Showing 174 Result(s)
Kannada Oota ಉಪಹಾರ

MASALA MANGO RICE ಮಸಾಲ ಮ್ಯಾಂಗೋ ರೈಸ್

ಮಾವಿನ ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ?! ಅದರ ಚಿತ್ರಾನ್ನ ಎಲ್ಲರೂ ಇಷ್ಟ ಪಡುವ ತಿನಿಸು! ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 1 ತೋತಾಪುರಿ ಮಾವಿನ ಕಾಯಿಯನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ/ ತುರಿದಿಡಿ. 4 ಚಮಚ ಕಾಯಿ ತುರಿದಿಡಿ. 1 ಚಮಚ ಸಾಸಿವೆ, 1 ಚಮಚ ಜೀರಿಗೆ, 1/2 ಚಮಚ ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿಯನ್ನು ಎಣ್ಣೆ ಹಾಕಿ ಹುರಿದು ಪುಡಿ …

Kannada Oota ಉಪಹಾರ

COCONUT GARLIC RICE ಕೋಕೋನಟ್ ಗಾರ್ಲಿಕ್ ರೈಸ್

ಮಾಡುವ ವಿಧಾನ :- 1/2 ಕಾಯಿ ಹೋಳಿನ ಕಾಯಿ ತುರಿದಿಡಿ ( ದೊಡ್ಡ ಹೋಳು) 1 ಬೆಳ್ಳುಳ್ಳಿ ಸಿಪ್ಪೆ ತೆಗೆದಿಡಿ. ಕಾಯಿ ತುರಿ, ಬೆಳ್ಳುಳ್ಳಿ, 5 ಹಸಿ ಮೆಣಸಿನ ಕಾಯಿ ನೀರು ಹಾಕಿ ಚಟ್ನಿ ಹದಕ್ಕೆ ರುಬ್ಬಿಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಲೋಟ ಸಾಧಾರಣ ಅಕ್ಕಿ ತೊಳೆದಿಡಿ. ಕುಕ್ಕರಿಗೆ 4 ಚಮಚ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ, ಮರಾಠಿ ಮೊಗ್ಗು ಹಾಕಿ ಸ್ವಲ್ಪ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಹುರಿದು, …

Kannada ಉಪಹಾರ

AVALAKKI ROTTI ಅವಲಕ್ಕಿ ರೊಟ್ಟಿ

ಸಾಮಾನ್ಯವಾಗಿ ಏಕಾದಶಿ, ಸಂಕಷ್ಟ ಹರ ವ್ರತ ಇಂತಹ ಸಮಯದಲ್ಲಿ ಉಪವಾಸ ಇರುವಾಗ ಅವಲಕ್ಕಿ ಒಗ್ಗರಣೆ ಹಾಕಿ ತಿನ್ನುತ್ತಾರೆ! ಎಷ್ಟು ದಿನ ಅದೇ ರೀತಿ ತಿನ್ನುವುದು! ಸ್ವಲ್ಪ ಬದಲಾವಣೆಗಾಗಿ ಅವಲಕ್ಕಿ ರೊಟ್ಟಿ ಮಾಡಿ ನೋಡಿ! ಮಾಡುವ ವಿಧಾನ:- 1 ಲೋಟ ಗಟ್ಟಿ ಅವಲಕ್ಕಿಯನ್ನು ಕಾಟನ್ ಬಟ್ಟೆ ಅಥವಾ Kitchen towel ನಿಂದ ಚೆನ್ನಾಗಿ ಒರೆಸಿ, ನುಣ್ಣಗೆ ಪುಡಿ ಮಾಡಿಡಿ. 4 ಚಮಚ ಕಾಯಿ ತುರಿದಿಡಿ. ಈರುಳ್ಳಿ ಹಾಕುವ ಹಾಗಿದ್ದರೆ ಸಣ್ಣಗೆ ಹೆಚ್ಚಿಡಿ. ಕೊತ್ತಂಬರಿ ಸೊಪ್ಪು, ಮೆಂತ್ಯ, ಸಬ್ಬಾಕ್ಷಿ ಸೊಪ್ಪು …

Kannada ಉಪಹಾರ

NEERU DOSE ನೀರು ದೋಸೆ

ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಂತ ಹಾಕಿದ್ದೇನೆ! ಮಾಡುವ ವಿಧಾನ:- 2 ಲೋಟ ದೋಸೆ ಅಕ್ಕಿಯನ್ನು ತೊಳೆದು ರಾತ್ರಿ ಪೂರ ನೆನೆಸಿಡಿ. ಬೆಳಿಗ್ಗೆ 1/2 ಅಥವಾ 3/4 ಲೋಟ ಕಾಯಿ ತುರಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಡಿ. ಕಾಯಿ ಸಾಧ್ಯವಾದರೆ ಎಳನೀರಿನ ಗಂಜಿ ಅಂತಾರಲ್ಲಾ ಆ ತರಹ ಎಳೆ ಕಾಯಿ ಆದರೆ ಒಳ್ಳೆಯದು! ಅದು ಸಿಗದಿದ್ದರೆ ಸಾಧಾರಣ ಕಾಯಿ ತುರಿ ಹಾಕಿ ರುಬ್ಬಿದರೆ ಆಯಿತು. ನುಣ್ಣಗೆ ರುಬ್ಬಿದ ನಂತರ ಉಪ್ಪು …

Kannada ಉಪಹಾರ

OPEN BUTTER MASALA DOSE ಓಪನ್ ಬಟರ್ ಮಸಾಲ ದೋಸೆ

ದೋಸೆ ಪ್ರಿಯರಿಗಾಗಿ ಇನ್ನೊಂದು ರುಚಿಯಾದ ರೆಸಿಪಿ ಇಲ್ಲಿದೆ! ಓಪನ್ ಬಟರ್ ಮಸಾಲ ದೋಸೆ! ಮಾಡುವ ವಿಧಾನ :- ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1 ಲೋಟ ತೊಗರಿ ಬೇಳೆ- 1 ಚಮಚ ಮೆಂತ್ಯ – 1 ಚಮಚ ಗಟ್ಟಿ ಅವಲಕ್ಕಿ / ಅನ್ನ – 4 ಚಮಚ ( ನಾವು ಅನ್ನ ರುಬ್ಬುವುದಿಲ್ಲ, ಹಾಗಾಗಿ ಅವಲಕ್ಕಿ ಹಾಕಿದ್ದೇನೆ) ಎಲ್ಲ ಪದಾರ್ಥಗಳನ್ನು ತೊಳೆದು ಬೇರೆ ಬೇರೆಯಾಗಿ 3 ಗಂಟೆ ಕಾಲ ನೆನೆಸಿಡಿ. ನಂತರ …

Kannada Oota ಉಪಹಾರ

ONION BATH ಆನಿಯನ್ ಬಾತ್

ಹೆಸರೇ ಹೇಳುವಂತೆ ಈರುಳ್ಳಿ ಹೆಚ್ಚಿಗೆ ಹಾಕಿ ಮಾಡುವ ರೆಸಿಪಿ! ಮಾಡುವ ವಿಧಾನ:- 4 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 4 ಚಮಚ ಹುಣಿಸೆ ರಸ ತೆಗೆದು ಚೂರು ಬೆಲ್ಲ ಹಾಕಿಡಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಜೀರಿಗೆ, ಅರಿಷಿಣ, ಕರಿಬೇವು, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಖಾರದ ಪುಡಿ, 1 ಚಮಚ ಸಾರಿನ ಪುಡಿ, ಉಪ್ಪು, ಹುಣಿಸೆ ರಸ, 1 ಲೋಟ ತೊಳೆದ …

Kannada Oota ಉಪಹಾರ

NAVARATHAN PALAV ನವರತನ್ ಪಲಾವ್

ಹೆಸರು ಕೇಳಿ ಯಾವುದೋ ಒಡವೆ ಅಂದು ಕೊಂಡಿರಾ!. ಅಯ್ಯೋ ರಾಮ ಇದು ಅಡುಗೆ ಅರಮನೆ ರೀ! ಇಲ್ಲಿ ಕೇವಲ ಅಡುಗೆ ಬಗ್ಗೆ ಮಾತ್ರ ಪೋಸ್ಟ್ ಹಾಕಬೇಕು. ಇದು ಒಂದಾನೊಂದು ಕಾಲದಲ್ಲಿ ಒಬ್ಬರು ಗುಜರಾತಿ ಮಹಿಳೆಯಿಂದ, 1,500 ಸಾವಿರ ಕೊಟ್ಟು ಕಲಿತ 10 ರೆಸಿಪಿಗಳಲ್ಲಿ ಇದೂ ಒಂದು! ಮಾಡುವ ವಿಧಾನ:- ಹುರುಳಿ ಕಾಯಿ, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಗೋಭಿ ಇಷ್ಟು ತರಕಾರಿಗಳನ್ನು ಕುಕ್ಕರಿನಲ್ಲಿ ನೀರು ಹಾಕಿಮುಚ್ಚಳ ಹಾಕದೆ ಸ್ವಲ್ಪ ಬೇಯಿಸಿಡಿ. ( Half boiled) 1 ಲೋಟ ಬಾಸುಮತಿ …

Kannada Oota ಉಪಹಾರ

PUDINA PALAV ಪುದೀನಾ ಪಲಾವ್

ಸಿಂಪಲ್ ಅಂಡ್ ಟೇಸ್ಟಿ ಪಲಾವ್! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ರೆಸಿಪಿ! ಆದರೂ ಹೊಸಬರು ಕಲಿತುಕೊಳ್ಳಲಿ ಅಲ್ಲವೇ? ಮಾಡುವ ವಿಧಾನ:- 1 ಲೋಟ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹೆಚ್ಚು ನೀರು ಹಾಕಿ ಅನ್ನ ಮಾಡಿ ನೀರು ಸೋರಿ ಹಾಕಿಡಿ. 1 ಈರುಳ್ಳಿ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ. 1 ಕಟ್ಟು ಪುದೀನಾ, 4 ಕಡ್ಡಿ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, 1 ಚಿಕ್ಕ ಬೆಳ್ಳುಳ್ಳಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ …

Kannada ಉಪಹಾರ

BEETROOT POORI ಬೀಟ್ ರೂಟ್ ಪೂರಿ

ಬೀಟ್ ರೂಟ್ ಒಂದು ಆರೋಗ್ಯಕರ ತರಕಾರಿ, ಅದರಲ್ಲಿ fibre, iron, manganese, potassium ಬೇಕಾದಷ್ಟು ತುಂಬಿದೆ, ಅಲ್ಲದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಈ ಬೀಟ್ ರೂಟಿಗಿದೆ, ಆದರೆ ನಮ್ಮ ಮುದ್ದು ಮಕ್ಕಳು ಇದನ್ನು ತಿನ್ನುವುದಿಲ್ಲ, ಮಕ್ಕಳೇ ಏನು ದೊಡ್ಡವರೇ ತಿನ್ನುವುದಿಲ್ಲ, ಹಾಗಾದರೆ ಅಂಥವರಿಗಾಗಿ ಬೀಟ್ ರೂಟಿನ ಪೂರಿ ಮಾಡಿ ಕೊಡಿ, ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಬೀಟ್ ರೂಟ್ ಪೂರಿ ಮಾಡುವ ವಿಧಾನ:-  ಸಿಪ್ಪೆ ತೆಗೆದು ಬೀಟ್ ರೂಟನ್ನು ತುರಿದು ರುಬ್ಬಿ ಕೊಳ್ಳಿ, 1 ಬಟ್ಟಲು ಗೋಧಿ …

Kannada ಉಪಹಾರ

GODHI ROTTI ಗೋಧಿ ರೊಟ್ಟಿ

ಚಪಾತಿ ತಿನ್ನಲು ಬೇಸರವಾದರೆ ಹೀಗೆ ಮಾಡಿ ನೋಡಿ! ಮಾಡುವ ವಿಧಾನ:- 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ ನಿಮಗೆ ಬೇಕಾಗುವಷ್ಟು ಸೊಪ್ಪು ಹೆಚ್ಚಿಡಿ. ನಾನು ಸಬ್ಬಾಕ್ಷಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿದ್ದೇನೆ. 2 ಚಮಚ ಕಾಯಿ ತುರಿದಿಡಿ. ಅವರೆ ಕಾಳು ಹಾಕುವುದಾದರೆ ಕುಕ್ಕರಿನಲ್ಲಿ ಬೇಯಿಸಿಡಿ. ಬಾಣಲೆಯಲ್ಲಿ 1 1/2 ಲೋಟದಷ್ಟು ನೀರು ಹಾಕಿ ಬಿಸಿಯಾಗಲು ಇಡಿ. ನೀರು ಬಿಸಿಯಾದಾಗ 1 ಲೋಟ ಗೋಧಿ ಹಿಟ್ಟು, ಈರುಳ್ಳಿ, ಸೊಪ್ಪು, ಕಾಯಿ ತುರಿ, ಉಪ್ಪು, 1/2 ಚಮಚ ಜೀರಿಗೆ ಹಾಕಿ ಚೆನ್ನಾಗಿ …