಲಿ ಮಾಡಿದ ಮೇಲೆ ಸ್ವಲ್ಪ ಹಿಟ್ಟು ಉಳಿದು ಬಿಡುತ್ತದೆ. ಅದನ್ನು ಚೆಲ್ಲುವ ಹಾಗಿಲ್ಲ! ಮತ್ತೆ ಇಡ್ಲಿ ಮಾಡಿದರೆ ಯಾರಿಗೂ ಇಷ್ಟ ಆಗುವುದಿಲ್ಲ! ಹಾಗಾದರೆ ಉಳಿದ ಹಿಟ್ಟನ್ನು ಏನು ಮಾಡುವುದು ಎಂದು ಯೋಚಿಸಬೇಡಿ! ಇಲ್ಲಿದೆ ಉಳಿದ ಹಿಟ್ಟು ಬಳಸಿ ಮಾಡುವ ಒಂದು ಒಳ್ಳೆಯ, ರುಚಿಯಾದ ರೆಸಿಪಿ! ಇಡ್ಲಿ ಹಿಟ್ಟಿನ ಬೋಂಡಾ ಮಾಡುವ ವಿಧಾನ:- ಇಡ್ಲಿ ಹಿಟ್ಟಿಗೆ 4 ಚಮಚ ಸಾಬೂದಾನ (ಸಬ್ಬಕ್ಕಿ) ಯನ್ನು ತೊಳೆದು ನೀರು ಸೋರಿ ಹಾಕಿ ಸೇರಿಸಿ 4 ಗಂಟೆ ನೆನೆಯಲು ಇಡಿ! ತುಂಬಾ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MILK POWDER BURFI ಮಿಲ್ಕ್ ಪೌಡರ್ ಬರ್ಫಿ

ನಮಸ್ಕಾರ, ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬದ ಶುಭಾಷಯಗಳು. ಹಾಲಿನ ಪುಡಿ ಮನೆಯಲ್ಲಿದ್ದರೆ ಕೇವಲ 10 ನಿಮಿಷದಲ್ಲಿ ಮಾಡಬಹುದಾದ, ಸುಲಭವಾದ, ರುಚಿಯಾದ ಸಿಹಿ ತಿಂಡಿ! ಮಾಡುವ ವಿಧಾನ:- 1 ಅಳತೆ ಸಕ್ಕರೆಗೆ 1/2 ಅಳತೆ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದೊಡನೆ 2 ಅಳತೆ ಮಿಲ್ಕ್ ಪೌಡರ್, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಉರಿ ಮಧ್ಯಮ ಮಾಡಿ ಕೈ ಬಿಡದಂತೆ ಕಲೆಸುತ್ತಾ ಇರಿ.     ಮಿಶ್ರಣ ಗಟ್ಟಿಯಾಗಿ ಅಂಚನ್ನು …

Kannada Tindi Tinisu ಸಾಂಬಾರು ಮತ್ತು ಪಲ್ಯಗಳು ಸೂಪ್ ಇತ್ಯಾದಿ

BONDA SOUP & BONDA RASAM ಬೋಂಡಾ ಸೂಪ್ ಮತ್ತು ಬೋಂಡಾ ರಸಂ

ಮಳೆ ಬರುವಾಗ, ಛಳಿ ಇರುವಾಗ ಬಿಸಿ ಬಿಸಿಯಾದ ಬೋಂಡಾ ಸೂಪ್ ಅಥವಾ ಬೋಂಡಾ ರಸಂ ಇದ್ದರೆ ಎಷ್ಟು ಚೆನ್ನ ಅಲ್ಲವೇ?!  ಹಾಗಾದರೆ ತಡ ಏಕೆ ಈಗಲೇ ರೆಸಿಪಿ ನೋಡಿ ಸಂಜೆ ಮಕ್ಕಳಿಗೆ, ಪತಿ ದೇವರಿಗೆ ಮಾಡಿ ಕೊಡಿ! ಖುಷಿಯಾಗಿ ತಿಂತಾರೆ!!! ರಸಂ ಮಾಡುವ ವಿಧಾನ :- 1 ಚಿಕ್ಕ ಲೋಟ ತೊಗರಿ ಬೇಳೆ, 2 ಟೋಮೋಟೋ ಬೇಯಿಸಿ ಇಡಿ. ತಣ್ಣಗಾದ ನಂತರ ಟೋಮೇಟೋ ಸಿಪ್ಪೆ ತೆಗೆದು ಸ್ವಲ್ಪ Smash ಮಾಡಿಡಿ. 2 ಚಮಚ ರಸಂ ಪುಡಿ, 1 ಚಮಚ …

Kannada Tindi Tinisu ಖಾರ ತಿನಿಸುಗಳು

MASALA VADE ಮಸಾಲೆ ವಡೆ

ಆಹಾ ಹೆಸರು ಕೇಳಿದೊಡನೆ ಕೆಲವರ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಈ ನಮ್ಮ ವಡೆಯದು!ನಮಗೆ ಗೊತ್ತು ಈ ರೆಸಿಪಿ ಅಂದಿರಾ!? ಸರಿ ಬಿಡಿ ಹೊಸದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗುತ್ತದೆ! ಅವರು ನೋಡಿ ಮಾಡಿ ಕೊಡುತ್ತಾರೆ ! ನಾವೆಲ್ಲ ತಿನ್ನೋಣ! ಮಾಡುವ ವಿಧಾನ:- 1 ಪಾವು ಕಡಲೇ ಬೇಳೆ ತೊಳೆದು 2 ಗಂಟೆ ಕಾಲ ನೆನೆಸಿಡಿ. 1 ಪಾವು ಅಂದರೆ 1/4 kg ಗಿಂತ ಚೂರು ಕಡಿಮೆ ಅಷ್ಟೇ! 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಇಂಚು …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANOHARA UNDE ಮನೋಹರ ಉಂಡೆ( ಮನವಾರು ಉಂಡೆ)

ತಮಿಳುನಾಡಿನ ಸಾಂಪ್ರಾದಾಯಕ ಸಿಹಿ ತಿಂಡಿ! ಅಯ್ಯಂಗಾರ್ ಸಂಪ್ರದಾಯದಲ್ಲಿ ಮದುವೆ ಮನೆಗಳಲ್ಲಿ, ಮುಂಜಿಗಳಲ್ಲಿ ತಪ್ಪದೆ ಮಾಡುವ ಸಿಹಿ ಇದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ ತೊಳೆದು 2 ರಿಂದ 3 ಗಂಟೆ ನೆನೆಸಿಡಿ. ನಂತರ ನೀರು ಬಗ್ಗಿಸಿ ಉದ್ದಿನ ಬೇಳೆಯನ್ನು ಆದಷ್ಟೂ ನುಣ್ಣಗೆ ರುಬ್ಬಿ. ಹೆಚ್ಚು ನೀರು ಹಾಕಬೇಡಿ. ನೆಂದ ಉದ್ದಿನ ಬೇಳೆಯಲ್ಲಿರುವ ನೀರಿನಂಶವೇ ಸಾಕು! ತೀರ ಬೇಕೆನಿಸಿದರೆ ಒಂದೆರಡು ಚಮಚ ನೀರು ಹಾಕಿ.      ರುಬ್ಬಿದ ಮಿಶ್ರಣಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಅಕ್ಕಿ …