Showing 133 Result(s)
ಸಿಹಿ ತಿನಿಸುಗಳು

PEANUT KATLI ಪೀನಟ್ ಕಟ್ಲಿ

PEANUT KATLI ಪೀನಟ್ ಕಟ್ಲಿ ಬಡವರ ಬಾದಾಮಿ ಕಡಲೆ ಬೀಜದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:- ಒಂದು ಅಳತೆ ಕಡಲೆ ಬೀಜದ ಮೇಲಿನ ಸಿಪ್ಪೆ ಮಾತ್ರ ಹೋಗುವಷ್ಟು ಮಾತ್ರ ಹುರಿದು ಸಿಪ್ಪೆ ಬೇರೆ ಮಾಡಿಡಿ. Mixie jar ನಲ್ಲಿ ಹಾಕಿ Pulse mode ನಲ್ಲಿ ಪುಡಿ ಮಾಡಿಡಿ . ಒಟ್ಟಿಗೆ ಪುಡಿ ಮಾಡದೆ ಮಧ್ಯೆ ಮಧ್ಯೆ ಗ್ಯಾಪ್ ಕೊಟ್ಟು ಪುಡಿ ಮಾಡಿ. ಏಲಕ್ಕಿ ಎರಡು ಪುಡಿ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ ಮುಕ್ಕಾಲು ಅಳತೆ ಸಕ್ಕರೆಗೆ …

ಸಿಹಿ ತಿನಿಸುಗಳು

KAMARKUT / KALKONA ಕಮರ್ ಕಟ್ / ಕಲ್ಕೋನ

KAMARKUT / KALKONA ಕಮರ್ ಕಟ್ / ಕಲ್ಕೋನ ಬೆಲ್ಲ ಮತ್ತು ಕಾಯಿತುರಿಯ ಸವಿಯಾದ ರೆಸಿಪಿ. ಇದು ನಮ್ಮ ಅತ್ತೆಯ ತಾಯಿ ಅಂದರೆ ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ಸಿಹಿ ರೆಸಿಪಿ! ಮಾಡುವ ವಿಧಾನ :- ಒಂದು ಅಳತೆ ಬೆಲ್ಲ ಪುಡಿ ಮಾಡಿಡಿ. ಒಂದು ಅಳತೆ ಕಾಯಿ ತುರಿದಿಡಿ. ಎರಡು ಏಲಕ್ಕಿ ಬೇಕಾದರೆ ಪುಡಿ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಡಿಮೆ ಉರಿಯಲ್ಲಿ ಕಲೆಸುತ್ತಿರಿ. ಬೆಲ್ಲದ ಪಾಕ …

ಸಿಹಿ ತಿನಿಸುಗಳು

KOBBARI MITAYI ಕೊಬ್ಬರಿ ಮಿಠಾಯಿ

KOBBARI MITAYI ಕೊಬ್ಬರಿ ಮಿಠಾಯಿ ತೆಂಗಿನ ಕಾಯಿಯಿಂದ ಮಾಡಬಹುದಾ ರುಚಿಯಾದ ರೆಸಿಪಿ ಇಲ್ಲಿದೆ! ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ :- ತೆಂಗಿನ ಕಾಯಿಯ ಹಿಂದೆ ಇರುವ ಕಪ್ಪು ಭಾಗವನ್ನು Scraper ಅಥವಾ ಚಾಕುವಿನಿಂದ ತೆಗೆದು Mixie jar ನಲ್ಲಿ Pulse mode ನಲ್ಲಿ ಎರಡು ಅಳತೆ ಪುಡಿ ಮಾಡಿಡಿ. ಅಥವಾ ತೆಂಗಿನ ಕಾಯಿ ಹೋಳನ್ನು ಎಚ್ಚರಿಕೆಯಿಂದ ತಿರುಗಿಸುತ್ತಾ ಬಿಳಿ ಭಾಗ ಮಾತ್ರ ತುರಿಯಬಹುದು. ಆಯ್ಕೆ ನಿಮ್ಮದು! ದಪ್ಪ ತಳದ ಬಾಣಲೆಯಲ್ಲಿ ಎರಡು ಅಳತೆ ಕಾಯಿ ತುರಿ, …

ಸಿಹಿ ತಿನಿಸುಗಳು

GULGULE ಗುಲ್ ಗುಲೆ

GULGULE ಗುಲ್ ಗುಲೆ ಉತ್ತರ ಭಾರತದ ಒಂದು ಸುಲಭವಾಗಿ ಮಾಡಬಹುದಾದ ರುಚಿಯಾದ ಸಿಹಿ ತಿಂಡಿ. ಮಾಡುವ ವಿಧಾನ :- ಒಂದು ಅಳತೆ ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರಿನಲ್ಲಿ ನೆನೆಸಿ ಸೋಸಿಡಿ. ನಾಲ್ಕು ಚಮಚ ಕಾಯಿ/ ಒಣ ಕೊಬ್ಬರಿ ತುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಸ್ವಲ್ಪ ಬಾದಾಮಿ ಗೋಡಂಬಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಒಂದೂವರೆ ಅಳತೆ ಗೋಧಿ ಹಿಟ್ಟು, ಕರಗಿಸಿದ ಬೆಲ್ಲ, ಕಾಯಿ ತುರಿ, ಏಲಕ್ಕಿ ಪುಡಿ, ಗೋಡಂಬಿ ಬಾದಾಮಿ, ಒಂದು …

ಸಿಹಿ ತಿನಿಸುಗಳು

RAJ BHOG ರಾಜ್ ಭೋಗ್

RAJ BHOG ರಾಜ್ ಭೋಗ್ ಸಿಹಿ ತಿನ್ನುವ ಆಸೆ ಆದ ತಕ್ಷಣ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ಒಂದು ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಕುದಿಯಲು ಆರಂಭವಾದಾಗ 1/2 ಬಟ್ಟಲು ಗಟ್ಟಿಯಾದ ಮೊಸರು ಹಾಕಿ, ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ ಹಾಲು ಪೂರ್ತಿಯಾಗಿ ಒಡೆಯುವ ತನಕ ಕಲೆಸುತ್ತಿರಿ. ಹಾಲು ಸಂಪೂರ್ಣವಾಗಿ ಮೊಸರಿನ ಹಾಗೆ ಆದಾಗ ಒಂದು ಬಟ್ಟೆಯಿಂದ ಶೋಧಿಸಿ! ಗಟ್ಟಿಯಾದ ಪನ್ನೀರ್ ಭಾಗವನ್ನು ಗಂಟು ಕಟ್ಟಿ ಅರ್ಧ ಗಂಟೆ ನೇತು …

ಸಿಹಿ ತಿನಿಸುಗಳು

BOOST & COCONUT LADDU ಬೂಸ್ಟ್ & ಕೋಕೊನಟ್ ಲಡ್ಡು

BOOST & COCONUT LADDU ಬೂಸ್ಟ್ & ಕೋಕೊನಟ್ ಲಡ್ಡು ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಮಕ್ಕಳಿಗಾಗಿ ಕುಡಿಸಲು ಬೂಸ್ಟ್ ತರುತ್ತಾರೆ. ಕೆಲವೊಮ್ಮೆ ಆ ಬೂಸ್ಟ್ ಹಾಗೇ ಉಳಿದುಬಿಡುತ್ತದೆ. ಅದನ್ನು ಉಪಯೋಗಿಸಿ ಒಂದು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಅಳತೆ ಬೆಲ್ಲ ಪುಡಿ ಮಾಡಿಡಿ. 2 ಅಳತೆ ಕಾಯಿ ತುರಿದಿಡಿ. ಚಿಟಿಕೆ ಏಲಕ್ಕಿ ಪುಡಿ ಮಾಡಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ತರಿ ತರಿಯಾಗಿ ಪುಡಿ ಮಾಡಿಡಿ. (ಬೇಕಾದರೆ) ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ …

ಸಿಹಿ ತಿನಿಸುಗಳು

SHAVIGE HALVA ಶ್ಯಾವಿಗೆ ಹಲ್ವಾ

SHAVIGE HALVA ಶ್ಯಾವಿಗೆ ಹಲ್ವಾ ಎಲ್ಲರಿಗೂ ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ಶುಭಾಶಯಗಳು! ಈ ಸುದಿನದ ಸಂಭ್ರಮಕ್ಕಾಗಿ ಮಾಡಿದ ಸುಲಭವಾಗಿ ಮಾಡಬಹುದಾದ ಒಂದು ಸಿಹಿ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಸ್ವಲ್ಪ ಗೋಡಂಬಿ ಬಾದಾಮಿ ಪುಡಿ ಮಾಡಿಡಿ. ಎರಡು ಅಳತೆ ಶ್ಯಾವಿಗೆ ಎರಡು ಚಮಚ ತುಪ್ಪ ಹಾಕಿ ಕೆಂಪಗೆ ಗರಿ ಗರಿಯಾಗುವವರೆ ಹುರಿದು, ಒಂದು ಅಳತೆ ಕಂಡೆನ್ಸೆಂಡ್ ಮಿಲ್ಕ್ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ. ನಂತರ ಅರ್ಧ ಗೋಡಂಬಿ ಬಾದಾಮಿ …

ಸಿಹಿ ತಿನಿಸುಗಳು

SABUDANA MANGO KHEER ಸಾಬೂದಾನ ಮ್ಯಾಂಗೋ ಖೀರ್

SABUDANA MANGO KHEER ಸಾಬೂದಾನ ಮ್ಯಾಂಗೋ ಖೀರ್ ಈಗ ಮಾವಿನ ಹಣ್ಣಿನ ಸೀಸನ್. ಹಣ್ಣಿನ ರಾಜ ಮಾವನ್ನು ಹಾಕಿ ಪಾಯಸ ಮಾಡುವ ವಿಧಾನ ಇಲ್ಲಿದೆ :- ಒಂದು ಬಟ್ಟಲು ಸಾಬೂದಾನ ಎಂಟು ಗಂಟೆ ನೆನೆಸಿಡಿ. ಅರ್ಧ ಲೀಟರ್ ಗಟ್ಟಿ ಹಾಲು ಕುದಿಸಿಡಿ. ಸ್ವಲ್ಪ ಗೋಡಂಬಿ, ಬಾದಾಮಿ ತುಪ್ಪದಲ್ಲಿ ಹುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಕೇಸರಿದಳ ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆಸಿಡಿ. ಎರಡು ಮಾವಿನ ಹಣ್ಣು ಸಿಪ್ಪೆ ತೆಗೆದು ಸ್ವಲ್ಪ ರುಬ್ಬಿಡಿ. ನೆನೆಸಿದ ಸಾಬೂದಾನ ದಪ್ಪ ತಳದ …

ಸಿಹಿ ತಿನಿಸುಗಳು

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ

DRY FRUITS & BELLADA SHANKARA POLI ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಶಂಕರ ಪೋಳಿ ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೊತೆಗೆ ಬೆಲ್ಲ ಕೂಡಾ! ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ: 1/2 ಬಟ್ಟಲು ಮೈದಾ, 1/2 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, …

ಸಿಹಿ ತಿನಿಸುಗಳು

BESAN HOLIGE ಬೇಸನ್ ಹೋಳಿಗೆ

BESAN HOLIGE ಬೇಸನ್ ಹೋಳಿಗೆ ಹೋಳಿಗೆ ಒಂದು ಜನಪ್ರಿಯ ಸಾಂಪ್ರಾದಾಯಕ ಸಿಹಿ. ಈ ಜನಪ್ರಿಯ ಸಿಹಿಯನ್ನು ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ. ಈ ಹೋಳಿಗೆ ಮಾಡಲು ಬೇಳೆ ಬೇಯಿಸುವ, ರುಬ್ಬುವ ಕೆಲಸ ಇಲ್ಲ. ಸುಲಭವಾಗಿ, ಬೇಗನೆ ಮಾಡಬಹುದು. ಮಾಡುವ ವಿಧಾನ :- ಕಣಕ ಮಾಡಲು:- ಅರ್ಧ ಅಳತೆ ಮೈದಾ, ಅರ್ಧ ಅಳತೆ ಚಿರೋಟಿ ರವೆ, ಚಿಟಿಕೆ ಉಪ್ಪು, ಚಿಟಿಕೆ ಅರಿಷಿಣ, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಮೃದುವಾದ ಹಿಟ್ಟು ಕಲೆಸಿಡಿ. …