Showing 22 Result(s)
ಉಪಹಾರ

SET DOSA ಸೆಟ್ ದೋಸಾ

ಹೋಟೆಲ್ ಗಳಲ್ಲಿ ಜನ ಇಷ್ಟ ಪಟ್ಟು ತಿನ್ನುವ ತಿಂಡಿ! ಮಾಡುವ ವಿಧಾನ ಇಲ್ಲಿದೆ ನೋಡಿ! ಮಾಡುವ ವಿಧಾನ:- ದೋಸೆ ಅಕ್ಕಿ – 2 ಲೋಟ ಉದ್ದಿನ ಬೇಳೆ – 1/2 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 1 ಟೀ ಚಮಚ ಇಷ್ಟು ಸಾಮಗ್ರಿಗಳನ್ನು ಒಟ್ಟಿಗೆ 4 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಮಾತ್ರ ಬೇರೆ 1 ಗಂಟೆ ನೆನೆಸಿದರೆ ಸಾಕು. ನಂತರ ನುಣ್ಣಗೆ ರುಬ್ಬಿ, ಉಪ್ಪು ಹಾಕಿ ಕಲೆಸಿ, ರಾತ್ರಿ ಪೂರ ಉದುಗು …

ಸಿಹಿ ತಿನಿಸುಗಳು

MANGO PHIRNI ಮ್ಯಾಂಗೋ ಫಿರ್ನಿ (DIET FRIENDLY)

ಫಿರ್ನಿ ಉತ್ತರ ಭಾರತದ ಜನಪ್ರಿಯ ಸಿಹಿ! ಈ ಜನಪ್ರಿಯ ಸಿಹಿಗೆ ಹಣ್ಣಿನ ರಾಜ ಮಾವಿನ ಹಣ್ಣು ಸೇರಿಸಿದರೆ ಹೇಗಿರುತ್ತದೆ ಎಂದು ತಿಳಿಯಬೇಕಾದರೆ ಈ ರೆಸಿಪಿ ಮಾಡಿ ನೋಡಿ! ಮಾಡುವ ವಿಧಾನ :- 1 ಟೇಬಲ್ ಚಮಚ ಬಾಸುಮತಿ ಅಕ್ಕಿ ತೊಳೆದು 2 ಗಂಟೆ ನೆನೆಸಿ, ನಂತರ ತರಿ ತರಿಯಾಗಿ ರುಬ್ಬಿಡಿ. 4 ಮಾವಿನ ಹಣ್ಣಿನ ರಸ ತೆಗೆದಿಡಿ. ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 4 ಏಲಕ್ಕಿ ಪುಡಿ ಮಾಡಿಡಿ. 1 ಲೀಟರ್ ಗಟ್ಟಿಯಾದ ಹಾಲು, ದಪ್ಪ …

Tindi Tinisu ಚಾಟ್ಸ್

PANEER KABAB ಪನ್ನೀರ್ ಕಬಾಬ್

ಸಂಜೆ ಕಾಫಿ ಜೊತೆಗೆ ಬಿಸಿ ಬಿಸಿಯಾಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 200 ಗ್ರಾಂ ಪನ್ನೀರ್ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. ಅಕ್ಕಿ ಹಿಟ್ಟು – 1 ಟೇಬಲ್ ಚಮಚ ಕಾರ್ನ್ ಫ್ಲೋರ್ – 1 ಟೇಬಲ್ ಚಮಚ ಖಾರದ ಪುಡಿ – 2 ಟೀ ಚಮಚ ಗರಂ ಮಸಾಲ ಪುಡಿ – 1 ಟೀ ಚಮಚ ಚಾಟ್ ಮಸಾಲ – 1 ಟೀ ಚಮಚ ಅರಿಷಿಣ – 1/2 ಟೀ ಚಮಚ ಉಪ್ಪು – ರುಚಿಗೆ …

ಸಿಹಿ ತಿನಿಸುಗಳು

GUP CHUP ಗಪ್ ಚುಪ್

ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ! ಇದು ನಾನು ನನ್ನ ಅಮ್ಮನಿಂದ ಕಲಿತದ್ದು! ಮಾಡುವ ವಿಧಾನ :- ಸ್ವಲ್ಪ ಉದ್ದಿನ ಬೇಳೆ 2 ಗಂಟೆ ನೆನೆಸಿಡಿ. ಸ್ವಲ್ಪ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ, ನುಣ್ಣಗೆ ರುಬ್ಬಿಡಿ. 1 ಅಳತೆ ಸಕ್ಕರೆಗೆ 1 ಅಳತೆ ನೀರು ಹಾಕಿ, ಸಕ್ಕರೆ ಪೂರ್ತಿಯಾಗಿ ಕರಗುವವರೆಗೆ ಕುದಿಸಿ. 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ. ( ಜಾಮೂನ್ ಪಾಕದಂತೆ ). 4 ಏಲಕ್ಕಿ ಪುಡಿ ಮಾಡಿ ಸಕ್ಕರೆ ಪಾಕಕ್ಕೆ ಹಾಕಿ. ರುಬ್ಬಿದ ಮಿಶ್ರಣದಲ್ಲಿ …

ಉಪಹಾರ

HALASINA HANNINA PADDU ಹಲಸಿನ ಹಣ್ಣಿನ ಪಡ್ಡು

ಹಲಸಿನ ಹಣ್ಣಿನ ಪ್ರಿಯರಿಗೆ ಇಲ್ಲಿದೆ ರುಚಿಯಾದ ರೆಸಿಪಿ! ಇದು ಸಾಂಪ್ರಾದಾಯಿಕ ಸಿಹಿ! ಮಾಡುವುದು ಸುಲಭ ಮತ್ತು ರುಚಿಕರ! ಮಾಡುವ ವಿಧಾನ :- 1 1/2 ಲೋಟ ಅಕ್ಕಿಯನ್ನು 4 ಗಂಟೆ ಕಾಲ ನೆನೆಸಿಡಿ. 1 ಲೋಟ ಬೆಲ್ಲ ಪುಡಿ ಮಾಡಿಡಿ. 1 ಲೋಟ ಕಾಯಿ ತುರಿದಿಡಿ. 1 ಲೋಟ ಹಲಸಿನ ಹಣ್ಣಿನ ಹೋಳುಗಳನ್ನು ಹೆಚ್ಚಿಡಿ. ಮೊದಲು ಅಕ್ಕಿಯನ್ನು ನುಣ್ಣಗೆ ರುಬ್ಬಿ ನಂತರ ಕಾಯಿ ತುರಿ, ಬೆಲ್ಲದ ಪುಡಿ ಹಾಕಿ ಮತ್ತೊಮ್ಮೆ ರುಬ್ಬಿ. ಕೊನೆಯಲ್ಲಿ ಹಣ್ಣಿನ ಹೋಳುಗಳನ್ನು ಹಾಕಿ …

ಸಾಂಬಾರು ಮತ್ತು ಪಲ್ಯಗಳು

HULI SOPPINA CHUTNEY ಹುಳಿ ಸೊಪ್ಪಿನ ಚಟ್ನಿ

ಹೆಸರೇ ಹೇಳುವ ಹಾಗೇ, ಹೂವಿನ ಕುಂಡಗಳಲ್ಲಿ, ತೆರೆದ ಜಾಗಗಳಲ್ಲಿ ತಾನಾಗೇ ಬೆಳೆಯುವ ಈ ಪುಟ್ಟ ಪುಟ್ಟ ಸೊಪ್ಪಿನ ಗಿಡ ರುಚಿಯಲ್ಲಿ ಬಹಳ ಹುಳಿ! ಇದರಿಂದ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಇದು ಅಜ್ಜಿಯ ಕೈರುಚಿ! ಮಾಡುವ ವಿಧಾನ:- ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಖಾರಕ್ಕೆ ಬೇಕಾಗುವಷ್ಟು ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ. ಸ್ವಲ್ಪ ತಣ್ಣಗಾದ ನಂತರ ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕಾಯಿ ತುರಿ ಹಾಕಿ ರುಬ್ಬಿಡಿ. ಒಗ್ಗರಣೆಗೆ ಸಾಸಿವೆ, ಇಂಗು, …

ಸಿಹಿ ತಿನಿಸುಗಳು

KASHI HALWA ಕಾಶಿ ಹಲ್ವಾ

ಬೂದುಗಂಬಳ ಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು! ಮಕ್ಕಳು ಪ್ರತಿದಿನ ಇದನ್ನು ತಿಂದರೆ ಅವರ ಙಾಪಕ ಶಕ್ತಿ ಹೆಚ್ಚಾಗುತ್ತದೆ! ಇಂತಹ ತರಕಾರಿಯಿಂದ ಮಾಡುವ ಒಂದು ರುಚಿಯಾದ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಮದುವೆ, ಗೃಹಪ್ರವೇಶ, ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಈ ಸಿಹಿ ಮಾಡೇ ಮಾಡುತ್ತಾರೆ! ಮಾಡುವ ವಿಧಾನ:- 2 ಅಳತೆ ಬೂದುಗಂಬಳ ಕಾಯಿ ಸಿಪ್ಪೆ, ಬೀಜ ತೆಗೆದು ತುರಿದಿಡಿ. ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ಬಾದಾಮಿ, ದ್ರಾಕ್ಷಿ ಹಾಕಿ …

Tindi Tinisu ಉಪಹಾರ

PANEER FRANKIE ಪನ್ನೀರ್ ಫ್ರಾಂಕಿ

ಮಕ್ಕಳಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ಮಾಡಬಹುದಾದ ರೆಸಿಪಿ! ರುಚಿಕರ, ಆರೋಗ್ಯಕರವಾದದ್ದು! ಮಾಡುವುದು ಸುಲಭ ಕೂಡ! ಮಾಡುವ ವಿಧಾನ :- ಚಪಾತಿ ಮಾಡಲು:- 1/2 ಬಟ್ಟಲು ಮೈದಾ, 1/2 ಬಟ್ಟಲು ಗೋಧಿ ಹಿಟ್ಟು, 1 ಚಮಚ ಎಣ್ಣೆ, ಉಪ್ಪು, 1 ಬೇಯಿಸಿ ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಅಥವಾ ಹಾಲು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ 10 ನಿಮಿಷ ಮುಚ್ಚಿಡಿ.   ಮಸಾಲೆಗೆ:- 2 ಕಟ್ಟು ಪಾಲಾಕ್ …

ಸಿಹಿ ತಿನಿಸುಗಳು

KADALE BEEJADA BURFI ಕಡಲೇ ಬೀಜದ ಬರ್ಫಿ

ಸುಲಭವಾಗಿ ಮಾಡಬಹುದಾದ ಆರೋಗ್ಯಕರವಾದ ಸಿಹಿಯ ರೆಸಿಪಿ ನಿಮಗಾಗಿ! ಮಾಡುವ ವಿಧಾನ:- 1 ಅಳತೆ ಕಡಲೇ ಬೀಜ ಗರಿ ಗರಿಯಾಗಿ ಹುರಿದು ಸಿಪ್ಪೆ ತೆಗೆದು ನುಣ್ಣಗೆ ಪುಡಿ ಮಾಡಿಡಿ. 1 ಅಳತೆ ಬೆಲ್ಲ ಪುಡಿ ಮಾಡಿಡಿ. ಸ್ವಲ್ಪ ಏಲಕ್ಕಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಜೊತೆಗೆ ಕಾಲು ಭಾಗದಷ್ಟು ನೀರು ಹಾಕಿ ಪಾಕ ಬರಲು ಬಿಡಿ. ಒಂದೆಳೆ ಪಾಕ ಬಂದೊಡನೆ ಕಡಲೇ ಬೀಜದ ಪುಡಿ ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಕಲೆಸಿ. ಜೊತೆಗೆ 4 ಚಮಚ ತುಪ್ಪ ಹಾಕಿ. …

Oota

PANEER BIRIYANI ಪನ್ನೀರ್ ಬಿರಿಯಾನಿ

ಪನ್ನೀರ್ ಬಹಳ ರುಚಿಯಾದ, ಆರೋಗ್ಯಕರವಾದ ಹಾಲಿನ ಪದಾರ್ಥ!ಇದರಿಂದ ಮಾಡಬಹುದಾದ ರುಚಿಯಾದ ಬಿರಿಯಾನಿ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 4 ಹಸಿ ಮೆಣಸಿನಕಾಯಿ, 1 ಬೆಳ್ಳುಳ್ಳಿ, 1 ಇಂಚು ಶುಂಠಿ ಸಿಪ್ಪೆ ತೆಗೆದು ಪೇಸ್ಟ್ ಮಾಡಿಡಿ. ಅರ್ಧ ಅಕ ಜೊತೆಗೆ ಹಾಕಿ. ಇನ್ನರ್ಧ ಗ್ರೇವಿಗೆ ಹಾಕಲು ಇಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ.   1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, 1 ಇಂಚು …