MOHAN THAAL ಮೋಹನ್ ತಾಲ್
ಮೋಹನ್ ತಾಲ್, ನಮ್ಮ ಮೈಸೂರು ಪಾಕಿನ ಸೋದರ ಸಂಬಂಧಿ ಎಂದು ಹೇಳಬಹುದು, ಗುಜರಾತಿನ ಈ ಸಿಹಿ ಮಾಡುವುದು ಸುಲಭ, ಆದರೆ ರುಚಿ ಅಪಾರ, ಮನೆಯಲ್ಲೇ ಇರುವ ಸಾಮಾನುಗಳನ್ನು ಬಳಸಿ ಬೇಗ ಮಾಡಬಹುದು. ಮಾಡುವ ವಿಧಾನ:- 1 ಬಟ್ಟಲು ಕಡಲೇ ಹಿಟ್ಟಿಗೆ, 1 ಚಮಚ ತುಪ್ಪ, 1 ಚಮಚ ಹಾಲು ಹಾಕಿ ಉದುರು ಉದುರಾಗಿ ಕಲೆಸಿ, ಜರಡಿ ಹಿಡಿಯಿರಿ. ಬಾಣಲೆಯಲ್ಲಿ 1/2 ಬಟ್ಟಲು ತುಪ್ಪ ಬಿಸಿ ಮಾಡಿ, ಜರಡಿ ಹಿಡಿದ ಕಡಲೇ ಹಿಟ್ಟನ್ನು ಹಾಕಿ ಕಡಿಮೆ …









