Showing 158 Result(s)
Kannada Tindi Tinisu ಖಾರ ತಿನಿಸುಗಳು

MANGALORE BONDA ( GODHI HITTU ) ಮಂಗಳೂರು ಬೋಂಡಾ ( ಗೋಧಿ ಹಿಟ್ಟು )

ಮಂಗಳೂರು ಬೋಂಡಾ/ಮಂಗಳೂರು ಬಜ್ಜಿ/ ಗೋಲಿ ಬಜೆ ಹೀಗೆ ಕಲೆಸಿಕೊಳ್ಳುವ ರುಚಿಯಾದ, ಸುಲಭವಾಗಿ ಮಾಡಬಹುದಾದ ತಿಂಡಿಯ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಎಲ್ಲರೂ ಮಂಗಳೂರು ಬೋಂಡಾ ಮೈದಾ ಹಿಟ್ಟಿನಲ್ಲಿ ಮಾಡುತ್ತಾರೆ. ನಾನು ಗೋಧಿ ಹಿಟ್ಟಿನ ಮಂಗಳೂರು ಬೋಂಡಾ ಮಾಡಿದ್ದೇನೆ. ಮೈದಾ ಹಿಟ್ಟನ್ನು ಹಾಕಿ ಮಾಡುವ ಬೋಂಡಾದಷ್ಟೇ ಚೆನ್ನಾಗಿ, ಗರಿ ಗರಿಯಾಗಿ ಇರುತ್ತದೆ! ಮಾಡುವ ವಿಧಾನ:- 1 ಅಳತೆ ಗೋಧಿ ಹಿಟ್ಟು, 1/4 ಅಕ್ಕಿ ಹಿಟ್ಟು, 1 ಚಮಚ ಚಿರೋಟಿ ರವೆ, ಉಪ್ಪು, 1 ಟೀ ಚಮಚ ಸಕ್ಕರೆ ಹಾಕಿ ಚೆನ್ನಾಗಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

DRY FRUITS BURFI ಡ್ರೈ ಫ್ರೂಟ್ಸ್ ಬರ್ಫಿ

ಡ್ರೈ ಫ್ರೂಟ್ಸ್ ಉಪಯೋಗಿಸಿ ನಾನು ಮಾಡಿರುವ ಸುಲಭವಾದ, ರುಚಿಯಾದ, ಆರೋಗ್ಯಕರವಾದ ಸಿಹಿಯ ರೆಸಿಪಿ ಇಲ್ಲಿದೆ! ಡ್ರೈ ಫ್ರೂಟ್ಸ್ ಬರ್ಫಿ ಮಾಡುವ ವಿಧಾನ:- 1 ಅಳತೆ ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ ನಟ್ ಅನ್ನು ( ಎಲ್ಲಾ ಸೇರಿ ಒಂದು ಅಳತೆ ) ನುಣ್ಣಗೆ ಪುಡಿ ಮಾಡಿಡಿ. ಹುರಿಯುವ ಅಗತ್ಯವಿಲ್ಲ! ಫ್ರಿಡ್ಜ್ ನಿಂದ ನೇರವಾಗಿ ತೆಗೆದು ಪುಡಿ ಮಾಡಿ.    ಬಾಣಲೆಯಲ್ಲಿ 1 ಅಳತೆ ಸಕ್ಕರೆಗೆ 1/4 ಅಳತೆ ನೀರು ಹಾಕಿ ಕುದಿಯಲು ಇಡಿ. ಸಕ್ಕರೆ ಕರಗಿ ಒಂದೆಳೆ …

Kannada Tindi Tinisu ಹಬ್ಬದ ಅಡುಗೆಗಳು

HANNUGALA KOSAMBARI ಹಣ್ಣುಗಳ ಕೋಸಂಬರಿ

ಹಣ್ಣುಗಳಲ್ಲಿ ಸಾಧಾರಣವಾಗಿ ಫ್ರೂಟ್ಸ್ ಸಲಾಡ್, ರಸಾಯನ ಮಾಡುತ್ತಾರೆ. ರುಚಿಯಾದ ಮಾಡುವ ವಿಧಾನ ಇಲ್ಲಿದೆ! ಹಣ್ಣುಗಳ ಕೋಸಂಬರಿ ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು , ಇಷ್ಟವಾಗುವ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ.     4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.      ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಚಿಕ್ಕ ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಸಾಸಿವೆ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿಡಿ. ಹೆಚ್ಚಿದ ಹಣ್ಣುಗಳಿಗೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು, …

Kannada Tindi Tinisu ಚಾಟ್ಸ್

DABELI ದಬೇಲಿ

ಗುಜರಾತ್ ಮೂಲದ ಮುಂಬಯಿಯ Steet Food ನಲ್ಲಿ ಹೆಚ್ಚು ಜನಪ್ರಿಯವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 2 ದೊಡ್ಡ ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ. 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 2 ಚಮಚ ದಾಳಿಂಬೆ ಬೀಜ ಬಿಡಿಸಿಡಿ. 2 ಚಮಚ ಕಾಯಿ ತುರಿದಿಡಿ.      ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ನಂತರ 1 ಚಮಚ ಪಾವ್ ಭಾಜಿ ಮಸಾಲ, …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

CARROT SHANKARA POLI ಕ್ಯಾರೆಟ್ ಶಂಕರ ಪೋಳಿ

ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು! ನಮ್ಮ ಮುದ್ದು ಮಕ್ಕಳು ಕ್ಯಾರೆಟ್ ಕೊಟ್ಟರೆ ತಿನ್ನುವುದಿಲ್ಲ. ಹೀಗೆ ಮಾಡಿ ಕೊಡಿ! ಇಷ್ಟ ಪಟ್ಟು ತಿನ್ನುತ್ತಾರೆ! ಮಾಡುವ ವಿಧಾನ:- 2 ಕ್ಯಾರೆಟ್ ಸಿಪ್ಪೆ ತೆಗೆದು ತುರಿದು, ನೀರು ಹಾಕದೆ ನುಣ್ಣಗೆ ರುಬ್ಬಿಡಿ. ತೀರಾ ಬೇಕೆನಿಸಿದರೆ 1 ಅಥವಾ 2 ಚಮಚ ನೀರು ಹಾಕಿ.      1/2 ಹಿಡಿ ಗೋಡಂಬಿ, 1/2 ಹಿಡಿ ಬಾದಾಮಿ ಹಸಿಯಾಗೆ ಪುಡಿ ಮಾಡಿಡಿ. Dry fruits optional! ಬೇಕಾದರೆ ಹಾಕಿಕೊಳ್ಳಬಹುದು. ನಿಮ್ಮ ರುಚಿಗೆ ತಕ್ಕ ಹಾಗೆ ಹೆಚ್ಚು …

Kannada Tindi Tinisu ಖಾರ ತಿನಿಸುಗಳು

PANEER SAMOSA ಪನ್ನೀರ್ ಸಮೋಸಾ

ಸಂಜೆ ವೇಳೆಗೆ ಎಲ್ಲರೂ ಇಷ್ಟಪಡುವ ತಿಂಡಿ! ಸಾಧಾರಣವಾಗಿ ಆಲೂಗೆಡ್ಡೆ ಮಿಶ್ರಣ ತುಂಬಿ ಮಾಡುವ ಸಮೋಸಾದ ವಿಭಿನ್ನವಾದ ರೂಪ ಈ ಪನ್ನೀರ್ ಸಮೋಸಾ! ಮಾಡುವ ವಿಧಾನ:- 100 ಗ್ರಾಂ ಬಟಾಣಿ ಬೇಯಿಸಿ ಸ್ವಲ್ಪ ಕಿವುಚಿಡಿ. 100 ಗ್ರಾಂ ಪನ್ನೀರ್ ತುರಿದಿಡಿ.    ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಆಮ್ ಚೂರ್ ಪುಡಿ, 1/2 ಚಮಚ ಚಾಟ್ ಮಸಾಲ, ಬೆಂದ ಬಟಾಣಿ ಹಾಕಿ …

Kannada Tindi Tinisu ಖಾರ ತಿನಿಸುಗಳು

HESARU BELE KODUBALE ಹೆಸರು ಕೋಡುಬಳೆ

ತೆಲುಗಿನಲ್ಲಿ ಪೆಸಲು ಕಡಿಯಲು ಎಂದು ಕರೆಯುವ ಈ ತಿಂಡಿ ಆಂಧ್ರ ಪ್ರದೇಶದ ಸಾಂಪ್ರಾದಾಯಕ ತಿಂಡಿ! ಕನ್ನಡದಲ್ಲಿ ಹೆಸರು ಕೋಡುಬಳೆ ಅಂತ ನಾನಿಟ್ಟ ಹೆಸರು! ಕೋಡುಬಳೆ ಎಂದೊಡನೆ ಸಾಧಾರಣ ಕೋಡುಬಳೆಯ ಹಾಗೆ ಗರಿ ಗರಿಯಾಗಿರುತ್ತದೆ, ವಾರವಾದರೂ ಚೆನ್ನಾಗಿರುತ್ತದೆ ಅಂತ ಅಂದುಕೊಳ್ಳಬೇಡಿ! ಆಗ ಮಾಡಿ ಆಗಲೇ ತಿನ್ನುವುದು! ಬಜ್ಜಿ, ಬೋಂಡಾ, ವಡೆಯ ಹಾಗೆ! ಮಾಡುವ ವಿಧಾನ:- ಹೆಸರು ಬೇಳೆ – 3 ಕಪ್ ಉದ್ದಿನ ಬೇಳೆ- 1/2 ಕಪ್ ಅಕ್ಕಿ – 1/2 ಕಪ್ ಈ ಮೂರನ್ನು ಒಟ್ಟಿಗೆ 4 …

Kannada Tindi Tinisu ಖಾರ ತಿನಿಸುಗಳು

BABY CORN MANCHOORIAN ಬೇಬಿ ಕಾರ್ನ್ ಮಂಚೂರಿಯನ್

ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ! ಮಾಡುವ ವಿಧಾನ:- ಬೇಬಿ ಕಾರ್ನ್ ಅನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.    ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, 1 ಚಮಚ ಖಾರದ ಪುಡಿ ಹಾಕಿ ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ, ಬೇಬಿ ಕಾರ್ನ್ ಗಳನ್ನು ಅದ್ದಿ ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.    1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 …

Kannada Tindi Tinisu ಖಾರ ತಿನಿಸುಗಳು

KHARA ELLU ಖಾರಾ ಎಳ್ಳು

” ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು ” ಎಂಬ ಗಾದೆಯಂತೆ ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಬಾಳೆ ಹಣ್ಣು, ಕಬ್ಬಿನ ತುಂಡನ್ನು ಸಂಬಂಧಿಕರು, ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ವಾಡಿಕೆ! ಈ ಬಾರಿ ಸಿಹಿ ಎಳ್ಳಿನೊಂದಿಗೆ ನೀವೇಕೆ ” ಖಾರಾ ಎಳ್ಳು ” ಕೂಡ ಹಂಚಬಾರದು!? ಏನು ಖಾರಾ ಎಳ್ಳಾ ಅಂತ ಆಶ್ಚರ್ಯ ಆಯ್ತಾ!? ಹೌದು ಖಾರಾ ಎಳ್ಳು! ಇದು ನನ್ನ ನಾದಿನಿ ಗೋದಾ ರೆಸಿಪಿ! ಹೆಚ್ಚು ಜನರಿಗೆ ಈ ವಿಧಾನ ಗೊತ್ತಿಲ್ಲದೆ ಇರಬಹುದು! ಮಾಡಿ …

Kannada Tindi Tinisu ಖಾರ ತಿನಿಸುಗಳು

HESARU UDDINA VADE ಹೆಸರು ಉದ್ದಿನ ವಡೆ

ಉದ್ದಿನ ವಡೆ ಎಲ್ಲರ ಮೆಚ್ಚಿನ ತಿಂಡಿ! ರುಚಿಕರ ಕೂಡ! ಈ ರುಚಿಯಾದ ಉದ್ದಿನ ವಡೆಯನ್ನು ಇನ್ನಷ್ಟು ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ! ನನ್ನ ಚಿಕ್ಕ ಅತ್ತೆಯಿಂದ ಕಲಿತದ್ದು! ಮಾಡುವ ವಿಧಾನ:- 1 ಲೋಟ ಉದ್ದಿನ ಬೇಳೆ, 1/2 ಲೋಟ ಹೆಸರು ಬೇಳೆ ಬೇರೆ ಬೇರೆಯಾಗಿ ತೊಳೆದು 2 ಗಂಟೆ ನೆನೆಸಿಡಿ. ಹೆಸರು ಬೇಳೆಯನ್ನು ನೀರು ಸೋರಿ ಹಾಕಿ ರುಬ್ಬದೆ ಹಾಗೇ ಇಡಿ.    ಉದ್ದಿನ ಬೇಳೆಯನ್ನು ನೀರಿನಿಂದ ತೆಗೆದು ಆದಷ್ಟೂ ನುಣ್ಣಗೆ ರುಬ್ಬಿಡಿ.   1 ಚಮಚ …