GONGURA( PUNDI) CHITHRANNA ಗೊಂಗೂರ (ಪುಂಡಿ) ಚಿತ್ರಾನ್ನ
ಅನ್ನ ಉದುರುದುರಾಗಿ ಮಾಡಿ ತಟ್ಟೆಯಲ್ಲಿ ಹರಡಿಡಿ.
ಚಿತ್ರಾನ್ನ ಪ್ರಿಯರೆ ನಿಮ್ಮ ಫೇವರೈಟ್ ತಿಂಡಿ ಪಟ್ಟಿಗೆ ಹೊಸ ಸೇರ್ಪಡೆ ಈ ಗೊಂಗೂರ ಸೊಪ್ಪಿನ ಚಿತ್ರಾನ್ನ. ಮಾಡುವುದು ಸುಲಭ! ತಿನ್ನಲು ರುಚಿಕರ!
ಮಾಡುವ ವಿಧಾನ :-
ಎರಡು ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
4 ಚಮಚ ಕಾಯಿ ತುರಿದಿಡಿ.
ಗೊಂಗೂರ ಸೊಪ್ಪು ನಿಮಗೆ ಹುಳಿ ಬೇಕಾಗುವಷ್ಟು ಬಿಡಿಸಿ ತೊಳೆದು ನೀರು ಸೋರಿ ಹಾಕಿಡಿ. ನಾನು ನಾಲ್ಕು ಜನರಿಗೆ ಒಂದು ಚಿಕ್ಕ ಕಟ್ಟು ಕೇವಲ ಎಲೆ ಮಾತ್ರ ಬಿಡಿಸಿ ಹಾಕಿದ್ದೇನೆ. ನೀವು ನಿಮ್ಮ ರುಚಿಗೆ ತಕ್ಕಷ್ಟು ಹಾಕಿ ಕೊಳ್ಳಿ. ಈ ಎಲೆ ಹುಳಿ ಜಾಸ್ತಿ. ನೋಡಿಕೊಂಡು ಹಾಕಿ.
ತೊಳೆದ ಸೊಪ್ಪಿನ ಜೊತೆಗೆ ಆರು ಹಸಿರು ಮೆಣಸಿನಕಾಯಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಬಾಡಿಸಿ ರುಬ್ಬಿಡಿ. ಖಾರಾ ಹೆಚ್ಚು ಬೇಕಾಗುತ್ತದೆ.


ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಸ್ವಲ್ಪ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಅರಿಷಿಣ , ಕರಿಬೇವು ಹಾಕಿ ಹುರಿದು ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ ಅನ್ನ, ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕಡಲೇ ಬೀಜ ಹಾಕಿ ಚೆನ್ನಾಗಿ ಕಲೆಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಗೊಂಗೂರ ಚಿತ್ರಾನ್ನ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏
