ಉಪಹಾರ

ANNADA ROTTI ಅನ್ನದ ರೊಟ್ಟಿ

ಬೆಳಿಗ್ಗೆ ಮಾಡಿದ ಅನ್ನ ತುಂಬಾ ಮಿಕ್ಕಿದ್ದರೆ, ಚಿತ್ರಾನ್ನ ತಿನ್ನಲು ಬೇಸರವಾದರೆ, ರಾತ್ರಿ ಊಟಕ್ಕೆ ಹೀಗೆ ಮಾಡಿ ನೋಡಿ! ಮಿಕ್ಕ ಅನ್ನದಿಂದ ಬೇಕಾದರೂ ಮಾಡಬಹುದು ಅಥವಾ ಕೆಲವೊಮ್ಮೆ ಮಾಡಿದ ಅನ್ನ ಸ್ವಲ್ಪ ಮೆತ್ತಗೆ ಆದಾಗಲೂ ಮಾಡಬಹುದು! ಮಾಡುವ ವಿಧಾನ :- ಅನ್ನವನ್ನು ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ Smash ಮಾಡಿಡಿ. 2 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು, ಮೆಂತ್ಯ ಸೊಪ್ಪು ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಚಮಚ ಹಸಿ ಮೆಣಸಿನಕಾಯಿ ಪೇಸ್ಟ್ ಮಾಡಿಡಿ. …

ಸಿಹಿ ತಿನಿಸುಗಳು

BREAD CRUMBS ಬ್ರೆಡ್ ಕ್ರಂಬ್ಸ್

ನಾವು ಸಾಧಾರಣವಾಗಿ ಕಟ್ಲೆಟ್, ರೋಲ್ಸ್, ಕಬಾಬ್ ಮಾಡುವಾಗ ಗರಿ ಗರಿಯಾಗಿ ಬರಲೆಂದು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕರಿಯುತ್ತೇವೆ. ದೊಡ್ಡ ದೊಡ್ಡ ನಗರಗಳಲ್ಲಿ ರೆಡಿ ಮೇಡ್ ಬ್ರೆಡ್ ಕ್ರಂಬ್ಸ್ ಸಿಗುತ್ತದೆ! ಚಿಕ್ಕ ಚಿಕ್ಕ ಊರುಗಳಲ್ಲಿ ಸಿಗುವುದಿಲ್ಲ! ಅದಕ್ಕಾಗಿ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವಿಧಾನ ಇಲ್ಲಿದೆ ನೋಡಿ! Sandwich ಮಾಡುವಾಗ ಬ್ರೆಡ್ ನ ಅಂಚುಗಳನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯುವ ಬದಲು ಹೀಗೆ ಮಾಡಿ ನೋಡಿ! ( ಸಾಲ್ಟ್ ಬ್ರೆಡ್ ಉಪಯೋಗಿಸಿದರೆ ಒಳ್ಳೆಯದು! ) ಮಾಡುವ ವಿಧಾನ :- …

ಉಪಹಾರ

RAVE ROTTI & ELLINA CHUTNEY ರವೆ ರೊಟ್ಟಿ ಮತ್ತು ಎಳ್ಳಿನ ಚಟ್ನಿ

ಬೆಳಿಗ್ಗೆ ತಿಂಡಿಗೆ ಸುಲಭವಾಗಿ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆ ಬಟ್ಟಲಿನಲ್ಲಿ ಹಾಕಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ 2 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ 1 ಚಮಚ, 4 ಚಮಚ ಕಾಯಿ ತುರಿ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಬಿಸಿ ನೀರು ಹಾಕಿ ರೊಟ್ಟಿ ಹಿಟ್ಟು ಕಲೆಸಿ 10 ನಿಮಿಷದ ನಂತರ ತೆಳ್ಳಗೆ ರೊಟ್ಟಿ ತಟ್ಟಿ ಕಾವಲಿಯ ಮೇಲೆ ಹಾಕಿ ಸ್ವಲ್ಪ ಎಣ್ಣೆ …

Oota ಸಾಂಬಾರು ಮತ್ತು ಪಲ್ಯಗಳು

AVIAL ಅವಿಯಲ್

ಕೇರಳದ ವಿಶೇಷವಾದ ಆಹಾರ! ಎಲ್ಲಾ ತರಕಾರಿಗಳನ್ನು ಸೇರಿಸಿ ಮಾಡುವ ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಟೀ ಚಮಚ ಅಕ್ಕಿ 1 ಗಂಟೆ ನೆನೆಸಿಡಿ. 1/2 ಹೋಳು ತೆಂಗಿನ ಕಾಯಿ ತುರಿದಿಡಿ. ನೆಂದ ಅಕ್ಕಿ, 1 ಟೀ ಚಮಚ ಜೀರಿಗೆ, ಕಾಯಿ ತುರಿ, 4 ರಿಂದ 6 ಹಸಿ ಮೆಣಸಿನಕಾಯಿ ನುಣ್ಣಗೆ ರುಬ್ಬಿಡಿ. ಬೀನ್ಸ್, ಆಲೂಗೆಡ್ಡೆ, ಕ್ಯಾರೆಟ್, ಕುಂಬಳ ಕಾಯಿ, ನುಗ್ಗೆ ಕಾಯಿ, ಸೀಮೆ ಬದನೆ ಕಾಯಿ, ತೊಂಡೆ ಕಾಯಿ ಹೀಗೆ ನಿಮಗೆ ಇಷ್ಟವಾದ …

Tindi Tinisu ಖಾರ ತಿನಿಸುಗಳು

MYSORE BONDA ಮೈಸೂರು ಬೋಂಡಾ

ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಪಡೆದಿದೆ! ಇನ್ನೇನು ಮಳೆಗಾಲ ಶುರುವಾಗಿದೆ! ಮಳೆ ಬರುವಾಗ ಬಿಸಿ ಬಿಸಿ ಬೋಂಡಾ, ಚಟ್ನಿಯೊಂದಿಗೆ ಕಾಫಿ ಕುಡಿದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಈಗ ಬೋಂಡಾ ರೆಸಿಪಿ ನೋಡೋಣವೇ? ಮಾಡುವ ವಿಧಾನ :- 1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ಜೊತೆಗೆ 1 ಚಮಚ ಕಡಲೇ ಬೇಳೆ ಅಥವಾ ತೊಗರಿ ಬೇಳೆ ತೊಳೆದು ಹಾಕಿ. ನಂತರ ಆದಷ್ಟೂ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ. ರುಬ್ಬಿದ …

ಸಿಹಿ ತಿನಿಸುಗಳು

GENASINA HALWA ಗೆಣಸಿಸ ಹಲ್ವಾ

ಸಿಹಿ ಗೆಣಸಿನಿಂದ ಸುಲಭವಾಗಿ ಮಾಡಬಹುದಾದ, ರುಚಿಯಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1/2 ಕೇಜಿ ಗೆಣಸು ತೊಳೆದು ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ ಪುಡಿ ಮಾಡಿಡಿ. 4 ಏಲಕ್ಕಿ ಪುಡಿ ಮಾಡಿಡಿ. 1 ಚಮಚ ಗಸಗಸೆ ಹುರಿದಿಡಿ. 1/4 ಕೇಜಿ ಬೆಲ್ಲ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ ಸ್ವಲ್ಪ ಹಾಲು/ನೀರು ಹಾಕಿ ಬೆಲ್ಲ ಪೂರ್ತಿಯಾಗಿ ಕರಗಿದ ಮೇಲೆ ಗೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ. 2 ಚಮಚ ತುಪ್ಪ ಹಾಕಿ ಕಲೆಸಿ ಕಡಿಮೆ …

Oota

HANDI BIRIYANI ಹಂಡಿ ಬಿರಿಯಾನಿ

ಉತ್ತರ ಭಾರತದ ಜನಪ್ರಿಯ ಆಹಾರ ಹಂಡಿ ಬಿರಿಯಾನಿ ಮಾಡುವ ವಿಧಾನ:- ನಿಮಗೆ ಇಷ್ಟವಾದ ತರಕಾರಿ ತೊಳೆದು ಹೆಚ್ಚಿ ಸ್ವಲ್ಪ ಬೇಯಿಸಿಡಿ. ( Half boil ) 1 ಚಿಕ್ಕ ಈರುಳ್ಳಿ, 1 ಟೋಮೇಟೋ, 1 ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ.   1 ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣಗೆ, ಉದ್ದಕ್ಕೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದಿಡಿ. 12 ಗೋಡಂಬಿ ಕೆಂಪಗೆ ಹುರಿದಿಡಿ (ಬೇಕಾದರೆ) 2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ನೆನೆಸಿಡಿ. 4 …

ಸಿಹಿ ತಿನಿಸುಗಳು

MAAVINA SAJJIGE ಮಾವಿನ ಸಜ್ಜಿಗೆ

ಸತ್ಯ ನಾರಾಯಣನ ಪೂಜೆಗೆ ಇರಲೇ ಬೇಕಾದ ಪ್ರಸಾದ ಸಜ್ಜಿಗೆ! ರುಚಿಯಾದ ಸಜ್ಜಿಗೆಯನ್ನು ಮತ್ತಷ್ಟು ರುಚಿಕರ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಲೋಟ ಚಿರೋಟಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. 2 ಮಾವಿನ ಹಣ್ಣಿನ ರಸ ತೆಗೆದಿಡಿ. ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ. ಬಾಣಲೆಯಲ್ಲಿ 2 ಲೋಟ ಹಾಲು ಹಾಕಿ ಬಿಸಿಯಾಗಲು ಇಡಿ. ಸ್ವಲ್ಪ ಕೇಸರಿ ದಳಗಳನ್ನು ಹಾಕಿ, 1 ಅಥವಾ 3/4 ಸಕ್ಕರೆ ಹಾಕಿ …

ಉಪಹಾರ

SET DOSA ಸೆಟ್ ದೋಸಾ

ಹೋಟೆಲ್ ಗಳಲ್ಲಿ ಜನ ಇಷ್ಟ ಪಟ್ಟು ತಿನ್ನುವ ತಿಂಡಿ! ಮಾಡುವ ವಿಧಾನ ಇಲ್ಲಿದೆ ನೋಡಿ! ಮಾಡುವ ವಿಧಾನ:- ದೋಸೆ ಅಕ್ಕಿ – 2 ಲೋಟ ಉದ್ದಿನ ಬೇಳೆ – 1/2 ಲೋಟ ಗಟ್ಟಿ ಅವಲಕ್ಕಿ – 1/2 ಲೋಟ ಮೆಂತ್ಯ – 1 ಟೀ ಚಮಚ ಇಷ್ಟು ಸಾಮಗ್ರಿಗಳನ್ನು ಒಟ್ಟಿಗೆ 4 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಮಾತ್ರ ಬೇರೆ 1 ಗಂಟೆ ನೆನೆಸಿದರೆ ಸಾಕು. ನಂತರ ನುಣ್ಣಗೆ ರುಬ್ಬಿ, ಉಪ್ಪು ಹಾಕಿ ಕಲೆಸಿ, ರಾತ್ರಿ ಪೂರ ಉದುಗು …

ಸಿಹಿ ತಿನಿಸುಗಳು

MANGO PHIRNI ಮ್ಯಾಂಗೋ ಫಿರ್ನಿ (DIET FRIENDLY)

ಫಿರ್ನಿ ಉತ್ತರ ಭಾರತದ ಜನಪ್ರಿಯ ಸಿಹಿ! ಈ ಜನಪ್ರಿಯ ಸಿಹಿಗೆ ಹಣ್ಣಿನ ರಾಜ ಮಾವಿನ ಹಣ್ಣು ಸೇರಿಸಿದರೆ ಹೇಗಿರುತ್ತದೆ ಎಂದು ತಿಳಿಯಬೇಕಾದರೆ ಈ ರೆಸಿಪಿ ಮಾಡಿ ನೋಡಿ! ಮಾಡುವ ವಿಧಾನ :- 1 ಟೇಬಲ್ ಚಮಚ ಬಾಸುಮತಿ ಅಕ್ಕಿ ತೊಳೆದು 2 ಗಂಟೆ ನೆನೆಸಿ, ನಂತರ ತರಿ ತರಿಯಾಗಿ ರುಬ್ಬಿಡಿ. 4 ಮಾವಿನ ಹಣ್ಣಿನ ರಸ ತೆಗೆದಿಡಿ. ಸ್ವಲ್ಪ ಬಾದಾಮಿ, ಗೋಡಂಬಿ ಸಣ್ಣಗೆ ಹೆಚ್ಚಿಡಿ. 4 ಏಲಕ್ಕಿ ಪುಡಿ ಮಾಡಿಡಿ. 1 ಲೀಟರ್ ಗಟ್ಟಿಯಾದ ಹಾಲು, ದಪ್ಪ …