ಉಪಹಾರ

HALASINA HANNINA PADDU ಹಲಸಿನ ಹಣ್ಣಿನ ಪಡ್ಡು

ಹಲಸಿನ ಹಣ್ಣಿನ ಪ್ರಿಯರಿಗೆ ಇಲ್ಲಿದೆ ರುಚಿಯಾದ ರೆಸಿಪಿ! ಇದು ಸಾಂಪ್ರಾದಾಯಿಕ ಸಿಹಿ! ಮಾಡುವುದು ಸುಲಭ ಮತ್ತು ರುಚಿಕರ!

ಮಾಡುವ ವಿಧಾನ :-

1 1/2 ಲೋಟ ಅಕ್ಕಿಯನ್ನು 4 ಗಂಟೆ ಕಾಲ ನೆನೆಸಿಡಿ.

1 ಲೋಟ ಬೆಲ್ಲ ಪುಡಿ ಮಾಡಿಡಿ.

1 ಲೋಟ ಕಾಯಿ ತುರಿದಿಡಿ.

1 ಲೋಟ ಹಲಸಿನ ಹಣ್ಣಿನ ಹೋಳುಗಳನ್ನು ಹೆಚ್ಚಿಡಿ.

ಮೊದಲು ಅಕ್ಕಿಯನ್ನು ನುಣ್ಣಗೆ ರುಬ್ಬಿ ನಂತರ ಕಾಯಿ ತುರಿ, ಬೆಲ್ಲದ ಪುಡಿ ಹಾಕಿ ಮತ್ತೊಮ್ಮೆ ರುಬ್ಬಿ.

ಕೊನೆಯಲ್ಲಿ ಹಣ್ಣಿನ ಹೋಳುಗಳನ್ನು ಹಾಕಿ ಇನ್ನೊಂದು ಬಾರಿ ರುಬ್ಬಿಡಿ.

ಪಡ್ಡು ತವಾ ಬಿಸಿಯಾಗಲು ಇಡಿ. ನಂತರ ತುಸು ಹೆಚ್ಚೇ ತುಪ್ಪ ಅಥವಾ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗುವವರೆಗೆ ಬೇಯಿಸಿ ತುಪ್ಪದೊಂದಿಗೆ ಸವಿಯಿರಿ!

ಇದೇ ಹಿಟ್ಟಿನಿಂದ ದೋಸೆ ಅಥವಾ ಇಡ್ಲಿ ಬೇಕಾದರೂ ಮಾಡಬಹುದು! ಇದೇ ರೀತಿ ಹಲಸಿನ ಹಣ್ಣಿನ ಬದಲು ಬಾಳೆಹಣ್ಣು ಹಾಕಿ ಬೇಕಾದರೂ ಮಾಡಬಹುದು!

ಧನ್ಯವಾದಗಳು.

Leave a Reply

Your email address will not be published.