CHOCOLATE IDLI & VEGETABLES IDLI ಚಾಕೊಲೇಟ್ ಇಡ್ಲಿ & ವೆಜಿಟೇಬಲ್ ಇಡ್ಲಿ
ನಾಳೆ ನವೆಂಬರ್ 14 ! ಮಕ್ಕಳ ದಿನಾಚರಣೆ! ಅರೆ ಹೌದಲ್ಲವಾ! ಮರೆತಿದ್ದೆ ಅಂತ ತಲೆ ಮೇಲೆ ಕೈಯಾಕೆ ಇಟ್ಟುಕೊಳ್ತೀರಾ!? ನಾನಿದ್ದೀನಲ್ಲಾ ನಿಮಗೆ ಙಾಪಕ ಮಾಡೋದಕ್ಕೆ! ಸರಿ ನಾಳೆ ಮಕ್ಕಳಿಗೆ ಇಷ್ಟವಾಗುವ ಒಂದು ರೆಸಿಪಿ ಹೇಳ್ತೀನಿ ಕೇಳಿ! ಚಾಕೊಲೇಟ್ ಇಡ್ಲಿ! ಮಕ್ಕಳಿಗೆ ತುಂಬಾ ಇಷ್ಟವಾಗುವುದು ಚಾಕೊಲೇಟ್! ಅದನ್ನೇ ಹಾಕಿ ಇಡ್ಲಿ ಮಾಡಿಕೊಡಿ. ಖುಷಿಯಾಗಿ ತಿನ್ನುತ್ತಾರೆ! ಏನಂದಿರಿ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದಲ್ಲ! ಹಲ್ಲು ಹುಳುಕಾಗುತ್ತೆ ಅಂದಿರಾ!? ಪಾಪ ಮಕ್ಕಳು ! ನಾಳೆ ಅವರ ದಿನಾಚರಣೆ! ಮಾಡಿಕೊಡಿ ! ತುಂಬಾ ಸುಲಭ ಮಾಡುವುದು! …



