Showing 158 Result(s)
Tindi Tinisu ಖಾರ ತಿನಿಸುಗಳು

MYSORE BONDA ಮೈಸೂರು ಬೋಂಡಾ

ಹೆಸರು ಕೇಳಿದೊಡನೆ ಬಾಯಲ್ಲಿ ನೀರು ಬರುವಷ್ಟು ಪ್ರಸಿದ್ಧಿ ಪಡೆದಿದೆ! ಇನ್ನೇನು ಮಳೆಗಾಲ ಶುರುವಾಗಿದೆ! ಮಳೆ ಬರುವಾಗ ಬಿಸಿ ಬಿಸಿ ಬೋಂಡಾ, ಚಟ್ನಿಯೊಂದಿಗೆ ಕಾಫಿ ಕುಡಿದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಈಗ ಬೋಂಡಾ ರೆಸಿಪಿ ನೋಡೋಣವೇ? ಮಾಡುವ ವಿಧಾನ :- 1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ಜೊತೆಗೆ 1 ಚಮಚ ಕಡಲೇ ಬೇಳೆ ಅಥವಾ ತೊಗರಿ ಬೇಳೆ ತೊಳೆದು ಹಾಕಿ. ನಂತರ ಆದಷ್ಟೂ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ. ರುಬ್ಬಿದ …

Tindi Tinisu ಚಾಟ್ಸ್

PANEER KABAB ಪನ್ನೀರ್ ಕಬಾಬ್

ಸಂಜೆ ಕಾಫಿ ಜೊತೆಗೆ ಬಿಸಿ ಬಿಸಿಯಾಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ! ಮಾಡುವ ವಿಧಾನ:- 200 ಗ್ರಾಂ ಪನ್ನೀರ್ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ. ಅಕ್ಕಿ ಹಿಟ್ಟು – 1 ಟೇಬಲ್ ಚಮಚ ಕಾರ್ನ್ ಫ್ಲೋರ್ – 1 ಟೇಬಲ್ ಚಮಚ ಖಾರದ ಪುಡಿ – 2 ಟೀ ಚಮಚ ಗರಂ ಮಸಾಲ ಪುಡಿ – 1 ಟೀ ಚಮಚ ಚಾಟ್ ಮಸಾಲ – 1 ಟೀ ಚಮಚ ಅರಿಷಿಣ – 1/2 ಟೀ ಚಮಚ ಉಪ್ಪು – ರುಚಿಗೆ …

Tindi Tinisu ಉಪಹಾರ

PANEER FRANKIE ಪನ್ನೀರ್ ಫ್ರಾಂಕಿ

ಮಕ್ಕಳಿಗೆ ತುಂಬಾ ಇಷ್ಟವಾಗುವ ರೀತಿಯಲ್ಲಿ ಮಾಡಬಹುದಾದ ರೆಸಿಪಿ! ರುಚಿಕರ, ಆರೋಗ್ಯಕರವಾದದ್ದು! ಮಾಡುವುದು ಸುಲಭ ಕೂಡ! ಮಾಡುವ ವಿಧಾನ :- ಚಪಾತಿ ಮಾಡಲು:- 1/2 ಬಟ್ಟಲು ಮೈದಾ, 1/2 ಬಟ್ಟಲು ಗೋಧಿ ಹಿಟ್ಟು, 1 ಚಮಚ ಎಣ್ಣೆ, ಉಪ್ಪು, 1 ಬೇಯಿಸಿ ಸಿಪ್ಪೆ ತೆಗೆದು ತುರಿದ ಆಲೂಗೆಡ್ಡೆ ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಅಥವಾ ಹಾಲು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ 10 ನಿಮಿಷ ಮುಚ್ಚಿಡಿ.   ಮಸಾಲೆಗೆ:- 2 ಕಟ್ಟು ಪಾಲಾಕ್ …

Tindi Tinisu ಚಾಟ್ಸ್

RAVA DOKLA ರವಾ ಡೋಕ್ಲಾ

ಡೋಕ್ಲಾ ಸಾಮಾನ್ಯವಾಗಿ ಎಲ್ಲರೂ ಕಡಲೇ ಹಿಟ್ಟಿನಲ್ಲಿ ಮಾಡುವುದು! ಚಿರೋಟಿ ರವೆಯಲ್ಲಿ ಮಾಡಿ ನೋಡಿ! ತುಂಬಾ ಚೆನ್ನಾಗಿರುತ್ತದೆ! ಬೆಳಗ್ಗೆಯ ತಿಂಡಿ ಅಥವಾ ಸಂಜೆಯ ತಿಂಡಿ ಯಾವಾಗ ಬೇಕಾದರೂ ಸುಲಭವಾಗಿ ಮಾಡಬಹುದು! ಮಾಡುವ ವಿಧಾನ :- 1 ಬಟ್ಟಲು ಚಿರೋಟಿ ರವೆಗೆ 1 ಬಟ್ಟಲು ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿಡಿ. ರವೆ ಹುರಿಯದೆ ಹಸಿಯಾಗೆ ಸೇರಿಸಿ. 10 ನಿಮಿಷದ ನಂತರ 1/2 ಬಟ್ಟಲು ನೀರು ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಣ ಇಡ್ಲಿ ಹಿಟ್ಟಿನ ಹದದಲ್ಲಿರಬೇಕು.   ಹೆಚ್ಚಿದ …

Kannada Tindi Tinisu ಚಾಟ್ಸ್

ALU TAVA FRY ಆಲೂ ತವಾ ಫ್ರೈ

ಸಂಜೆ ವೇಳೆಗೆ ಅಥವಾ ಅನ್ನ ಸಾರಿನೊಂದಿಗೆ Side dish ಆಗಿ ತಿನ್ನಬಹುದು! ಮಾಡುವುದು ಸುಲಭ! ಮಾಡುವ ವಿಧಾನ:- ದಪ್ಪ ದಪ್ಪ ಆಲೂಗೆಡ್ಡೆ ಒಂದು ವಿಷಲ್ ಕೂಗಿಸಿ ಸಿಪ್ಪೆ ತೆಗೆದು ತೆಳ್ಳಗೆ ಸ್ಲೈಸ್ ಮಾಡಿಡಿ. 1 ಈರುಳ್ಳಿ, 1 ಟೋಮೇಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.    1/2 ಕ್ಯಾರೆಟ್ ತುರಿದಿಡಿ. ತಟ್ಟೆಯಲ್ಲಿ 2 ಚಮಚ ಚಿರೋಟಿ ರವೆ, 1 ಚಮಚ ಹುರಿಗಡಲೆ ಪುಡಿ, 1/2 ಚಮಚ ಖಾರದ ಪುಡಿ, ಚಿಟಿಕೆ ಅರಿಷಿಣ, ಉಪ್ಪು, 1/2 ಚಮಚ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

HURIGADALE UNDE ಹುರಿಗಡಲೆ ಉಂಡೆ

ಬೆಲ್ಲದಿಂದ ಸುಲಭವಾಗಿ, ರುಚಿಯಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಲೋಟ ಬೆಲ್ಲ ಸಣ್ಣಗೆ ಹೆಚ್ಚಿಡಿ. 2 ಲೋಟ ಹುರಿಗಡಲೆ ( ಪುಟಾಣಿ ) ನುಣ್ಣಗೆ ಪುಡಿ ಮಾಡಿಡಿ.      1 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ. 1/2 ಲೋಟ ಒಣ ಕೊಬ್ಬರಿ ತುರಿದಿಡಿ. 1/2 ಲೋಟ ಬಿಳಿ ಎಳ್ಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ. 4 ಏಲಕ್ಕಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಬೆಲ್ಲದ ಪುಡಿಗೆ 1/2 ಲೋಟ ನೀರು ಹಾಕಿ …

Kannada Tindi Tinisu ಚಾಟ್ಸ್

CORN FLAKES CHAT ಕಾರ್ನ್ ಫ್ಲೇಕ್ಸ್ ಚಾಟ್

ಸಂಜೆ ಕಾಫಿ, ಟೀ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ! ಮಾಡುವ ವಿಧಾನ:- ಕಾರ್ನ್ ಫ್ಲೇಕ್ಸ್ ಅನ್ನು ಬಿಸಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು, ಬಿಸಿ ಇದ್ದಾಗಲೇ ಖಾರದ ಪುಡಿ, ಉಪ್ಪು, ಇಂಗಿನ ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ. 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ. 1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, 1/2 ನಿಂಬೆ ರಸ, ಉಪ್ಪು ಸೇರಿಸಿ …

Kannada Tindi Tinisu ಚಾಟ್ಸ್

VADA PAV ವಡಾ ಪಾವ್

ಮುಂಬಯಿಯ ಇನ್ನೊಂದು ಜನಪ್ರಿಯ Street food! ರುಚಿಕರ, ಮಾಡುವುದು ಸುಲಭ ಕೂಡ! ಮಾಡುವ ವಿಧಾನ:- 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ 1 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಪುಡಿ ಮಾಡಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ ಚಪ್ಪಟೆಯಾಗಿ ವಡಾ ತಟ್ಟಿಡಿ.   ಬೋಂಡಾ ಹಿಟ್ಟು …

Kannada Tindi Tinisu ಚಾಟ್ಸ್

DAHI BATATA PURI ದಹಿ ಬಟಾಟ ಪುರಿ

ಎಲ್ಲರ ಮೆಚ್ಚಿನ ಚಾಟ್! ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಪುರಿ ಮಾಡಲು:- 1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.    10 ನಿಮಿಷದ ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ದೊಡ್ಡ ದೊಡ್ಡ ಚಪಾತಿಯಂತೆ ತೆಳ್ಳಗೆ ಲಟ್ಟಿಸಿ, ಯಾವುದಾದರೂ ಚಿಕ್ಕ ಡಬ್ಬದ ಮುಚ್ಚಳದಿಂದ ಕಟ್ ಮಾಡಿ ಪುಟ್ಟ ಪುಟ್ಟ …

Kannada Tindi Tinisu ಖಾರ ತಿನಿಸುಗಳು

SABBAKKI SANDIGE ಸಬ್ಬಕ್ಕಿ ಸಂಡಿಗೆ

ಬೇಸಿಗೆ ಕಾಲ ಬಂದೊಡನೆ ಗೃಹಿಣಿಯರಿಗೆ ವರ್ಷಕ್ಕೆ ಬೇಕಾಗುವಷ್ಟು ಹಪ್ಪಳ, ಸಂಡಿಗೆ ಮಾಡಿಡುವ ಕೆಲಸ! ಸುಲಭವಾಗಿ ಮಾಡಬಹುದಾದ ಸಬ್ಬಕ್ಕಿಯ ಸಂಡಿಗೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕೇಜಿ ಸಬ್ಬಕ್ಕಿಯನ್ನು ತೊಳೆದು ( ಸಾಧಾರಣ ಸಬ್ಬಕ್ಕಿ, ಬೆಳ್ಳಗೆ, ಗುಂಡಗೆ ಇರುವುದು. ನೈಲಾನ್ ಸಾಬೂದಾನ ಅಲ್ಲ) ರಾತ್ರಿ ಪೂರ ನೆನೆಸಿಡಿ. ಸಬ್ಬಕ್ಕಿಯ ಮೇಲೆ ಎರಡು ಇಂಚು ನೀರು ಇರುವಷ್ಟು ಹಾಕಿಡಿ.     ಬೆಳಿಗ್ಗೆ 100 ಗ್ರಾಂ ಹಸಿ ಮೆಣಸಿನಕಾಯಿ ತೊಳೆದು ಮಿಕ್ಸಿಯಲ್ಲಿ ಪುಡಿ ಮಾಡಿಡಿ. ನೆಂದ ಸಬ್ಬಕ್ಕಿಗೆ ಮೆಣಸಿನಕಾಯಿ ಪೇಸ್ಟ್, …