SHAHI THUKADA ಶಾಹಿ ತುಕಡಾ
ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಸಿಹಿ ತಿಂಡಿ! ಮಾಡುವ ವಿಧಾನ:- 8 ಬ್ರೆಡ್ ಸ್ಲೈಸ್ ಗಳ ಅಂಚನ್ನು ತೆಗೆದು ಮಧ್ಯದಲ್ಲಿ ತ್ರಿಕೋನಾಕಾರವಾಗಿ ಕತ್ತರಿಸಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಬ್ರೆಡ್ ಅನ್ನು ಕೆಂಪಗೆ ಕರಿದಿಡಿ. 1 ಲೋಟ ಸಕ್ಕರೆಗೆ 1/2 ಲೋಟ ನೀರು ಹಾಕಿ ಕುದಿಸಿ ಜಾಮೂನ್ ಪಾಕಕ್ಕಿಂತ ಸ್ವಲ್ಪ ಗಟ್ಟಿಯಾಗಿ ಪಾಕ ಮಾಡಿ ಬ್ರೆಡ್ ತುಂಡುಗಳನ್ನು ಅದರಲ್ಲಿ ಅದ್ದಿ 2 ಅಥವಾ 3 ನಿಮಿಷ ಸಕ್ಕರೆ ಪಾಕದಲ್ಲಿ ಬಿಟ್ಟು ತೆಗೆದಿಡಿ. ರಬ್ರಿ ಮಾಡುವ ವಿಧಾನ:- 1/2 …









