ಉಪಹಾರ

DHOKLA ದೋಕ್ಲಾ

ಗುಜರಾತಿನ ಮೂಲದ ಜನಪ್ರಿಯ ತಿಂಡಿ! ಮಾಡುವುದು ಬಹಳ ಸುಲಭ!

Preparation Time : 5 Minutes

Cooking Time : 15 Minutes

ಬೇಕಾಗುವ ಪದಾರ್ಥಗಳು :-

ಕಡಲೇ ಹಿಟ್ಟು – 1 ಕಪ್
ಎಣ್ಣೆ – 1 ಟೇಬಲ್ ಚಮಚ
ಅರಿಷಿಣ – 1/2 ಟೀ ಚಮಚ
ಈನೋ ಫ್ರೂಟ್ ಸಾಲ್ಟ್ – 1/2 ಪ್ಯಾಕೇಟ್/ ಬೇಕಿಂಗ್ ಪೌಡರ್ 1ಟೀ ಚಮಚ
ಹಸಿ ಮೆಣಸಿನಕಾಯಿ – 2
ಹಸಿ ಶುಂಠಿ – 1/2 ಇಂಚು
ಕಾಯಿ ತುರಿ – 1 ಟೇಬಲ್ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1/2 ಟೀ ಚಮಚ
ನೀರು – 1/4 ಕಪ್

ಮಾಡುವ ವಿಧಾನ :-

ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಪೇಸ್ಟ್ ಮಾಡಿಡಿ.

ಬಟ್ಟಲಿನಲ್ಲಿ ಕಡಲೇ ಹಿಟ್ಟು,ಹಸಿ ಮೆಣಸಿನಕಾಯಿ ಪೇಸ್ಟ್, ಅರಿಷಿಣ, ಎಣ್ಣೆ ಉಪ್ಪು, ಸಕ್ಕರೆ, ನೀರು ಹಾಕಿ ಕಲೆಸಿಡಿ.

ಕುಕ್ಕರಿನಲ್ಲಿ ನೀರು ಬಿಸಿಯಾಗಲು ಇಡಿ.

ಕಡಲೇ ಹಿಟ್ಟಿನ ಮಿಶ್ರಣಕ್ಕೆ ಈನೋ ಹಾಕಿ ಕಲೆಸಿ ಧಾರಾಳವಾಗಿ ಎಣ್ಣೆ ಸವರಿದ ಕುಕ್ಕರ್ ಬಟ್ಟಲಿಗೆ ಹಾಕಿ ಕುಕ್ಕರಿನಲ್ಲಿಟ್ಟು 15 ನಿಮಿಷ ಇಡ್ಲಿಯ ಹಾಗೆ ಬೇಯಿಸಿ.

ನಂತರ ಎಚ್ಚರಿಕೆಯಿಂದ ಬಟ್ಟಲನ್ನು ತಲೆ ಕೆಳಗೆ ಮಾಡಿ.

ಚಿಕ್ಕ ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ.

ಬೆಂದ ದೋಕ್ಲಾ ಮೇಲೆ ಒಗ್ಗರಣೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಪುದೀನಾ ಚಟ್ನಿಯೊಂದಿಗೆ ಸವಿಯಿರಿ!

 

ಪುದೀನಾ ಚಟ್ನಿ ಮಾಡುವ ವಿಧಾನ:-

1 ಟೇಬಲ್ ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಟೇಬಲ್ ಚಮಚ ಪುದೀನಾ, 2 ಹಸಿ ಮೆಣಸಿನಕಾಯಿ, ಉಪ್ಪು, 1/2 ನಿಂಬೆ ಹಣ್ಣಿನ ರಸ ಹಾಕಿ ರುಬ್ಬಿದರೆ ರುಚಿಯಾದ ಪುದೀನಾ ಚಟ್ನಿ ರೆಡಿ!

ಧನ್ಯವಾದಗಳು

Leave a Reply

Your email address will not be published.