VEGETABLE PALAV ವೆಜಿಟೇಬಲ್ ಪಲಾವ್
ತರಕಾರಿಗಳಿಂದ ಮಾಡಬಹುದಾದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ
ಮಾಡುವ ವಿಧಾನ :-
1 ಅಳತೆ ಬಾಸುಮತಿ ಅಕ್ಕಿ ತೊಳೆದು ಅರ್ಧ ಗಂಟೆ ನೆನೆಸಿ ಸೋರಿ ಹಾಕಿಡಿ.
ನಿಮಗೆ ಇಷ್ಟವಾದ ಯಾವುದಾದರೂ ತರಕಾರಿ ತೊಳೆದು ಸಣ್ಣಗೆಹೆಚ್ಚಿಡಿ.

ಒಂದು ಹಿಡಿ ಕೊತ್ತಂಬರಿಸೊಪ್ಪು ಪುದೀನಾ ಸಣ್ಣಗೆ ಹೆಚ್ಚಿಡಿ.
ಒಂದು ಚಿಕ್ಕ ಬೆಳ್ಳುಳ್ಳಿ, 1 ಇಂಚು ಶುಂಠಿ, ನಾಲ್ಕು ಹಸಿ ಮೆಣಸಿನಕಾಯಿ, 1 ಚಿಕ್ಕ ಚಮಚ ಸೋಂಪು ಇಷ್ಟನ್ನು ನೀರು ಹಾಕದೆ ಚಟ್ನಿಯ ಹಾಗೆ ರುಬ್ಬಿಡಿ.

ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿದು ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ. ನಂತರ ತರಕಾರಿಗಳನ್ನು ಹಾಕಿ ಸ್ವಲ್ಪ ಬಾಡಿಸಿ.

ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು ಬಾಸುಮತಿ ಅಕ್ಕಿ, ಉಪ್ಪು, ಹೆಚ್ಚಿದ ಕೊತ್ತಂಬರಿ, ಪುದೀನಾ ಹಾಕಿ ಕಲೆಸಿ 1 3/4 ಅಥವಾ 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಅಕ್ಕಿ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿದರೆ ರುಚಿಯಾದ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಪಲಾವ್ ಸವಿಯಲು ಸಿದ್ಧ.

ಧನ್ಯವಾದಗಳು 🙏🙏🙏
