GARLIC BREAD ಗಾರ್ಲಿಕ್ ಬ್ರೆಡ್
ಬೆಳ್ಳುಳ್ಳಿ ಮತ್ತು ಬೆಣ್ಣೆಯ ಅದ್ಭುತವಾದ ಕಾಂಬಿನೇಷಶ್ ಈ ರೆಸಿಪಿ. ಮಾಡುವುದು ಸುಲಭ, ರುಚಿಕರ! ಬೆಳಿಗ್ಗೆ ತಿಂಡಿ, ಅಥವಾ ಸಂಜೆ ಕಾಫಿ ಅಥವಾ ಟೀ ಜೊತೆಗೆ ಮಾಡಿ ನೋಡಿ. ಖಂಡಿತ ಮನೆ ಮಂದಿಯೆಲ್ಲಾ ಬಾಯಿ ಚಪ್ಪರಿಸಿ ತಿನ್ನುತ್ತಾರೆ.
ಮಾಡುವ ವಿಧಾನ:-
ಎರಡು ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಎರಡು ಹಸಿ ಮೆಣಸಿನ ಕಾಯಿ ಜೊತೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು ದೊಡ್ಡ ಚಮಚ ಬೆಣ್ಣೆ ಹಾಕಿ ನೀರು ಸೇರಿಸದೆ ಚಟ್ನಿಯ ಹದಕ್ಕೆ ರುಬ್ಬಿಡಿ.



ಒಂದು ತಟ್ಟೆಯಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಜೋಡಿಸಿ ಒಂದು ಬದಿಗೆ ಮಾತ್ರ ಗಾರ್ಲಿಕ್ ಪೇಸ್ಟ್ ಸವರಿ, ಪೇಸ್ಟ್ ಸವರಿ ದ ಭಾಗ ಮೇಲೆ ಬರುವಂತೆ ಬಿಸಿ ಕಾವಲಿಯ ಮೇಲೆ ಬೆಣ್ಣೆ/ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಗಾರ್ಲಿಕ್ ಬ್ರೆಡ್ ಸವಿಯಲು ಸಿದ್ಧ!
ನಾನು ಉಪಯೋಗಿಸಿದ್ದು ಸಾಲ್ಟ್ ಬ್ರೆಡ್. ನೀವು ಬೇಕಾದರೆ ವೀಟ್ ಬ್ರೆಡ್, ಮಲ್ಟಿ ಗ್ರೇನ್ ಬ್ರೆಡ್ ಉಪಯೋಗಿಸಬಹುದು. ಪೇಸ್ಟ್ ಸವರಿದದ ಭಾಗ ಹೆಚ್ಚು ಬೇಯಿಸಬೇಡಿ. ಹಾಗೆ ಮಾಡಿದರೆ ಕಹಿ ಆಗುವ ಸಾಧ್ಯತೆಯಿದೆ. ಪೇಸ್ಟ್ ರುಚಿಯಲ್ಲಿ ಸ್ಟಾಂಗ್ ಆಗಿರುವುದರಿಂದ ಮಕ್ಕಳಿಗೆ ಮಾಡುವಾಗ ನೋಡಿ ಕೊಂಡು ಹಾಕಿ.

ಧನ್ಯವಾದಗಳು 🙏🙏🙏
