RAW MANGO JUICE ರಾ ಮ್ಯಾಂಗೋ ಜ್ಯೂಸ್
ಮಾವಿನ ಕಾಯಿ ಸೀಸನ್ ನಲ್ಲಿ ಮಾಡಬಹುದಾದ ರುಚಿಯಾದ ಜ್ಯೂಸ್ ವಿಧಾನ ಇಲ್ಲಿದೆ.
ಮಾಡುವ ವಿಧಾನ :-
ಸ್ವಲ್ಪ ಮಾಗಿದ ತೋತಾಪುರಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿಡಿ.


ಅರ್ಧ ಚಮಚ ಕರಿ ಮೆಣಸು ಪುಡಿ ಮಾಡಿಡಿ.
ನಾಲ್ಕು ಏಲಕ್ಕಿ ಪುಡಿ ಮಾಡಿಡಿ.

ಬಟ್ಟಲಿನಲ್ಲಿ ಮಾವಿನ ಕಾಯಿಯ ರಸ, ಮೆಣಸಿನ ಪುಡಿ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಅಥವಾ ಜೇನುತುಪ್ಪ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಮೇಲೆ ಸವಿಯಿರಿ.
ಸರ್ವ್ ಮಾಡುವಾಗ ಒಂದೆರಡು ಪುದೀನ ಎಲೆ, ಐಸ್ ಕ್ಯೂಬ್ಸ್ ಹಾಕಿ ಕೊಟ್ಟರೆ ಬಾಯಲ್ಲಿ ನೀರೂರಿಸುವ ರಾ ಮ್ಯಾಂಗೋ ಜ್ಯೂಸ್ ಸವಿಯಲು ಸಿದ್ಧ!
ಮೆಣಸಿನ ಪುಡಿ ಹಾಗೂ ಉಪ್ಪು ಹಾಕುವುದರಿಂದ ಕೆಮ್ಮು ಬರುವುದಿಲ್ಲ ಹಾಗೂ ರುಚಿ ಹೆಚ್ಚಾಗುತ್ತದೆ. ಸ್ವಲ್ಪ ಮಾಗಿದ ತೋತಾಪುರಿ ಬಳಸಿದರೆ ಹುಳಿ ಹೆಚ್ಚು ಇರುವುದಿಲ್ಲ.

