Showing 158 Result(s)
Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KADALE BEEJADA UNDE ಕಡಲೇ ಬೀಜದ ಉಂಡೆ

ನಾಗರ ಪಂಚಮಿಯಲ್ಲಿ ತಪ್ಪದೆ ಮಾಡುವ ಉಂಡೆ. ಸಾಧಾರಣವಾಗಿ ಕಡಲೇ ಬೀಜದ ಉಂಡೆಯನ್ನು ಬೆಲ್ಲದ ಪಾಕ ತೆಗೆದು ಮಾಡುತ್ತಾರೆ. ಈ ರೆಸಿಪಿ ಬಹಳ ಸುಲಭ!ಮಾಡುವ ವಿಧಾನ:- 1 ಲೋಟ ಬೆಲ್ಲ ಪುಡಿ ಮಾಡಿಡಿ. 1 ಲೊಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿ.     ನಂತರ ಬೆಲ್ಲದ ಪುಡಿ ಸೇರಿಸಿ ಮತ್ತೊಮ್ಮೆ Mixie ಯಲ್ಲಿ 2 ಸುತ್ತು ಸುತ್ತಿ ತೆಗೆದು ಕಲೆಸಿ ಉಂಡೆ ಮಾಡಿಡಿ. ಹೀಗೆ ಪುಡಿ ಮಾಡಿ ಉಂಡೆ ಮಾಡಿದರೆ …

Kannada Tindi Tinisu ಖಾರ ತಿನಿಸುಗಳು

VEGETABLE BONDA ವೆಜಿಟೇಬಲ್ ಬೋಂಡಾ

ಈ ಹವಾಮಾನಕ್ಕೆ ಬಿಸಿ ಬಿಸಿಯಾದ ಬೋಂಡಾ ಎಷ್ಟು ಚೆನ್ನ ಅಲ್ಲವೇ?! ಬೋಂಡಾ ರುಚಿಯಾಗಿ ಮತ್ತು ಆರೋಗ್ಯಕರವಾಗಿದ್ದರೆ ಮತ್ತೂ ಚೆನ್ನ! ವೆಜಿಟೇಬಲ್ ಬೋಂಡಾ ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಕುಕ್ಕರಿನಲ್ಲಿ ನೀರು ಹಾಕದೆ ಇಡ್ಲಿಯ ಹಾಗೆ 10 ನಿಮಿಷ ಹಬೆಯಲ್ಲಿ ಬೇಯಿಸಿಡಿ. ಹುರುಳಿ ಕಾಯಿ, ಕ್ಯಾರೆಟ್, ಬಟಾಣಿ, ಆಲೂಗೆಡ್ಡೆ, ಗೋಭಿ ಸ್ವಲ್ಪ ಸ್ವಲ್ಪ ಹಾಕಬಹುದು. 1 ಈರುಳ್ಳಿ,2 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೆಂದ ತರಕಾರಿಗಳನ್ನು ನೀರು ಸೋರಿ ಹಾಕಿಡಿ. ಬಾಣಲೆಯಲ್ಲಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KARJI KAYI ಕರ್ಜಿ ಕಾಯಿ

ಎಲ್ಲಾ ಹಬ್ಬಗಳಲ್ಲಾ ಸಾಮಾನ್ಯವಾಗಿ ಮಾಡುವ ಸಿಹಿ ತಿಂಡಿ. ತಾಯಿ ವರ ಮಹಾಲಕ್ಷ್ಮಿಗೂ ಪ್ರಿಯವಾದದ್ದು! ಮಾಡುವ ವಿಧಾನ:- ಮೊದಲು ಕಣಕದ ಹಿಟ್ಟು ಕಲೆಸಿಡೋಣ. 1 ಲೋಟ ಚಿರೋಟಿ ರವೆಗೆ 2 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು, 4 ಚಮಚ ಕಾದ ತುಪ್ಪ ಹಾಕಿ ಕಲೆಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಚಿನ ಹದಕ್ಕೆ ಕಲೆಸಿ 1/2 ಗಂಟೆ ಮುಚ್ಚಿಡಿ. ಹೂರಣಕ್ಕೆ :- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 2 ಚಮಚ ಬಿಳಿ ಎಳ್ಳು …

Kannada Tindi Tinisu ಸಿಹಿ ತಿನಿಸುಗಳು

KUNDA ಕುಂದಾ

ಬೆಳಗಾವಿಯ ಹೆಮ್ಮೆಯ ಸಿಹಿ ತಿಂಡಿ! ಬೆಳಗಾವಿಯನ್ನು ಕುಂದಾ ನಗರಿ ಎಂದೇ ಕರೆಯುತ್ತಾರೆ! ಮಾಡುವ ವಿಧಾನ:- 1 ಲೀಟರ್ ಗಟ್ಟಿ ಹಾಲನ್ನು ಕಾಯಲು ಇಡಿ. ಆಗಾಗ ಕಲೆಸುತ್ತಾ ಕುದಿಸಿ ಹಾಲು 1/3 ಭಾಗಕ್ಕೆ ಬರುವವರೆಗೆ ಕುದಿಸಿ.       ಕಾದ ಹಾಲಿಗೆ 100 ಮಿ. ಲೀ. ಗಟ್ಟಿ ಮೊಸರು ಹಾಕಿ ಕಲೆಸಿ. ಹಾಲು ಒಡೆಯುತ್ತದೆ. ಉರಿ ಕಡಿಮೆ ಮಾಡಿ. ಇನ್ನೊಂದು ಬಾಣಲೆಯಲ್ಲಿ 120 ಗ್ರಾಂ ನಷ್ಟು ಸಕ್ಕರೆ ಹಾಕಿ ನೀರು ಸೇರಿಸದೆ ಕಲೆಸುತ್ತಾ ಇರಿ. (ಸಿಹಿ ನಿಮ್ಮ ರುಚಿಗೆ …

Kannada Tindi Tinisu ಸಿಹಿ ತಿನಿಸುಗಳು

RAVE UNDE ರವೆ ಉಂಡೆ

ಹಬ್ಬಗಳಲ್ಲಿ ಮಾಡುವ ಸಿಹಿ ತಿಂಡಿ. ಮಾಡುವುದು ಸುಲಭ! ಮಾಡಿಟ್ಟರೆ 1 ವಾರವಾರವರೂ ಚೆನ್ನಾಗಿರುತ್ತದೆ. ಮಾಡುವ ವಿಧಾನ:- 1 ಪಾವು ಸಕ್ಕರೆಯಲ್ಲಿ 4 ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ. 1 ಗಿಟುಕು ಕೊಬ್ಬರಿ ತುರಿದಿಡಿ.       1 ಪಾವು ಚಿರೋಟಿ ರವೆ 4 ಚಮಚ ತುಪ್ಪ ಹಾಕಿ ಘಮ್ಮೆಂದು ವಾಸನೆ ಬರುವವರೆಗೆ ಹುರಿದಿಡಿ. ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ರವೆಗೆ ಹಾಕಿ ಚೆನ್ನಾಗಿ ಕಲೆಸೆ ರವೆ ಸ್ವಲ್ಪ …

Kannada Tindi Tinisu ಖಾರ ತಿನಿಸುಗಳು

MOSARU KODUBALE ಮೊಸರು ಕೋಡು ಬಳೆ

ಸಂಜೆ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ:- ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಕರಿಬೇವು, ಹಸಿ ಮೆಣಸಿನ ಕಾಯಿ, ಉಪ್ಪು, 1 1/2 ಲೋಟ ಸ್ವಲ್ಪ ಹುಳಿಯಾದ ಮೊಸರು ಹಾಕಿ ಕುದಿಯಲು ಇಡಿ. ಮೊಸರು ಕುದಿಯಲು ಪ್ರಾರಂಭವಾದಾಗ 1 ಲೋಟ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿ. ಒದ್ದೆ ಕೈಯಿಂದ ಮುಟ್ಚಿದರೆ ಕೈಗೆ ಹಿಟ್ಟು ಅಂಟದಿದ್ದರೆ ಹಿಟ್ಟು ಬೆಂದಿದೆ ಎಂದು …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BOMBAY HALWA ಬಾಂಬೆ ಹಲ್ವಾ

ಬಾಂಬೆ ಹಲ್ವದ ಬಣ್ಣ, ರುಚಿಗೆ ಮನ ಸೋಲದವರರಿಲ್ಲ! ಮಾಡುವ ವಿಧಾನ:- 1 ಲೋಟ ಕಾರ್ನ್ ಫ್ಲೋರ್ ಗೆ 3 ಲೋಟ ನೀರು ಹಾಕಿ ಗಂಟಿಲ್ಲದೆ ಕಲೆಸಿಡಿ. ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 1 1/2 ಅಥವಾ 1 3/4 ಲೋಟ ಸಕ್ಕರೆಯನ್ನು ದಪ್ಪ ತಳದ ಬಾಣಲೆಯಲ್ಲಿ 1 ಲೋಟ ನೀರು ಹಾಕಿ ಕರಗಲು ಇಡಿ. ಸಕ್ಕರೆ ಪೂರ ಕರಗಿದ ಮೇಲೆ ಸ್ವಲ್ಪ ನಿಂಬೆ ರಸ ಹಾಕಿ ಕಾರ್ನ್ ಫ್ಲೋರ್ ಮಿಶ್ರಣ ಮತ್ತೊಮ್ಮೆ ಕಲೆಸಿ ಸಕ್ಕರೆ ಪಾಕಕ್ಕೆ …

Kannada Tindi Tinisu ಸಿಹಿ ತಿನಿಸುಗಳು

MIX NUTS CHIKKI ಮಿಕ್ಸ್ ನಟ್ಸ್ ಚಿಕ್ಕಿ

ಎಲ್ಲರೂ ಇಷ್ಟ ಪಡುವ ಸಿಹಿ. ಮಾಡುವ ವಿಧಾನ:- 1 ಲೋಟ ಬೆಲ್ಲ ಸಣ್ಣಗೆ ತುರಿದಿಡಿ. 1 1/4 ಲೋಟದಷ್ಟು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ, ಹುರಿದು ಸಿಪ್ಪೆ ತೆಗೆದ ಕಡಲೇ ಬೀಜ, ಹುರಿಗಡಲೆ, ಕೊಬ್ಬರಿ ತುರಿ, ಹುರಿದ ಗಸಗಸೆ, ಬಿಳಿ ಎಳ್ಳು, ಚಿಟಿಕೆ ಏಲಕ್ಕಿ ಪುಡಿ ( ಎಲ್ಲಾ ಸೇರಿಸಿ ಅಳತೆ ಮಾಡಿ) ಸಿದ್ದ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ 1/2 ಲೋಟ ನೀರು, ಬೆಲ್ಲ ಹಾಕಿ ಕುದಿಯಲು ಇಡಿ. ಆಗಾಗ ಕಲೆಸುತ್ತಾ ಇರಿ. ಉರಿ ಕಡಿಮೆ …

Kannada Tindi Tinisu ಖಾರ ತಿನಿಸುಗಳು

POTATO CHIPS ಪೊಟೇಟೋ ಚಿಪ್ಸ್

ಯಾರಿಗೆ ಇಷ್ಟ ಇಲ್ಲ ಹೇಳಿ! ಹೊರಗಡೆಯಿಂದ ತಂದು ಯಾವಾಗಲೂ ತಿನ್ನುತ್ತೇವೆ. ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ!    ನಿಮಗೆ ಬೇಕಾದಷ್ಟು ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು Slicer ನಲ್ಲಿ ತೆಳ್ಳಗೆ Slice ಮಾಡಿಕೊಳ್ಳಿ. ತಣ್ಣನೆಯ ನೀರಿಗೆ 1 ಚಮಚ ಉಪ್ಪು ಹಾಕಿ ಆಲೂಗೆಡ್ಡೆ Slice ಗಳನ್ನು ಹಾಕಿ 15 ನಿಮಿಷ ಇಡಿ.    ನಂತರ ನೀರು ಪೂರ ಸೋರಿ ಹಾಕಿ, ಒಗೆದ ಟವೆಲ್/ ಕಿಚನ್ ಟವೆಲ್ ಮೇಲೆ ಹಾಕಿ ಪೂರ್ಣವಾಗಿ ಒಣಗಿಸಿ. ನೀರಿನಂಶ ಸ್ವಲ್ಪವೂ ಇರಬಾರದು! …

Kannada Tindi Tinisu ಚಾಟ್ಸ್

GOBI MANCHOORI ಗೋಬಿ ಮಂಚೂರಿ

ಎಲ್ಲರೂ ಇಷ್ಟ ಪಡುವ Starter! ಮಕ್ಕಳಿಗಂತೂ Favourite! ಮಾಡುವ ವಿಧಾನ:- 1 ಹೂ ಕೋಸನ್ನು ಒಂದೊಂದೇ ಚಿಕ್ಕ ಚಿಕ್ಕದಾಗಿ ಹೂವಿನಂತೆ ಬಿಡಿಸಿಟ್ಟು ಕೊಳ್ಳಿ. ಹೂ ಕೋಸಿನಲ್ಲಿ ಹುಳ ತುಂಬಾ ಇರುತ್ತದೆ. ಎಚ್ಚರಿಕೆಯಿಂದ ನೋಡಿ. 1 ಲೀಟರ್ ನೀರು ಬಿಸಿ ಮಾಡಿ, ಸ್ವಲ್ಪ ಉಪ್ಪು, ಅರಿಶಿಣ ಹಾಕಿ ಗೋಬಿ ಹೂಗಳನ್ನು ಅದರಲ್ಲಿ ಹಾಕಿ 20 ನಿಮಿಷ ಬಿಡಿ. ನಂತರ ನೀರು ಸೋರಿ ಹಾಕಿಡಿ.     2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ …