Showing 174 Result(s)
Kannada ಉಪಹಾರ

TAVA ROTI & DAHI ALOO ತವಾ ರೋಟಿ ಮತ್ತು ದಹಿ ಆಲೂ

ಸಾಮಾನ್ಯವಾಗಿ ರೋಟಿ, ಕುಲ್ಚಾ, ನಾನ್ ಮುಂತಾದವುಗಳನ್ನು ತಂದೂರಿ ಒಲೆಗಳಲ್ಲಿ ಮಾಡುತ್ತಾರೆ. ಆದರೆ ಮನೆಯಲ್ಲಿ ತಂದೂರಿ ಒಲೆಯಿಂದ ಮಾಡಲು ಸಾಧ್ಯವಿಲ್ಲ! ರೋಟಿಯನ್ನು ತವಾ ಮೇಲೆ ಮಾಡುವ ರೆಸಿಪಿ ಇಲ್ಲಿದೆ!ತವಾ ರೋಟಿ ಮಾಡುವ ವಿಧಾನ:- ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು, ಚಿಟಿಕೆ ಬೇಕಿಂಗ್ ಪೌಡರ್, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಬೆಚ್ಚಗೆ ಇರುವ ಹಾಲು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ, ಮೇಲೆ ಸ್ವಲ್ಪ ಎಣ್ಣೆ ಸವರಿ 30 ನಿಮಿಷ ಮುಚ್ಚಿಡಿ. ನಂತರ ಚಿಕ್ಕ ಚಿಕ್ಕಉಂಡೆಗಳನ್ನು ಮಾಡಿ ಕೊಂಡು …

Kannada ಉಪಹಾರ

MALLIGE IDLI ಮಲ್ಲಿಗೆ ಇಡ್

ಈ ದಿನದ ವಿಶೇಷ ಮಲ್ಲಿಗೆ ಇಡ್ಲಿ! ಮಲ್ಲಿಗೆ ಇಡ್ಲಿ ಮಾಡುವ ವಿಧಾನ:- ಇಡ್ಲಿ / ದೋಸೆ ಅಕ್ಕಿ – 3 ಲೋಟ ಉದ್ದಿನ ಬೇಳೆ – 1 ಲೋಟ ಅವಲಕ್ಕಿ – 1/2 ಲೋಟ ಸಬ್ಬಕ್ಕಿ ( ಸಾಬೂದಾನ) – 1/2 ಲೋಟ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ತೊಳೆದು ನೆನೆಸಿಡಿ. ಸಬ್ಬಕ್ಕಿ ಮಾತ್ರ 6 ಗಂಟೆ ಕಾಲ ನೆನೆಯಬೇಕು. ಮಿಕ್ಕದ್ದೆಲ್ಲ 2 ಗಂಟೆ ನೆನೆಸಿದರೆ ಸಾಕು. ಮೊದಲು ಸಬ್ಬಕ್ಕಿಯನ್ನು ನುಣ್ಣಗೆ ರುಬ್ಬಿ, ನಂತರ ಉದ್ದಿನ …

Kannada ಉಪಹಾರ ಸಾಂಬಾರು ಮತ್ತು ಪಲ್ಯಗಳು

AKKI ROTTI & NELLI KAYI THOKKU ಅಕ್ಕಿ ರೊಟ್ಟಿ ಮತ್ತು ನೆಲ್ಲಿ ಕಾಯಿ ತೊಕ್ಕು

ಅಕ್ಕಿ ರೊಟ್ಟಿ ಎಲ್ಲರ ಪ್ರಿಯವಾದ ತಿಂಡಿ. ಜೊತೆಗೆ ಸ್ವಲ್ಪ ಬೇಯಿಸಿದ ಅವರೆ ಕಾಳು ಹಾಕಿದರೆ! ಆಹಾ ಮತ್ತಷ್ಟು ರುಚಿ!ಮಾಡುವ ವಿಧಾನ:- 1/2 ಲೋಟ ಅವರೆ ಕಾಳು ಬೇಯಿಸಿ ಇಡಿ. 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ 4 ಚಮಚ ಕಾಯಿ ತುರಿದಿಡಿ.     1 ಲೋಟ ಅಕ್ಕಿ ಹಿಟ್ಟಿಗೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೇಯಿಸಿದ ಅವರೆ ಕಾಳು, ಉಪ್ಪು, ಕಾಯಿ ತುರಿ, 1 ಚಮಚ ಜೀರಿಗೆ, 1 …

Kannada ಉಪಹಾರ

GOJJAVALLAKI ಗೊಜ್ಜವಲಕ್ಕಿ

ಶ್ರೀ ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ನಮಗೂ ಸಹ ಪ್ರಿಯವೇ! ಅದರಲ್ಲೂ ಗೊಜ್ಜವಲಕ್ಕಿ ಯಾರಿಗೆ ಇಷ್ಟವಿಲ್ಲ ಹೇಳಿ! ಏಕಾದಶಿ, ಸಂಕಷ್ಟ ಹರ ಗಣಪತಿ ವ್ರತಗಳಲ್ಲಿ ಮಾಡುವ ವಿಧಾನ ಇಲ್ಲಿದೆ:- ಮಾಡುವ ವಿಧಾನ:- 1 ಪಾವು ಗಟ್ಟಿ ಅವಲಕ್ಕಿ ತೊಳೆದಿಡಿ. ಹುಣಿಸೆ ರಸ 4 ಚಮಚ ತೆಗೆದಿಡಿ, ಅದಕ್ಕೆ ಚೂರು ಬೆಲ್ಲ ಹಾಕಿ ಕರಗಿಸಿಡಿ. 4 ಚಮಚ ಕಾಯಿ ತುರಿದಿಡಿ. 2 ಚಮಚ ಬಿಳಿ ಎಳ್ಳು ಹುರಿದು ಪುಡಿ ಮಾಡಿಡಿ.     ತೊಳೆದ ಅವಲಕ್ಕಿಗೆ ಹುಣಿಸೆ ರಸ, ಉಪ್ಪು, …

Kannada Oota ಉಪಹಾರ

MEXICAN RICE ಮೆಕ್ಸಿಕನ್ ರೈಸ್

ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ಕುಕ್ಕರಿನಲ್ಲಿ ಹಾಕಿ ಮುಚ್ಚಿಳ ಹಾಕದೆ ಬೇಯಿಸಿಟ್ಟುಕೊಳ್ಳಿ. 1 ಈರುಳ್ಳಿ , 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ತಲಾ ಒಂದೊಂದು ಕೆಂಪು, ಹಸಿರು, ಹಳದಿ ಬಣ್ಣದ ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬೇರೆ ಬೇರೆ ಬಣ್ಣ ಸಿಗದಿದ್ದರೆ ಹಸಿರು ಬಣ್ಣದ ದಪ್ಪ ಮೆಣಸಿನಕಾಯಿ ಹಾಕಬಹುದು.        1 ಹಿಡಿ ಸ್ವೀಟ್ ಕಾರ್ನ್, 2 ಹಿಡಿ ನೆನೆಸಿದ ಅಥವಾ …

Kannada ಉಪಹಾರ

SET DOSE ಸೆಟ್ ದೋಸೆ

ಮೆತ್ತಗೆ, ರುಚಿಯಾದ ಸೆಟ್ ದೋಸೆ ಎಲ್ಲರಿಗೂ ಇಷ್ಟವಾಗುವ ತಿಂಡಿ!ಮಾಡುವ ವಿಧಾನ:- ದೋಸೆ ಅಕ್ಕಿ – 4 ಲೋಟ ಉದ್ದಿನ ಬೇಳೆ – 1 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 2 ಚಮಚ ಎಲ್ಲಾ ತೊಳೆದು ಬೇರೆ ಬೇರೆ 2 ಗಂಟೆ ನೆನೆಸಿಡಿ. ಉದ್ದಿನ ಬೇಳೆ ಮತ್ತು ಮೆಂತ್ಯ ನುಣ್ಣಗೆ ರುಬ್ಬಿ. ಅಕ್ಕಿ ಅವಲಕ್ಕಿ ಒಟ್ಟಿಗೆ ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ರಾತ್ರಿ ಪೂರ ಉದುಗು ಬರಲು ಬಿಡಿ. ಬೆಳಗ್ಗೆ ಸ್ವಲ್ಪ ಸಕ್ಕರೆ …

Kannada ಉಪಹಾರ

KICHADI ಕಿಚಡಿ

ತಾಯಿ ದುರ್ಗಾ ಮತ್ತು ಸರಸ್ವತಿ ಇಬ್ಬರಿಗೂ ಬಹಳ ಪ್ರಿಯವಾದ ನೈವೇದ್ಯ! ಹಾಗಾದರೆ ಕಿಚಡಿ ಮಾಡುವ ವಿಧಾನ ನೋಡೋಣವೇ? ಮಾಡುವ ವಿಧಾನ:- ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ. ಈ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕುವ ಅಭ್ಯಾಸ ಕೆಲವು ಕಡೆ ಇರುವುದಿಲ್ಲ. ನಿಮಗೆ ಬೇಕಾದರೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಒಗ್ಗರಣೆಗೆ ಹಾಕಬಹುದು. 1 ಲೋಟ ಅಕ್ಕಿ, 1/2 ಲೋಟ ಹೆಸರು ಬೇಳೆ ತೊಳೆದು ನೀರು ಸೋರಿ ಹಾಕಿಡಿ.    1 ಇಂಚು ಶುಂಠಿ ಸಿಪ್ಪೆ ತೆಗೆದು …

Kannada ಉಪಹಾರ

SOPPINA RAVE IDLI ಸೊಪ್ಪಿನ ರವೆ ಇಡ್ಲಿ

ರವೆ ಇಡ್ಲಿ ಎಲ್ಲರೂ ಮಾಡುತ್ತಾರೆ, ಮನೆರ ಯಲ್ಲೂ ಮಾಡುತ್ತಾರೆ, ರೆಡಿ ಮೇಡ್ ಕೂಡಾ ಸಿಗುತ್ತದೆ! ಅದರಲ್ಲಿ ಏನು ವಿಶೇಷ ಅಂದಿರಾ?ರವೆಯನ್ನು ಹುರಿಯದೆ, ಧಾರಾಳವಾಗಿ ಸೊಪ್ಪು ಹಾಕಿ, ತಾಜಾ ಮೊಸರು ಹಾಕಿ ಮಾಡುವುದೇ ಈ ರೆಸಿಪಿ ವಿಶೇಷ!! ಸಾಮಾನ್ಯವಾಗಿ ರವೆ ಇಡ್ಲಿ ಎಲ್ಲರೂ ಹುರಿದು ಮಾಡುವುದು. ಹುರಿಯದ ರವೆ ಹಾಕಿ ಒಮ್ಮೆ ಮಾಡಿ ನೋಡಿ! ಮಾಡುವ ವಿಧಾನ:- 1 ಪಾವು ಮೀಡಿಯಂ ರವೆ ( ಉಪ್ಪಿಟ್ಟು ರವೆ) ಒಂದು ಬಟ್ಟಲಿನಲ್ಲಿ ಹಾಕಿಡಿ. 2 ಕಟ್ಟು ಪಾಲಾಕ್, 2 ಕಟ್ಟು …

Kannada ಉಪಹಾರ

MASALA KOTTE KADUBU ಮಸಾಲ ಕೊಟ್ಟೆ ಕಡುಬು

ಕರ್ನಾಟಕದ ಜನಪ್ರಿಯ ತಿಂಡಿ! ಕರಾವಳಿ, ಮಲೆ ನಾಡಿನ ಕಡೆ ಸ್ವಲ್ಪ ಹೆಚ್ಚಾಗಿ ಮಾಡುತ್ತಾರೆ. ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿ ಮಾತ್ರ ಸಿಗುತ್ತದೆ ಈ ಮಸಾಲ ಇಡ್ಲಿ! ನಾವು ಇಡ್ಲಿ ಅಂದರೆ ಅವರು ಇದನ್ನು ಕಡುಬು ಎನ್ನುತ್ತಾರೆ!ಮಾಡುವ ವಿಧಾನ:- ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಕಡುಬು ಮಾಡುವುದು ಹಲಸಿನ ಎಲೆಗಳನ್ನು ಜೋಡಿಸಿ ಮಾಡುವ ಕೊಟ್ಟೆಗಳಿಂದ. ಮಂಗಳೂರು ಸ್ಟೋರ್ ನಲ್ಲಿ ರೆಡಿ ಮೇಡ್ ಕೊಟ್ಟೆ ಸಿಗುತ್ತದೆ! ಸಿಗದಿದ್ದರೆ ಬಾಳೆ ಎಲೆಯಲ್ಲಿ ಮಾಡಬಹುದು. ಬಾಳೆ ಎಲೆಯೂ ಸಿಗದಿದ್ದರೆ ನಿಮ್ಮ ಮನೆಯಲ್ಲಿರುವ ಚಿಕ್ಕ …

Kannada ಉಪಹಾರ

OTAPPA (BANALE ROTTI) ಓಟಪ್ಪ ( ಬಾಣಲೆ ರೊಟ್ಟಿ)

ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎಲ್ಲೆಡೆ ಅವರೆ ಕಾಯಿಯ ಸೊಗಡು! ರುಚಿಯಾದ ಅವರೆ ಕಾಳಿನ ಒಂದು ಅತ್ಯಂತ ಹಳೆಯ ಕಾಲದ ಅಜ್ಜಿಯ ಕೈ ರುಚಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- ಎಳೆಯದಾದ ಅವರೆ ಕಾಳು 1 ಲೋಟ ಬೇಯಿಸಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. ( ಕಾಯಿ ತುರಿ ಸ್ವಲ್ಪ ಹೆಚ್ಚೇ ಬೇಕು) ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಹಸಿ ಮೆಣಸಿನಕಾಯಿ ಬೇಕಾದರೆ 2 ಸಣ್ಣಗೆ ಹೆಚ್ಚಿಡಿ.     ಬೆಂದ ಅವರೆ ಕಾಳಿಗೆ ಬಿಸಿಯಿದ್ದಾಗಲೇ …