Showing 174 Result(s)
Kannada ಉಪಹಾರ

AKKI UPPITTU ಅಕ್ಕಿ ಉಪ್ಪಿಟ್ಟು

ಹೆಸರು ಕೇಳಿ ಆಶ್ಚರ್ಯ ಆಯ್ತಾ?! ಸಾಮಾನ್ಯವಾಗಿ ಉಪ್ಪಿಟ್ಟು ರವೆಯನ್ನು ಹಾಕಿ ಮಾಡುತ್ತಾರೆ. ಅಕ್ಕಿ ಹಾಕಿ ಉಪ್ಪಿಟ್ಟಾ ಅಂತ ಯೋಚನೆ ಮಾಡ ಬೇಡಿ. ಸುಲಭವಾಗಿ, ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ ನೋಡೋಣ! ಮಾಡುವ ವಿಧಾನ:- 1 ಲೋಟ ಅಕ್ಕಿಯನ್ನು ಎಣ್ಣೆ ಹಾಕದೆ ಕೆಂಪಾಗಿ ಹುರಿದಿಡಿ. ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಬಟಾಣಿ, ಈರುಳ್ಳಿ, ಆಲೂಗೆಡ್ಡೆ, ಟೋಮೇಟೋ ಎಲ್ಲಾ ಹಾಕಬಹುದು.    4 ಚಮಚ ಕಾಯಿ ತುರಿದಿಡಿ. 5 ಹಸಿ ಮೆಣಸಿನಕಾಯಿ …

Kannada ಉಪಹಾರ ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAKHANA KHEER & TEMPLE CHITRANNA ಮಖಾನಾ ಖೀರ್ ಮತ್ತು ಟೆಂಪಲ್ ಚಿತ್ರಾನ್

ಮಖಾನಾ ಖೀರ್ ಮಾಡುವ ವಿಧಾನ:-ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಮಖಾನಾ ಹಾಕಿ ನಾಲ್ಕೈದು ನಿಮಿಷ ಮಧ್ಯಮ ಉರಿಯಲ್ಲಿ ಹುರಿದಿಡಿ. ತಣ್ಣಗಾದ ಮೇಲೆ ಕೈಯಿಂದ ಸ್ವಲ್ಪ ಮಖಾನಾ ಪುಡಿ ಮಾಡಿ ಮಿಕ್ಕದ್ದೆಲ್ಲ ಹಾಗೇ ಇಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಬಿಡದಂತೆ ತಿರುಗಿಸುತ್ತಾ ಇರಿ.    ಹಾಲು ಅರ್ಧದಷ್ಟು ಆದಾಗ 3 ಅಥವಾ 4 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ, ಹುರಿದ ಮಖಾನಾ, ಚಿಟಿಕೆ ಏಲಕ್ಕಿ ಪುಡಿ, ತುಪ್ಪದಲ್ಲಿ …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

CHIROTI RAVE ROTTI & TOMATO KAYI CHUTNEY ಚಿರೋಟಿ ರವೆ ರೊಟ್ಟಿ ಮತ್ತು ಟೋಮೇಟೋ ಕಾಯಿ ಚಟ್ನಿ

ಪ್ರತಿ ದಿನ ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂಬುದು ಎಲ್ಲಾ ಗೃಹಿಣಿಯರನ್ನು ಕಾಡುವ ಪ್ರಶ್ನೆ!!! ಈ ರೊಟ್ಟಿ ಮಾಡಿ ನೋಡಿ! ಮೃದುವಾಗಿ, ರುಚಿಯಾಗಿ ಇರುತ್ತದೆ. ಮಾಡುವ ವಿಧಾನ:- 1 1/2 ಲೋಟ ನೀರಿಗೆ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ ಹಾಕಿ ಕುದಿಯಲು ಇಡಿ. ನೀರು ಕುಡಿಯಲು ಆರಂಭವಾದಾಗ 1 ಲೋಟ ಚಿರೋಟಿ ರವೆ, 2 ಚಮಚ ಅಕ್ಕಿ ಹಿಟ್ಟು ಹಾಕಿ, ಬೇಗ ಬೇಗ ಗಂಟಿಲ್ಲದ ಹಾಗೆ ಚೆನ್ನಾಗಿ ಕಲೆಸಿ, ಉರಿ ಪೂರ್ತಿಯಾಗಿ ಕಡಿಮೆ ಮಾಡಿ, ತಟ್ಟೆ …

Kannada Oota ಉಪಹಾರ

AMLA RICE ಆಮ್ಲ ರೈಸ್ (ಬೆಟ್ಟದ ನೆಲ್ಲಿ ಕಾಯಿ ಅನ್ನ)

ಬೆಟ್ಟದ ನೆಲ್ಲಿ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ! ಅದರ ರುಚಿಯಾದ ಚಿತ್ರಾನ್ನ ಮಾಡುವ ವಿಧಾನ ಇಲ್ಲಿದೆ ನೋಡಿ:- 1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ. 6 ರಿಂದ 8 ಬೆಟ್ಟದ ನೆಲ್ಲಿ ಕಾಯಿ ತೊಳೆದು, ತುರಿದಿಡಿ. 2 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ, ಸ್ವಲ್ಪ ಮೆಂತ್ಯ ಎಣ್ಣೆ ಹಾಕದೆ ಹುರಿದಿಡಿ.      6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ …

Kannada Oota ಉಪಹಾರ

VEG PALAV ( RESTAURANT STYLE) ವೆಜ್ ಪಲಾವ್

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹೋದಾಗ ತಿನ್ನುವ ಪಲಾವ್ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. 1 ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ಪೇಸ್ಟ್ ಮಾಡಿಡಿ. ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ.     ಕುಕ್ಕರಿನಲ್ಲಿ 4 ಚಮಚ ತುಪ್ಪ/ಎಣ್ಣೆ ಹಾಕಿ, ಕಾದ ನಂತರ 1 ಇಂಚು ಚಕ್ಕೆ, …

Kannada ಉಪಹಾರ

MYSORE MASALA DOSA ಮೈಸೂರು ಮಸಾಲ ದೋಸೆ

ಮಸಾಲ ದೋಸೆ ಯಾರಿಗೆ ಇಷ್ಟವಿಲ್ಲ ಹೇಳಿ! ನಾನಂತೂ ಹೋಟೆಲ್ ಗೆ ಹೋದರೆ ತಿಂಡಿಗೆ ಮಸಾಲ ದೋಸೆಯನ್ನೇ ತಿನ್ನುವುದು. ಮೈಸೂರು ಮಸಾಲ ದೋಸೆ ತುಂಬಾ ಗರಿ ಗರಿಯಾಗಿರುತ್ತದೆ. ಬಣ್ಣ ಕೂಡ ಕೆಂಪು! ಮಾಡುವ ವಿಧಾನ:- ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಕಡಲೇ ಬೇಳೆ – 1 ಚಮಚ ತೊಗರಿ ಬೇಳೆ – 1 ಚಮಚ ಮೆಂತ್ಯ – 1/8 ಚಮಚ ಅಕ್ಕಿ ಮತ್ತು ಅವಲಕ್ಕಿಯನ್ನು …

Kannada ಉಪಹಾರ

RAGI RAVE DOSA ರಾಗಿ ರವೆ ದೋಸಾ

ಸಾಮಾನ್ಯವಾಗಿ ಮಧುಮೇಹಿಗಳಿಗಾಗಿ ಮಾಡುವ ದೋಸೆ. ತುಂಬಾ ಜನರ ಮನೆಗಳಲ್ಲಿ ಮಾಡಬಹುದು. ಮಾಡುವ ವಿಧಾನ:- 1 ಲೋಟ ಚಿರೋಟಿ ರವೆ, 1 ಲೋಟ ರಾಗಿ ಹಿಟ್ಟು, 2 ಚಮಚ ಅಕ್ಕಿ ಹಿಟ್ಟು, 1/2 ಲೋಟ ಹುಳಿ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ ಸ್ವಲ್ಪ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ. ಬೇಕಾದರೆ ಸ್ವಲ್ಪ ನೀರು ಸೇರಿಸಿ 10 ನಿಮಿಷ ಮುಚ್ಚಿಡಿ.     ಕಾದ ಕಾವಲಿಯ ಮೇಲೆ ನಿಧಾನವಾಗಿ ಹಾಕಿ …

Kannada Oota ಉಪಹಾರ

TOMATO BATH ಟೋಮೇಟೋ ಬಾತ್

ತಿಂಡಿಗೆ, ಲಂಚ್ ಬಾಕ್ಸ್ ಗೆ ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 4 ಟೋಮೇಟೋ, 1 ಈರುಳ್ಳಿ,4 ಹಸಿ ಮೆಣಸಿನಕಾಯಿ, 1 ಚಿಕ್ಕ ಬೆಳ್ಳುಳ್ಳಿ, 1/2 ಇಂಚು ಶುಂಠಿ ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ. ನಾನು ಬಾಸುಮತಿ ಮತ್ತು ಸೋನಾ ಮಸೂರಿ ಅಕ್ಕಿ ಅರ್ಧ ಅರ್ಧ ಹಾಕಿದ್ದೇನೆ. ನೀವು ನಿಮಗೆ ಇಷ್ಟವಾದ ಅಕ್ಕಿ ಹಾಕಿ ಕೊಳ್ಳಿ. ಕುಕ್ಕರಿನಲ್ಲಿ 4 ಚಮಚ ಎಣ್ಣೆ/ತುಪ್ಪ ಹಾಕಿ, 2 …

Kannada ಉಪಹಾರ

PESARATTU ಪೆಸರಟ್ಟು

ಆಂಧ್ರ ಪ್ರದೇಶದ ಜನಪ್ರಿಯ ತಿಂಡಿ! ಆರೋಗ್ಯಕರವಾದ, ರುಚಿಯಾದ, ದೇಹಕ್ಕೆ ತಂಪಾದ ದೋಸೆ! ಮಾಡುವ ವಿಧಾನ:- 1 ಲೋಟ ಹೆಸರು ಕಾಳು, 2 ಚಮಚ ಅಕ್ಕಿ ರಾತ್ರಿ ಪೂರ ನೆನೆಸಿಡಿ. ಸಾಧಾರಣವಾಗಿ ಹೆಸರು ಕಾಳು ಹಾಕಿ ಮಾಡುವುದು. ನಾನು ಮೊಳಕೆ ಹೆಸರು ಕಾಳು ಹಾಕಿದ್ದೇನೆ. ಆರೋಗ್ಯಕರವಾದ ದೋಸೆಯನ್ನು ಮತ್ತಷ್ಟು ಆರೋಗ್ಯಕರ ಮಾಡುವ ಪ್ರಯತ್ನ! ಬೆಳಗ್ಗೆ ನೆಂದ ಕಾಳು, 1 ಅಥವಾ 2 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ …

Kannada ಉಪಹಾರ

MASALA AKKI ROTTI ಮಸಾಲ ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ! ಮಾಡುವ ವಿಧಾನ:- 1 ಸೌತೇ ಕಾಯಿ ತುರಿದಿಡಿ. 2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು. 1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ. 2 ಚಮಚ ಕಾಯಿ ತುರಿದಿಡಿ. …