Showing 174 Result(s)
ಉಪಹಾರ

RAVE ROTTI & ELLINA CHUTNEY ರವೆ ರೊಟ್ಟಿ ಮತ್ತು ಎಳ್ಳಿನ ಚಟ್ನಿ

ಬೆಳಿಗ್ಗೆ ತಿಂಡಿಗೆ ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆ ಬಟ್ಟಲಿನಲ್ಲಿ ಹಾಕಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ 2 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ 1 ಚಮಚ, 4 ಚಮಚ ಕಾಯಿ ತುರಿ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಬಿಸಿ ನೀರು ಹಾಕಿ ರೊಟ್ಟಿ ಹಿಟ್ಟು ಕಲೆಸಿ 10 ನಿಮಿಷದ ನಂತರ ತೆಳ್ಳಗೆ ರೊಟ್ಟಿ ತಟ್ಟಿ ಕಾವಲಿಯ ಮೇಲೆ ಹಾಕಿ ಸ್ವಲ್ಪ ಎಣ್ಣೆ …

ಉಪಹಾರ

SET DOSA ಸೆಟ್ ದೋಸಾ

ಹೋಟೆಲ್ ಗಳಲ್ಲಿ ಜನ ಇಷ್ಟ ಪಟ್ಟು ತಿನ್ನುವ ತಿಂಡಿ! ಮಾಡುವ ವಿಧಾನ ಇಲ್ಲಿದೆ ನೋಡಿ! ಮಾಡುವ ವಿಧಾನ:- ದೋಸೆ ಅಕ್ಕಿ – 2 ಲೋಟ ಉದ್ದಿನ ಬೇಳೆ – 1/2 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 1 ಟೀ ಚಮಚ ಇಷ್ಟು ಸಾಮಗ್ರಿಗಳನ್ನು ಒಟ್ಟಿಗೆ 4 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಮಾತ್ರ ಬೇರೆ 1 ಗಂಟೆ ನೆನೆಸಿದರೆ ಸಾಕು. ನಂತರ ನುಣ್ಣಗೆ ರುಬ್ಬಿ, ಉಪ್ಪು ಹಾಕಿ ಕಲೆಸಿ, ರಾತ್ರಿ ಪೂರ ಉದುಗು …

ಉಪಹಾರ

HALASINA HANNINA PADDU ಹಲಸಿನ ಹಣ್ಣಿನ ಪಡ್ಡು

ಹಲಸಿನ ಹಣ್ಣಿನ ಪ್ರಿಯರಿಗೆ ಇಲ್ಲಿದೆ ರುಚಿಯಾದ ರೆಸಿಪಿ! ಇದು ಸಾಂಪ್ರಾದಾಯಿಕ ಸಿಹಿ! ಮಾಡುವುದು ಸುಲಭ ಮತ್ತು ರುಚಿಕರ! ಮಾಡುವ ವಿಧಾನ :- 1 1/2 ಲೋಟ ಅಕ್ಕಿಯನ್ನು 4 ಗಂಟೆ ಕಾಲ ನೆನೆಸಿಡಿ. 1 ಲೋಟ ಬೆಲ್ಲ ಪುಡಿ ಮಾಡಿಡಿ. 1 ಲೋಟ ಕಾಯಿ ತುರಿದಿಡಿ. 1 ಲೋಟ ಹಲಸಿನ ಹಣ್ಣಿನ ಹೋಳುಗಳನ್ನು ಹೆಚ್ಚಿಡಿ. ಮೊದಲು ಅಕ್ಕಿಯನ್ನು ನುಣ್ಣಗೆ ರುಬ್ಬಿ ನಂತರ ಕಾಯಿ ತುರಿ, ಬೆಲ್ಲದ ಪುಡಿ ಹಾಕಿ ಮತ್ತೊಮ್ಮೆ ರುಬ್ಬಿ. ಕೊನೆಯಲ್ಲಿ ಹಣ್ಣಿನ ಹೋಳುಗಳನ್ನು ಹಾಕಿ …

Tindi Tinisu ಉಪಹಾರ

PANEER FRANKIE ಪನ್ನೀರ್ ಫ್ರಾಂಕಿ

ಮಕ್ಕಳಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ಮಾಡಬಹುದಾದ ರೆಸಿಪಿ! ರುಚಿಕರ, ಆರೋಗ್ಯಕರವಾದದ್ದು! ಮಾಡುವುದು ಸುಲಭ ಕೂಡ! ಮಾಡುವ ವಿಧಾನ :- ಚಪಾತಿ ಮಾಡಲು:- 1/2 ಬಟ್ಟಲು ಮೈದಾ, 1/2 ಬಟ್ಟಲು ಗೋಧಿ ಹಿಟ್ಟು, 1 ಚಮಚ ಎಣ್ಣೆ, ಉಪ್ಪು, 1 ಬೇಯಿಸಿ ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಅಥವಾ ಹಾಲು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ 10 ನಿಮಿಷ ಮುಚ್ಚಿಡಿ.   ಮಸಾಲೆಗೆ:- 2 ಕಟ್ಟು ಪಾಲಾಕ್ …

Kannada Oota ಉಪಹಾರ

KOTTHAMBARI BATH ಕೊತ್ತಂಬರಿ ಬಾತ್

ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ! Preparation Time: 10 Minutes Cooking Time: 15 Minutes Serves : 4 Person ಬೇಕಾಗುವ ಪದಾರ್ಥಗಳು:- ಬೀನ್ಸ್ : 50 ಗ್ರಾಂ ಕ್ಯಾರೆಟ್ : 1 ಚಿಕ್ಕದು ಆಲೂಗೆಡ್ಡೆ : 1 ಚಿಕ್ಕದು ಬಟಾಣಿ : 50 ಗ್ರಾಂ ಕೊತ್ತಂಬರಿ ಸೊಪ್ಪು : 1/2 ಕಟ್ಟು ಹಸಿ ಮೆಣಸಿನಕಾಯಿ : 4 ಅಕ್ಕಿ – 1/4 ಕೇಜಿ ಎಣ್ಣೆ : 50 ಗ್ರಾಂ ಮಾಡುವ ವಿಧಾನ:- ಅಕ್ಕಿ ತೊಳೆದು …

ಉಪಹಾರ

DHOKLA ದೋಕ್ಲಾ

ಗುಜರಾತಿನ ಮೂಲದ ಜನಪ್ರಿಯ ತಿಂಡಿ! ಮಾಡುವುದು ಬಹಳ ಸುಲಭ! Preparation Time : 5 Minutes Cooking Time : 15 Minutes ಬೇಕಾಗುವ ಪದಾರ್ಥಗಳು :- ಕಡಲೇ ಹಿಟ್ಟು – 1 ಕಪ್ ಎಣ್ಣೆ – 1 ಟೇಬಲ್ ಚಮಚ ಅರಿಷಿಣ – 1/2 ಟೀ ಚಮಚ ಈನೋ ಫ್ರೂಟ್ ಸಾಲ್ಟ್ – 1/2 ಪ್ಯಾಕೇಟ್/ ಬೇಕಿಂಗ್ ಪೌಡರ್ 1ಟೀ ಚಮಚ ಹಸಿ ಮೆಣಸಿನಕಾಯಿ – 2 ಹಸಿ ಶುಂಠಿ – 1/2 ಇಂಚು ಕಾಯಿ …

Kannada Oota ಉಪಹಾರ ಹಬ್ಬದ ಅಡುಗೆಗಳು

SASIVE KAYANNA ಸಾಸಿವೆ ಕಾಯನ್ನ

ಸಾಂಪ್ರಾದಾಯಕ ಅಡುಗೆ! ಅಜ್ಜಿಯ ಕಾಲದಲ್ಲಿ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಚಿಟಿಕೆ ಅರಿಷಿಣ, ಉಪ್ಪು, 2 ಲೋಟ ನೀರು ಹಾಕಿ ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ. 1 ಟೀ ಚಮಚ ಸಾಸಿವೆ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.     4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ, ಕಾಯಿ ತುರಿ, ಸಾಸಿವೆ ಪುಡಿ ಹಾಕಿ ಚಟ್ನಿಯ ಹದಕ್ಕೆ ರುಬ್ಬಿಡಿ.     ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ …

Kannada ಉಪಹಾರ

HEEREKAI METHI KICHADI ಹೀರೇ ಕಾಯಿ ಮೇಥಿ ಕಿಚಡಿ

ಆರೋಗ್ಯಕ್ಕೆ ಹೀರೆಕಾಯಿ ಮತ್ತು ಮೆಂತ್ಯ ಸೊಪ್ಪು ಎರಡೂ ಬಹಳ ಒಳ್ಳೆಯದು! ಈ ಆರೋಗ್ಯಕರವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಹೀರೇಕಾಯಿ, 1 ಕಟ್ಟು ಮೆಂತ್ಯ ಸೊಪ್ಪು, 1 ಈರುಳ್ಳಿ, 2 ಟೋಮೋಟೋ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.    1 ಲೋಟ ಅಕ್ಕಿ/ಗೋಧಿ ನುಚ್ಚು, 1/2 ಲೋಟ ಹೆಸರು ಬೇಳೆ ಸ್ವಲ್ಪ ಹುರಿದು ತೊಳೆದಿಡಿ. ನಾನು ಹಾಕಿರುವುದು ಗೋಧಿ ನುಚ್ಚು ! ( Broken wheat ) ಕುಕ್ಕರಿನಲ್ಲಿ …

Kannada Oota ಉಪಹಾರ

GOJJANNA ಗೊಜ್ಜನ್ನ

ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- ನಿಂಬೆ ಹಣ್ಣು ಗಾತ್ರದ ಹುಣಿಸೆ ರಸ ತೆಗೆದಿಡಿ. 4 ಚಮಚ ಕಾಯಿ ತುರಿದಿಡಿ.     ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ. 1 ಲೋಟ ಅಕ್ಕಿ ತೊಳೆದು ಹುಣಿಸೆ ರಸ, 2 ಚಮಚ ರಸಂ ಪುಡಿ ( ಸಾರಿನ ಪುಡಿ ), ಉಪ್ಪು, ಚಿಟಿಕೆ ಅರಿಷಿಣ, ಚೂರು ಬೆಲ್ಲ 2 ಲೋಟ ನೀರು …

Kannada Oota ಉಪಹಾರ

MAVINA CHITRANNA ಮಾವಿನ ಚಿತ್ರಾನ್ನ

ನಮ್ಮ ಮನೆಯಲ್ಲಿ ಯುಗಾದಿ ಹಬ್ಬದ ದಿನ ತಪ್ಪದೆ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. 10 ರಿಂದ 12 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ.    ಮೇಲೆ ಹೇಳಿರುವ ಮೂರನ್ನು ಸ್ವಲ್ಪ ಉಪ್ಪು ಹಾಕಿ, ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, …