Showing 133 Result(s)
Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MILK POWDER JAMOON ಮಿಲ್ಕ್ ಪೌಡರ್ ಜಾಮೂನ್

ರುಚಿಯಾದ ಹಾಲಿನ ಪುಡಿ ಜಾಮೂನ್ ಮನೆಯಲ್ಲಿ ಮಾಡುವ ಇಲ್ಲಿದೆ! ಮಾಡುವ ವಿಧಾನ:-    2 ಅಳತೆ ಸಕ್ಕರೆಯನ್ನು 2 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಪೂರ್ತಿಯಾಗಿ ಕರಗಿದ ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ ಒಲೆಯಿಂದ ಇಳಿಸಿ ಚಿಟಿಕೆ ಏಲಕ್ಕಿ ಪುಡಿ ಹಾಕಿಡಿ.    1 ಅಳತೆ ಹಾಲಿನ ಪುಡಿ, 1 ಚಮಚ ಮೈದಾ , 1 ಚಮಚ ತುಪ್ಪ, 1/4 ಚಮಚ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ಸ್ವಲ್ಪವೇ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BATHASU ಬತಾಸು

ನಾವು ಚಿಕ್ಕವರಿದ್ದಾಗ ಊರ ಜಾತ್ರೆಗಳಲ್ಲಿ, ರಥೋತ್ಸವಗಳಲ್ಲಿ ಬೀದಿ ಬದಿಯ ಅಂಗಡಿಗಳಲ್ಲಿ ರಾಶಿ ರಾಶಿಯಾಗಿ ಹಾಕಿ ಮಾರುತ್ತಿದ್ದ ತಿಂಡಿಗಳಲ್ಲಿ ಈ ಬತಾಸು ಕೂಡ ಒಂದು! ಅಪ್ಪ, ಅಮ್ಮನ ಕೈಹಿಡಿದು ಬೊಗಸೆ ತುಂಬಾ ಬತಾಸು ತಿಂದು ಖುಷಿ ಪಡುತ್ತಿದ್ದ ಕಾಲ ಎಷ್ಟು ಚೆನ್ನ! ನನ್ನ ಮಗಳ ಆಸೆಯ ಮೇರೆಗೆ ನಮ್ಮ ಪಕ್ಕದ ಮನೆಯ ನಮ್ಮ ಕುಟುಂಬದ ಆಪ್ತರಾದ ಶ್ರೀಮತಿ ಆಂಡಾಳು ಅವರಿಂದ ಕಲಿತು ನಾನು ಮೊದಲ ಬಾರಿ ಬತಾಸು ಮಾಡಿದ್ದೇನೆ! ತುಂಬಾ ಚೆನ್ನಾಗಿ ಬಂದಿದೆ! ಮಾಡುವ ವಿಧಾನ:- 2 ಚಮಚ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BELLADA JILEBI & RABDI ಬೆಲ್ಲದ ಜಿಲೇಬಿ & ರಬ್ಡಿ

ಜಿಲೇಬಿ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಇದರ ರುಚಿಗೆ ಮನ ಸೋಲದವರಿಲ್ಲ! ಈ ಸಿಹಿಯನ್ನು ಸಕ್ಕರೆಯಲ್ಲಿ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ! ಸಕ್ಕರೆ ಬದಲು ಬೆಲ್ಲದಲ್ಲಿ ಮಾಡುವುದು ಈ ರೆಸಿಪಿ ವಿಶೇಷತೆ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ! ಅಂದ ಹಾಗೆ ನಿಮ್ಮ ಅನ್ನಪೂರ್ಣೆ ಪೇಜ್ ನ 300 ನೇ ರೆಸಿಪಿ! ಹಾಗಾಗಿ ವಿಶೇಷ ಸಿಹಿ! ಮಾಡುವ ವಿಧಾನ:- 1 ಅಳತೆ ಬೆಲ್ಲ ಪುಡಿ ಮಾಡಿ 1/4 ಲೋಟ ನೀರು ಹಾಕಿ ಅರ್ಧ ಎಳೆ ಪಾಕ ಬಂದೊಡನೆ 1/2 …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BELLADA MYSORE PAK ಬೆಲ್ಲದ ಮೈಸೂರು ಪಾಕ್

ಮೈಸೂರು ಪಾಕ್ ನಮ್ಮ ಕರ್ನಾಟಕದ ಹೆಮ್ಮೆಯ ಸಿಹಿ ತಿಂಡಿ! ಅದರ ರುಚಿಗೆ ಮರುಳಾಗದವರೇ ಇಲ್ಲ! ಈ ಸಿಹಿ ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು. ನಾನು ಬೆಲ್ಲ ಹಾಕಿ ಮಾಡಿದ್ದೇನೆ. ರುಚಿ ಅದ್ಭುತವಾಗಿದೆ. ನಮ್ಮ ಚಿಕ್ಕ ಅತ್ತೆಯಿಂದ ಕಲಿತದ್ದು ಈ ರೆಸಿಪಿ! ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಕೂಡ!ಮಾಡುವ ವಿಧಾನ:-     1 3/4 ಲೋಟ ಬೆಲ್ಲ ಪುಡಿ ಮಾಡಿಡಿ/ ತುರಿದಿಡಿ. 1 ಲೋಟ ಕಡಲೇ ಹಿಟ್ಟು ಜರಡಿ ಹಿಡಿದು ಸ್ವಲ್ಪ ಹಸಿ ವಾಸನೆ ಹೋಗಿ ಘಂ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KOBBARI MITAYI ಕೊಬ್ಬರಿ ಮಿಠಾಯಿ

ನಮಸ್ಕಾರ, ಇದು ನನ್ನ ಮೊದಲ ಪೋಸ್ಟ್! ಹಾಗಾಗಿ ಸಿಹಿ ರೆಸಿಪಿ ಹಾಕಿದ್ದೇನೆ! ಹಾಗಾದರೆ ನಮ್ಮ ಸಿಹಿ ರೆಸಿಪಿ ನೋಡೋಣವೇ? ಇದು ತುಂಬಾ ಹಳೆಯ ರೆಸಿಪಿ! ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಗೋಕುಲಾಷ್ಟಮಿಯಲ್ಲಿ ತಪ್ಪದೆ ಮಾಡುವ ಸಿಹಿ ತಿಂಡಿ. ತುಂಬಾ ಸುಲಭವಾಗಿ ಮಾಡಬಹುದು. ಕೊಬ್ಬರಿ ಮಿಠಾಯಿ ಮಾಡುವ ವಿಧಾನ:-    1 ದಪ್ಪನೆಯ, ಕಪ್ಪಾದ, ಬಲಿತ ತೆಂಗಿನ ಕಾಯಿ ಆಯ್ಕೆ ಮಾಡಿಕೊಳ್ಳಿ. ಅಡುಗೆ ಕಾಯಿ ಎಂದು ಕೇಳಿದರೆ ಕೊಡುತ್ತಾರೆ. ನಾರು ತೆಗೆದು ಒಡೆದು, ಕೇವಲ ಬಿಳಿ ಭಾಗ ಮಾತ್ರ ತುರಿದುಕೊಳ್ಳಿ. …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BADAM KATLI ಬಾದಾಮ್ ಕಟ್ಲಿ

ಬಾದಾಮಿ ತುಂಬಾ ಒಳ್ಳೆಯ ಒಣ ಹಣ್ಣು! ಆರೋಗ್ಯಕ್ಕೆ ತುಂಬಾ ತುಂಬಾ ಒಳ್ಳೆಯದು! ಬಾದಾಮಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಪ್ರಯೋಜನಗಳು ಹಲವಾರು! ಚರ್ಮ, ಕೂದಲಿನ ಆರೈಕೆಯಲ್ಲಿ ಬಹಳ ಸಹಾಯ ಮಾಡುತ್ತದೆ. ಮಧು ಮೇಹ, ರಕ್ತದೊತ್ತಡದ ಹತೋಟಿಯಲ್ಲಿ ಇಡುತ್ತದೆ. ಇಂತಹ ಬಾದಾಮಿಯಿಂದ ಮಾಡುವ ಒಂದು ಸುಲಭವಾದ, ರುಚಿಯಾದ ಸಿಹಿ ರೆಸಿಪಿ ಇಲ್ಲಿದೆ. ಬಾದಾಮಿ ಕಟ್ಲಿ ಮಾಡುವ ವಿಧಾನ:- 1 ಲೋಟ ಬಾದಾಮಿಯನ್ನು ಬಿಸಿ ನೀರಲ್ಲಿ ಹಾಕಿ 1 ಗಂಟೆ ತಟ್ಟೆ ಮುಚ್ಚಿ ನೆನೆಸಿಡಿ. ನಂತರ ಬಾದಾಮಿಯ ಸಿಪ್ಪೆ ತೆಗೆದು, ಒಗೆದ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MANGO LADDU ಮ್ಯಾಂಗೋ ಲಡ್ಡು

ಮಾಡುವ ವಿಧಾನ:-    1 ಅಳತೆ desiccated coconut powder ಅನ್ನು (ಸೂಪರ್ ಮಾರ್ಕೆಟ್ ನಲ್ಲಿ ಸಿಗುತ್ತೆ, ಕೇಕ್, ಸ್ವೀಟ್ಸ್ ಮಾಡಲು ಉಪಯೋಗಿಸುತ್ತಾರೆ) ದಪ್ಪ ತಳದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ 2 ಅಥವಾ 3 ನಿಮಿಷ ಹುರಿದು, 1/2 ಅಳತೆ ಮಾವಿನ ಹಣ್ಣಿನ ರಸ, (ನೀರು ಸೇರಿಸಬೇಡಿ), 1/2 ಅಳತೆ condensed milk ಹಾಕಿ ಕಡಿಮೆ ಉರಿಯಲ್ಲಿ ಕೆದಕುತ್ತಾ ಇರಿ, ಮಿಶ್ರಣ ಎಲ್ಲಾ ಒಂದೇ ಕಡೆ ಉಂಡೆಯಂತೆ ಆದಾಗ ಒಲೆಯಿಂದ ತೆಗೆದು ಇಡಿ, ಸ್ವಲ್ಪ ಬೆಚ್ಚಗೆ ಆದಾಗ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAAVINA LADDU ಮಾವಿನ ಲಡ್ಡು

 ಮಾವು ಹಣ್ಣುಗಳ ರಾಜ!!! ಬೇಸಿಗೆಯಲ್ಲಿ ಎಲ್ಲೆಡೆ ಮಾವಿನ ಪರಿಮಳ ತುಂಬಿರುತ್ತದೆ. ಆ ಮಾವಿನ ಹಣ್ಣಿನ ಲಡ್ಡು ಮಾಡುವ ವಿಧಾನ:-    1 ಲೋಟ ಕಾಯಿ ತುರಿಯನ್ನು ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಹುರಿದು ಕೊಳ್ಳಿ, (1 ಲೋಟಕ್ಕಿಂಕ ಸ್ವಲ್ಪ ಹೆಚ್ಚೇ ಹುರಿದು ಕೊಳ್ಳಿ, ಏಕೆಂದರೆ ಕೊನೆಯಲ್ಲಿ ಕೋಟಿಂಗ್ ಮಾಡಲು ಬೇಕು, ಹುರಿದ ನಂತರ ಸ್ವಲ್ಪ ತೆಗೆದಿಡಿ) ಕಾಯಿ ತುರಿಯ ಹಸಿ ವಾಸನೆ ಹೋಗಿ ಗರಿ ಗರಿಯಾಗಿ ಆದಾಗ 1/2 ಲೋಟ ಮಾವಿನ ಹಣ್ಣಿನ ತಿರುಳು …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

SIHI KUMBALA HALVA ಸಿಹಿ ಕುಂಬಳ ಹಲ್ವಾ

ಸಿಹಿ ಕುಂಬಳವನ್ನು ಸಾಮಾನ್ಯವಾಗಿ ಪಲ್ಯ, ಸಾಂಬಾರ್ ಮಾಡಲು ಬಳಸುತ್ತಾರೆ. ಸಿಹಿ ಕುಂಬಳವನ್ನು ನಿಯಮಿತವಾಗಿ ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಹಲವಾರು! ಕಣ್ಣಿನ ದೃಷ್ಟಿ ಉತ್ತಮಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ, ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ. ಇಂತಹ ಆರೋಗ್ಯಕರ ತರಕಾರಿಯಿಂದ ಒಂದು ಸಿಹಿ ರೆಸಿಪಿ ನಿಮಗಾಗಿ! ಸಿಹಿ ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:- ಸಿಹಿ ಕುಂಬಳ ತೊಳೆದು, ಸಿಪ್ಪೆ ತೆಗೆದು ತುರಿದಿಡಿ. 2 ಅಳತೆ ತುರಿದ ಕುಂಬಳ ಕಾಯಿಗೆ, 1 ಲೋಟ ಸಕ್ಕರೆ ಅಥವಾ ಬೆಲ್ಲ ಬೇಕಾಗುತ್ತದೆ. ನಾನು ಜೋನಿ …

Kannada Tindi Tinisu ಸಿಹಿ ತಿನಿಸುಗಳು

DRY FRUITS SHANKARA POLI ಡ್ರೈ ಫ್ರೂಟ್ಸ್ ಶಂಕರ ಪೋಳಿ

ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟಿ ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಡ್ರೈ ಫ್ರೂಟ್ಸ್ ಶಂಕರ ಪೋಳಿ ಮಾಡುವ ವಿಧಾನ:     1 ಬಟ್ಟಲು ಮೈದಾ, 1/4 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, 1/2 ಬಟ್ಟಲು ಸಕ್ಕರೆ ಪುಡಿ, ಚಿಟಿಕೆ ಏಲಕ್ಕಿ ಪುಡಿ, 1 ಚಮಚ ಬೆಣ್ಣೆ/1 …